ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯ, ಲಾಕ್ಡೌನ್ ಮುನ್ಸೂಚನೆ... HMPV Virus
ಕೊರೊನಾ ರೀತಿ ಕಂಟಕ ಮತ್ತೆ ಎದುರಾಗುತ್ತಿದೆ, ಚೀನಾದಲ್ಲಿ ವೈರಸ್ ಹಾವಳಿ ಜೋರಾಗಿ ಜನರು ನಲುಗಿ ಹೋಗಿದ್ದಾರೆ. ನೋಡ ನೋಡುತ್ತಲೇ ಚೀನಾ ವೈರಸ್ ಕೊರೊನಾ ರೀತಿಯೇ ಮತ್ತೆ ಹಾವಳಿ ಕೊಡುತ್ತಿದೆ. ನೆಗಡಿ, ಕೆಮ್ಮು, ಎದೆಯಲ್ಲಿ ಕಫ ಕಟ್ಟಿಕೊಂಡು ಜನ ಉಸಿರಾಟಕ್ಕೆ ಕೂಡ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಹೀಗಿದ್ದಾಗಲೇ, ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯ, ಲಾಕ್ಡೌನ್ ಮುನ್ಸೂಚನೆ...
ಕೊರೊನಾ ರೀತಿಯೇ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಕೂಡ ಮನುಷ್ಯರಿಗೆ ಹಲವು ರೀತಿ ಆರೋಗ್ಯ ಸಮಸ್ಯೆ ತಂದಿಡುತ್ತದೆ. ಹೀಗೆ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಬಗ್ಗೆ ಭಯದ ವಾತಾವರಣ ನಿರ್ಮಾಣ ಆಗಿದೆ. ಈಗ ವೈದ್ಯರು ಕೂಡ, ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದಾರೆ. HMPV ಕಂಡುಹಿಡಿಯಲು ಪಾಲಿಮರೇಸ್ ಚೈನ್ ರಿಯಾಕ್ಷನ್ ಅಥವಾ PCR ಟೆಸ್ಟ್ ಮಾಡಲಾಗ್ತಿದೆ. ಇದರ ಜೊತೆಗೆ, ಗಂಟಲಿನ ದ್ರಾವಣ ಪಡೆದು ವೈರಸ್ ಇರುವಿಕೆಯ ಪತ್ತೆ ಮಾಡಲಾಗುತ್ತದೆ. ಹೀಗಿದ್ದಾಗ, ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯ, ಲಾಕ್ಡೌನ್ ಮುನ್ಸೂಚನೆ....

ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯ...
ಹೌದು, ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಪ್ರಕರಣ ಕರ್ನಾಟಕದಲ್ಲಿ ಪತ್ತೆ ಆಗಿದ್ದೇ ತಡ ಮಹತ್ವದ ಘೋಷಣೆ ಆಗಿದೆ. ಈ ಪೈಕಿ HMPV ಅಥವಾ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಕೇಸ್ ಹೆಚ್ಚಾಗಿ ಕನ್ನಡ ನೆಲದಲ್ಲಿ ಹರಡದಂತೆ ತಡೆಯಲು, ಬೆಂಗಳೂರು ಸೇರಿ ಕರ್ನಾಟಕದ ಪೂರ್ತಿ ಹಲವು ನಿಯಮ ಹೇರಲು ಸಿದ್ದರಾಮಯ್ಯ ಅವರ ಸರ್ಕಾರ ಮುಂದಾಗಿದೆ. ಅದ್ರಲ್ಲೂ ಕರ್ನಾಟಕದ ಆರೋಗ್ಯ ಸಚಿವರು ಇದೀಗ ಮಾಸ್ಕ್ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಮಾಸ್ಕ್ ಯಾರಿಗೆಲ್ಲಾ ಕಡ್ಡಾಯ ಗೊತ್ತಾ?
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಅಥವಾ HMPV ಕೇಸ್ ಕರ್ನಾಟಕದಲ್ಲಿ ಕನ್ಫರ್ಮ್ ಆದ ನಂತರ ಮಹತ್ವದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿ HMPV ಲಕ್ಷಣಗಳು ಇರುವವರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡದಂತೆ ಮನವಿ ಮಾಡಿ ಆದೇಶ ನೀಡಲಾಗಿದೆ. ಇದರ ಜೊತೆಗೆ HMPV ಲಕ್ಷಣ ಇರುವವರು ಹೊರಗೆ ಓಡಾಡುವ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಕಿ ಎಂದು ತಿಳಿಸಲಾಗಿದೆ. ಈ ಮೂಲಕ HMPV ಲಕ್ಷಣ ಇರುವವರ ಪಾಲಿಗೆ ಮಾಸ್ಕ್ ಕಡ್ಡಾಯವಾಗಿದೆ. ಈ ಬಗ್ಗೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದ್ದಾರೆ.
ಒಟ್ನಲ್ಲಿ HMPV ಬಗ್ಗೆ ಕರ್ನಾಟಕ ಸರ್ಕಾರ ಕೂಡ ಗಂಭೀರವಾಗಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಆದರೆ ಯಾವುದೇ ರೀತಿ ಭಯ ಪಡದಂತೆ ಸೂಚನೆ ನೀಡಲಾಗಿದ್ದು, ಜನರು ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಅಥವಾ HMPV ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಹೀಗಿದ್ದಾಗ ಜನರು ಕೂಡ ಒಂದಷ್ಟು ಟೆನ್ಷನ್ ಆಗಿದ್ದು, ಆದರೆ ಈ ರೀತಿ ಭಯಪಡುವ ಯಾವುದೇ ಅಗತ್ಯತೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.











Click it and Unblock the Notifications