ಮಹಾರಾಷ್ಟ್ರದಲ್ಲಿ ಕೆಎಸ್ಆರ್ ಟಿಸಿ ಬಸ್ ದುರಂತ. ಆರು ಮಂದಿ ಸಾವು

Posted By:
Subscribe to Oneindia Kannada

ಮಹಾರಾಷ್ಟ್ರ, ಡಿಸೆಂಬರ್ 23: ಮಹಾರಾಷ್ಟ್ರದ ಉಸ್ಮರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಉಸ್ಮನಾಬಾದ್ ನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಬಸ್ ನಡುವೆ ಭೀಕರ ದುರಂತ ಸಂಭವಿಸಿದ್ದು, ಚಾಲಕರು ಸೇರಿದಂತೆ ಆರು ಮಂದಿ ಸ್ಥಳದಲ್ಲಿಯೇ ದರ್ಮರಣಕ್ಕೀಡಾಗಿದ್ದಾರೆ.

ಕರ್ನಾಟಕದ ಕೆಎಸ್ಆರ್ ಟಿಸಿ ಮತ್ತು ಮಹಾರಾಷ್ಟ್ರದ ಎಮ್ಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಭೀಕರ ದುರಂತದಲ್ಲಿ ಸ್ಥಳದಲ್ಲಿಯೇ ಎರಡೂ ಬಸ್ ನ ಚಾಲಕರು ಹತರಾಗಿದ್ದಾರೆ. ಅಲ್ಲದೆ ನಾಲ್ವರು ಪ್ರಯಾಣಿಕರು ಅಸುನೀಗಿದ್ದಾರೆ. ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.[ಪಾಲೆಂ ಬಸ್ ದುರಂತಕ್ಕೆ ಟ್ರಾವೆಲ್ಸ್ ಸಂಸ್ಥೆ ಯೇ ಕಾರಣ]

Karnataka- Maharashtra bus head-on collision, 6 dead

ರಾಜ್ಯದ ಕೆಎಸ್ಆರ್ ಟಿಸಿ ಬಸ್ ಕಲಬುರಗಿಯ ಅಪ್ಜಲ್ ಪುರದ ಗಾಣಗಾಪುರಕ್ಕೆ ಆಗಮಿಸುವ ವೇಳೆ ರಾಜ್ಯ ಮತ್ತು ಮಹಾರಾಷ್ಟದ ಬಸ್ ಗಳಿಗೆ ಮುಖಾಮುಖಿಯಾದ ಹಿನ್ನೆಲೆ ಈ ಘಟನೆ ಜರುಗಿದೆ. ಅಲ್ಲದೆ ಬಸ್ ಕರ್ನಾಟಕದ ಆಳಂದ ಡಿಪೋಗೆ ಸೇರಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಉಸ್ಮರ್ಗಾ ಠಾಣಾ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಮೃತರಾದವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲದೆ ಪ್ರಕರಣವನ್ನು ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka- Maharashtra bus head-on collision, 6 traveler are dead and so many traveler injury in usmadabad, Maharashtra.
Please Wait while comments are loading...