LoC ದಾಟಿ 8 ತಿಂಗಳ ಮಗುವನ್ನು ಕೊಂದ ಪಾಪಿ ಪಾಕ್
ಜಮ್ಮು, ಮೇ 22: ಮನೆಯ ಪಡಸಾಲೆ ಮೇಲೆ ಬೆಚ್ಚಗೆ ಮಲಗಿದ್ದ ಎಂಟು ತಿಂಗಳ ಮಗು ಪಾಪಿ ಪಾಕಿಸ್ತಾನದ ಅಮಾನವೀಯ ಕೃತ್ಯಕ್ಕೆ ಬಲಿಯಾದ ದುರ್ಘಟನೆ ಜಮ್ಮುವಿನ ಕೆರಿ ಬಟ್ಟಾಳ್ ಎಂಬಲ್ಲಿಯ ಅಖನೂರ್ ಎಂಬಲ್ಲಿ ನಡೆದಿದೆ.
ಗಡಿನಿಯಂತ್ರಣ ರೇಖೆ ದಾಟುವ ಮೂಲಕ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ ಅಮಾಯಕ ಎಂಟು ತಿಂಗಳ ಮಗುವನ್ನು ಬಲಿತೆಗೆದುಕೊಂಡಿದೆ. ಇದು ಪಾಕಿಸ್ತಾನಿ ಸೇನೆಯ ಅತ್ಯಂತ ಹೀನ ಕೃತ್ಯವೆಂದು ಭಾರತೀಯ ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿವೆ.
ಸೋಮವಾರ ಬೆಳಗ್ಗಿನಿಂದಲೇ ಗಡಿ ನಿಯಂತ್ರಣ ರೇಖೆ ದಾಟಿ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಸೇನೆಗೆ ಭಾರತೀಯ ಸೇನೆ ಸರಿಯಾದ ಉತ್ತರ ನೀಡಿದೆ. ಆದರೆ ಈ ದಾಳಿಯಲ್ಲಿ ಅಮಾಯಕ ಮಗುವೊಂದು ಬಲಾಯಗಿರುವುದು ಈ ಭಾಗದ ಜನರಲ್ಲಿ ಆಕ್ರೋಶ ಸೃಷ್ಟಿಸಿದೆ.

ಇದಕ್ಕೂ ಮುನ್ನ ಮೇ 18 ರಂದು ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ಥಾನ ಗುಂದಿನ ದಾಳಿ ನಡೆಸಿದ ಪರಿಣಾಮ ಓರ್ವ ಬಿ ಎಸ್ ಎಫ್(ಗಡಿ ಭದ್ರತಾ ದಳ) ಸಿಬ್ಬಂದಿ ಮತ್ತು ನಾಲ್ವರು ನಾಗರಿಕರು ಹತ್ಯೆಗೊಳಗಾಗಿದ್ದರು.












Click it and Unblock the Notifications