
ಕೇದಾರನಾಥ ಹೆಲಿಕಾಪ್ಟರ್ ಅಪಘಾತದ ಹಿಂದಿನ ದಿನ ಪೈಲಟ್ ಪತ್ನಿಗೆ ಹೇಳಿದ್ದೇನು?
ಮುಂಬೈ ಅಕ್ಟೋಬರ್ 19: ಮಂಗಳವಾರ ಉತ್ತರಾಖಂಡ್‌ದಲ್ಲಿ ಬೆಟ್ಟಕ್ಕೆ ಅಪ್ಪಳಿಸಿ ಹೆಲಿಕಾಪ್ಟರ್ ಪತನಗೊಂಡ ಬಳಿಕ ಆರು ಯಾತ್ರಿಕರೊಂದಿಗೆ ಪೈಲಟ್ ಅನಿಲ್ ಸಿಂಗ್ ಅವರು ಸಾವಿಗೀಡಾದರು. ಪೈಲಟ್ ಅನಿಲ್ ಸಿಂಗ್ ಸಾವಿಗೀಡಾಗುವ ಒಂದು ದಿನದ ಮೊದಲು ಪತ್ನಿಯೊಂದಿಗೆ ಮಾತನಾಡಿದ್ದೇ ಕೊನೆಯ ಮಾತು.
ಈ ಘಟನೆಯ ಕುರಿತು ಮಾತನಾಡುತ್ತಾ, ಕೇದಾರನಾಥ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪೈಲಟ್‌ನ ಹೆಸರು ಅನಿಲ್ ಸಿಂಗ್. ಸುಮಾರು 15 ವರ್ಷಗಳ ಕಾಲ ಅವರು ಬಹು-ಎಂಜಿನ್ ಡೌಫಿನ್ ಎನ್ -3 ವಿಮಾನವನ್ನು ಹಾರಿಸುತ್ತಿದ್ದರು. ಅವರು ಸೆಪ್ಟೆಂಬರ್ ತಿಂಗಳಲ್ಲಿ ಆರ್ಯನ್ ಏವಿಯೇಷನ್‌ಗೆ ಸೇರಿದ್ದರು. ಸುಮಾರು ಒಂದು ತಿಂಗಳ ಹಿಂದೆ, ಅವರು ಸಿಂಗಲ್ ಇಂಜಿನ್ ಬೆಲ್ 407 ಅನ್ನು ಹಾರಿಸಲು ಪ್ರಾರಂಭಿಸಿದರು. ಅವಘಡವೇಳೆ ಅನಿಲ್ ಸಿಂಗ್ ಸಹಿತ ಆರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಹವಾಮಾನ ವೈಪರೀತ್ಯದಿಂದ ಇಂತಹ ಅವಘಡಗಳು ಸಂಭವಿಸುತ್ತಿರುವುದು ಹಲವು ಬಾರಿ ಕಂಡು ಬರುತ್ತಿದೆ.
ಸಿಂಗ್ (57) ಅವರು ಮಹಾನಗರದ ಅಂಧೇರಿ ಉಪನಗರದಲ್ಲಿ ಐಷಾರಾಮಿ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಶಿರೀನ್ ಆನಂದಿತಾ ಮತ್ತು ಮಗಳು ಫಿರೋಜಾ ಸಿಂಗ್ ಅವರನ್ನು ಅಗಲಿದ್ದಾರೆ.

ಸಾಯುವ ಮುನ್ನ ಪೈಲಟ್ ಪತ್ನಿಗೆ ಹೇಳಿದ್ದೇನು?
ಆರ್ಯನ್ ಏವಿಯೇಷನ್‌ನಿಂದ ನಿರ್ವಹಿಸಲ್ಪಡುವ ಆರು ಆಸನಗಳ ಹೆಲಿಕಾಪ್ಟರ್ ಬೆಲ್ 407 (ವಿಟಿ-ಆರ್‌ಪಿಎನ್) ಹೆಲಿಕಾಪ್ಟರ್ ಕೇದಾರನಾಥ ದೇವಸ್ಥಾನದಿಂದ ಗುಪ್ತಕಾಶಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದಾಗ ಅದು ಮಬ್ಬು ಮುಸುಕಿದ ಹಾದಿ ಕಾಣದೆ ಬೆಟ್ಟಕ್ಕೆ ಅಪ್ಪಳಿಸಿತು. ಗರುಡ್ ಚಟ್ಟಿಯಲ್ಲಿರುವ ದೇವದರ್ಶಿನಿಯಲ್ಲಿ ಬೆಳಗ್ಗೆ 11.45ರ ಸುಮಾರಿಗೆ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿತು. ಈ ವೇಳೆ ಪೈಲಟ್ ಅನಿಲ್ ಸಿಂಗ್ ಬದುಕುಳಿಯಲಿಲ್ಲ. ಈ ಘಟನೆ ನಡೆದ ಹಿಂದಿನ ದಿನ ಆನಂದ್ ಸಿಂಗ್ ಕುಟುಂಬಸ್ಥರೊಂದಿಗೆ ಮಾತನಾಡಿದ್ದರು. ಅದು ಅವರ ಕೊನೆಯ ಕರೆಯಾಗಿತ್ತು. ಆಗ ಆನಂದ್ ಸಿಂಗ್ ಮಾತನಾಡಿದ್ದನ್ನು ನೆನೆದು ಪತ್ನಿ ಕಣ್ಣೀರಾಕಿದ್ದಾರೆ.

ಸಾಯುವ ಮುನ್ನ ಪೈಲಟ್ ಪತ್ನಿಗೆ ಹೇಳಿದ್ದ ಕೊನೆ ಮಾತು
"ಅವರು ಸೋಮವಾರ ನಮಗೆ ಕೊನೆಯ ಕರೆ ಮಾಡಿದ್ದರು. ಮಗಳಿಗೆ ಕೊಂಚ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಅವಳನ್ನು ನೋಡಿಕೊಳ್ಳಲು ಅವರು ನನಗೆ ಹೇಳಿದರು" ಎಂದು ಸಿನಿಮಾಗಳಿಗೆ ಸಂಭಾಷಣೆಯನ್ನು ಬರೆಯುವ ಆನಂದಿತಾ ಹೇಳಿಕೊಂಡಿದ್ದಾರೆ. "ಬೆಟ್ಟದ ರಾಜ್ಯವು ಯಾವಾಗಲೂ ಪ್ರತಿಕೂಲ ಹವಾಮಾನವನ್ನು ಹೊಂದಿರುತ್ತದೆ. ಇದು ಅಪಘಾತವಾಗಿರುವುದರಿಂದ ಯಾರ ವಿರುದ್ಧವೂ ದೂರು ನೀಡಿಲ್ಲ" ಎಂದು ಆನಂದಿತಾ ಹೇಳಿದ್ದಾರೆ.
ಮೂಲತಃ ಪೂರ್ವ ದೆಹಲಿಯ ಶಹದ್ರಾ ಪ್ರದೇಶದ ನಿವಾಸಿಯಾಗಿರುವ ಆನಂದ್ ಸಿಂಗ್ ಅವರು ಕಳೆದ 15 ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದರು. ತನ್ನ ಗಂಡನ ಅಂತ್ಯಕ್ರಿಯೆಯನ್ನು ಮಾಡಲು ನಾನು ಮತ್ತು ತನ್ನ ಮಗಳು ನವದೆಹಲಿಗೆ ತೆರಳಲಿದ್ದೇವೆ ಎಂದು ಆನಂದಿತಾ ಹೇಳಿದರು.
|
6 ಆಸನಗಳ ಹೆಲಿಕಾಪ್ಟರ್
ಏರ್‌ಕ್ರಾಫ್ಟ್ ಆ್ಯಕ್ಸಿಡೆಂಟ್ ಇನ್ವೆಸ್ಟಿಗೇಶನ್ ಬ್ಯೂರೋ (ಎಎಐಬಿ) ಮತ್ತು ಏವಿಯೇಷನ್ ರೆಗ್ಯುಲೇಟರ್ ಡಿಜಿಸಿಎ ತಂಡಗಳು ಹೆಲಿಕಾಪ್ಟರ್ ಅಪಘಾತದ ಕುರಿತು ತನಿಖೆ ನಡೆಸಲಿವೆ. ಕೆಲವು ಉಲ್ಲಂಘನೆಗಳಿಗಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಇತ್ತೀಚೆಗೆ ₹ 5 ಲಕ್ಷ ದಂಡ ವಿಧಿಸಿದೆ. DGCA ವೆಬ್‌ಸೈಟ್‌ನ ಪ್ರಕಾರ, ಕಂಪನಿಯ ಐದು ಚಾಪರ್‌ಗಳ ಫ್ಲೀಟ್‌ನಲ್ಲಿ ಇದು ಏಕೈಕ 6 ಆಸನಗಳ ಹೆಲಿಕಾಪ್ಟರ್ ಆಗಿದೆ.

ಮನೋಜ್ ಪೋಸ್ಟ್‌ಗೆ ಅಭಿಮಾನಿಗಳು ನಿರಂತರವಾಗಿ ಕಮೆಂಟ್
ಈ ಘಟನೆಯ ಬಗ್ಗೆ ಇದೀಗ ನಟ ಮನೋಜ್ ಬಾಜಪೇಯಿ ಕೂಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇದಾರನಾಥ ಅಪಘಾತದ ಬಗ್ಗೆ ಅವರು ಟ್ವೀಟ್‌ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಕೇದಾರನಾಥದಲ್ಲಿ ಹೆಲಿಕಾಪ್ಟರ್ ಅಪಘಾತದ ಬಗ್ಗೆ ಕೇಳಿ ತೀವ್ರ ದುಃಖವಾಯಿತು. ನಾನು ಸಂತ್ರಸ್ತರ ಕುಟುಂಬಗಳೊಂದಿಗೆ ಇದ್ದೇನೆ' ಎಂದು ಬರೆದಿದ್ದಾರೆ.
ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ನಿರಂತರವಾಗಿ ಕಮೆಂಟ್ ಮಾಡುತ್ತಿದ್ದಾರೆ. ಈ ಅಪಘಾತದಿಂದ ಮನೋಜ್ ಬಾಜಪೇಯಿ ಅವರು ತೀವ್ರ ದುಃಖಿತರಾಗಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪೋಸ್ಟ್ ಮಾಡುವುದು ವಿರಳವಾಗಿ ಕಂಡುಬರುತ್ತದೆ.