ಹೈದರಾಬಾದ್: ರಾಷ್ಟ್ರೀಯ ಪಕ್ಷ ಘೋಷಿಸಲಿರುವ ಕೆಸಿಆರ್‌ಗೆ ಕುಮಾರಸ್ವಾಮಿ, ರೇವಣ್ಣ ಸಾಥ್
ಹೈದರಾಬಾದ್, ಅ.05: ಬುಧವಾರ ರಾಷ್ಟ್ರೀಯ ಪಕ್ಷ ಘೋಷಣೆ ಮಾಡಲು ಹೊರಟಿರುವ ಟಿಆರ್‌ಎಸ್ ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕ ಎಚ್.ಡಿ. ರೇವಣ್ಣ ಸಾಥ್ ನೀಡಿದ್ದಾರೆ.
ಸಿಎಂ ಕೆಸಿಆರ್ ಅವರ ಆಹ್ವಾನದ ಮೇರೆಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲು ಜನತಾ ದಳ (ಎಸ್) ಮುಖ್ಯಸ್ಥ ಎಚ್.ಡಿ. ಕುಮಾರಸ್ವಾಮಿ, ಎಚ್ ಡಿ ರೇವಣ್ಣ, ಸಾ ರಾ ಮಹೇಶ್ ಸೇರಿದಂತೆ 20 ಶಾಸಕರು, ನಿಖಿಲ್ ಕುಮಾರಸ್ವಾಮಿ ಹೈದರಾಬಾದ್‌ಗೆ ತೆರಳಿದ್ದಾರೆ.
టీఆర్ఎస్ పార్టీ అధినేత, సీఎం కేసీఆర్ గారు జాతీయ పార్టీని ప్రకటించబోతున్న సందర్భంగా వారి ఆహ్వానం మేరకు ముఖ్య అతిథులుగా హాజరయ్యేందుకు కర్నాటక నుంచి వచ్చిన జనతాదళ్ (ఎస్) ముఖ్యనేత, మాజీ ముఖ్యమంత్రి హెచ్.డి. కుమారస్వామి జనతాదళ్ (ఎస్) ఎమ్మెల్యేలు, తదితర ప్రజా ప్రతినిధుల బృందం. pic.twitter.com/xFHA8nZVeG
— TRS Party (@trspartyonline) October 5, 2022
ಬುಧವಾರ ಹೈದರಾಬಾದ್‌ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ನಿರ್ಣಾಯಕ ಸಾಮಾನ್ಯ ಸಭೆಗೆ ಮುಂಚಿತವಾಗಿ, ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಜೊತೆಗೆ ಪ್ರಗತಿ ಭವನದಲ್ಲಿ ಬೆಳಗಿನ ಉಪಾಹಾರ ಸೇವಿಸಿದ್ದಾರೆ. ಈ ವೇಳೆ ದೇಶದ ಹಲವು ರೈತ ಮುಖಂಡರು ರಾಜಕೀಯ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ.

ಇನ್ನು, ಕರ್ನಾಟಕದ ಜೆಡಿಎಸ್ ನಾಯಕರ ಜೊತೆ ಜೊತೆಗೆ ವಿದುತಲೈ ಚಿರುತೈಗಲ್ ಕಚ್ಚಿ ಸಂಸ್ಥಾಪಕ ತೊಲ್ಕಪ್ಪಿಯನ್ ತಿರುಮಾವಳವನ್ ಅವರು ತಮಿಳುನಾಡಿನ ತಮ್ಮ ಬೆಂಬಲಿಗರೊಂದಿಗೆ ಸಿಎಂ ಅವರ ಅಧಿಕೃತ ನಿವಾಸಕ್ಕೆ ತಲುಪಿದ್ದಾರೆ. ಎಲ್ಲರೂ ಚಂದ್ರಶೇಖರ ರಾವ್ ಮತ್ತು ಇತರ ಟಿಆರ್ಎಸ್ ನಾಯಕರೊಂದಿಗೆ ಉಪಹಾರಕ್ಕೆ ಹಾಜರಿದ್ದರು.
ತೆಲಂಗಾಣ ಭವನದಲ್ಲಿ ಹಲವಾರು ರಾಷ್ಟ್ರೀಯ ನಾಯಕರು ಮತ್ತು ರೈತ ಸಂಘದ ಮುಖಂಡರು ಭಾಗವಹಿಸುವ ಸಾಮಾನ್ಯ ಸಭೆಯು ತೆಲಂಗಾಣ ಭವನದಲ್ಲಿ ನಡೆಯುತ್ತಿದೆ. ಆಡಳಿತ ಪಕ್ಷದ ಸಂಪೂರ್ಣ ಉನ್ನತಾಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಕೂಡ ಸಭೆಯಲ್ಲಿ ಭಾಗವಹಿಸಲು ತಿಳಿಸಲಾಗಿದೆ.

"ರಾಷ್ಟ್ರೀಯ ಪಕ್ಷ ಘೋಷಣೆ ಮಾಡಲು ಹೊರಟಿರುವ ಟಿಆರ್‌ಎಸ್ ಪಕ್ಷದ ಮುಖ್ಯಸ್ಥ ಹಾಗೂ ಸಿಎಂ ಕೆಸಿಆರ್ ಅವರ ಆಹ್ವಾನದ ಮೇರೆಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲು ಕರ್ನಾಟಕದಿಂದ ಜನತಾ ದಳ (ಎಸ್) ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜನತಾದಳ (ಎಸ್) ಶಾಸಕರು ಮತ್ತು ಇತರ ಸಾರ್ವಜನಿಕ ಪ್ರತಿನಿಧಿಗಳ ಗುಂಪು ಆಗಮಿಸಿದೆ" ಎಂದು ಟಿಆರ್‌ಎಸ್ ಪಕ್ಷ ಟ್ವೀಟ್ ಮಾಡಿದೆ.












Click it and Unblock the Notifications