ಕೇರಳ ಚುನಾವಣೆ : 3 ಕ್ಷೇತ್ರದಲ್ಲಿ ಜೆಡಿಎಸ್‌ಗೆ ಗೆಲುವು

Posted By:
Subscribe to Oneindia Kannada

ಬೆಂಗಳೂರು, ಮೇ 19 : ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಮೂರು ಸ್ಥಾನಗಳಲ್ಲಿ ಜಯಗಳಿಸಿದೆ. ಈ ಮೂಲಕ ದೇವೇಗೌಡರಿಗೆ ಹುಟ್ಟುಹಬ್ಬದ ಉಡುಗೊರೆ ಸಿಕ್ಕಿದೆ.[ವಿಜಯೋತ್ಸಾಹದ ಚಿತ್ರಗಳು]

ಗುರುವಾರ ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಎಸ್.ಅಚ್ಯುತಾನಂದನ್ ನೇತೃತ್ವದ ಎಲ್‌ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್)ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ. ದೇವರನಾಡಲ್ಲಿ ಖಾತೆ ತೆರೆಯುವ ಮೂಲಕ ಬಿಜೆಪಿ ಐತಿಹಾಸಿಕ ಸಾಧನೆ ಮಾಡಿದೆ. [ಕೇರಳದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 1 ಸ್ಥಾನ]

deve gowda

ಜೆಡಿಎಸ್ ಅಭ್ಯರ್ಥಿಗಳು ವದಕಾರ (ಸಿ.ಕೆ.ನಾನು), ತಿರುವಲ್ಲಾ (ಮ್ಯಾಥ್ಯೂ ಟಿ.ಥಾಮಸ್) ಮತ್ತು ಚಿತ್ತೂರು (ಕೆ.ಕೃಷ್ಣನ್ ಕುಟ್ಟಿ) ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಪಕ್ಷ ಮೂರು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಕೋಲಾವಂ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ. [ಚಿತ್ರಗಳು : ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ದೇವೇಗೌಡರು]

ಶುಭಾಶಯ ಕೋರಿದ ಗೌಡರು : ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಎಸ್.ಅಚ್ಯುತಾನಂದನ್ ಅವರಿಗೆ ಪತ್ರ ಬರೆದು, ಶುಭಾಶಯ ಕೋರಿದ್ದಾರೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ
* ವದಕಾರ (ಸಿ.ಕೆ.ನಾನು) 9511 ಮತಗಳಿಂದ ಗೆಲುವು
* ತಿರುವಲ್ಲಾ (ಮ್ಯಾಥ್ಯೂ ಟಿ.ಥಾಮಸ್) 8242 ಮತಗಳಿಂದ ಗೆಲುವು
* ಚಿತ್ತೂರು (ಕೆ.ಕೃಷ್ಣನ್ ಕುಟ್ಟಿ) 2914 ಮತಗಳಿಂದ ಗೆಲುವು

kerala assembly election 2016

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Janata Dal (Secular) had won only three seats Thiruvalla, Vadakara and Chitoor in Kerala assembly election 2016.
Please Wait while comments are loading...