Richest MLAs In India: ಕರ್ನಾಟಕಕ್ಕೆ 1ನೇ ಸ್ಥಾನ, ನಂತರದ ಸ್ಥಾನ, ನಿಮ್ಮ ಶಾಸಕರ ಆಸ್ತಿ ವಿವರ ತಿಳಿಯಿರಿ
ನವದೆಹಲಿ, ಏಪ್ರಿಲ್ 17: ಕರ್ನಾಟಕದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಇಲ್ಲಿನ ಶಾಸಕರು ನಾಮಪತ್ರ ಸಲ್ಲಿಸುವ ಜೊತೆಗೆ ತಮ್ಮ ಆಸ್ತಿ ಎಷ್ಟಿದೆ ಎಂದು ಘೋಷಿಸುತ್ತಾರೆ. ಈ ವೇಳೆ ಅಧಿಕೃತ ಮಾಹಿತಿ ಜನರಿಗೆ ಸಿಗುತ್ತದೆ. ದೇಶದ ಶಾಸಕರ ಒಟ್ಟು ಆಸ್ತಿ ಸರಾಸರಿ ಮೌಲ್ಯ ವಿಚಾರದಲ್ಲಿ ಕರ್ನಾಟಕವು ಭಾರತದ ಇತರ ರಾಜ್ಯಗಳಿಗಿಂತಲೂ ಅಗ್ರಸ್ಥಾನದಲ್ಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಕರ್ನಾಟಕ ಚುನಾವಣೆ ನಡೆಯಲು ಒಂದು ತಿಂಗಳಿಗಿಂತಲೂ ಕಡಿಮೆ ಅವಧಿ ಇದೆ. ಮೇ 10ಕ್ಕೆ ಚುನಾವಣೆ ನಡೆದರೆ, ಮೇ 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆಗು ಮುನ್ನ ಭಾರತದ ಅನೇಕ ಶ್ರೀಮಂತ ಶಾಸಕರನ್ನು ಒಳಗೊಂಡ ರಾಜ್ಯವೆಂಬ ಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ.

ಕರ್ನಾಟಕದ ಶಾಸಕರ ಸರಾಸರಿ ಒಟ್ಟು ಆಸ್ತಿ 34.6 ಕೋಟಿ ರೂಪಾಯಿ ಆಗಿದೆ. ಇದು ದೇಶದ ಎಲ್ಲ ರಾಜ್ಯಗಳಲ್ಲಿ ಅತೀ ಹೆಚ್ಚು ಎಂದು ಹೇಳಲಾಗುತ್ತಿದ್ದು, ಹೀಗಾಗಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ತದನಂತರ ಸರಾಸರಿ 27.9 ಕೋಟಿ ರೂಪಾಯಿ ಹೊಂದಿದ ಶಾಸಕರು ಇರುವ ಆಂಧ್ರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಇನ್ನು 22.4 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಮಹಾರಾಷ್ಟ್ರ ರಾಜ್ಯದ ಶಾಸಕರಿಂದಾಗಿ ಅವರ ರಾಜ್ಯ ಮೂರನೇ ಸ್ಥಾನದಲ್ಲಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ವರದಿ
ಈ ಅಂಕಿ ಸಂಖ್ಯೆಗಳು ದೇಶದ ಪ್ರತಿ ರಾಜ್ಯಗಳಲ್ಲಿನ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಚುನಾಯಿತರಾದ ಶಾಸಕರಿಗೆ ಸಂಬಂಧಿಸಿದ ಮಾಹಿತಿ ಆಗಿದ್ದು, ಹಾಲಿ ಶಾಸಕರಿಗೆ ಸಂಬಂಧಿಸಿದ್ದಲ್ಲ. ಹೀಗೆಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್‌ನ ಶಾಸಕರ ಹಣಕಾಸು ವರದಿಯಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ದೇಶದ ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳ ರಾಜ್ಯಗಳಲ್ಲಿ ಮಾತ್ರ ಹೀಗೆ ಶ್ರೀಮಂತ ಶಾಕರನ್ನು ಕಾಣಬಹುದಾಗಿದೆ. ಹೀಗೆ ಪ್ರದೇಶವಾರು ಶ್ರೀಮಂತ ಶಾಸಕರ ಪಟ್ಟಿ ನೋಡುವುದಾದರೆ, ದೇಶದ ಪೂರ್ವ ಭಾಗದ ರಾಜ್ಯಗಲ್ಲಿ ಬಡಾ ಶಾಸಕರನ್ನು ಕಾಣಬಹುದು. ಈ ರಾಜ್ಯಗಳು ಅತ್ಯಂತ ಕಡಿಮೆ ಸರಾಸರಿ ಆಸ್ತಿ ಹೊಂದಿರು ಶಾಸಕರ ಪಟ್ಟಿಗಳಲ್ಲಿ ಸ್ಥಾನ ಕಾಯ್ದುಕೊಂಡಿವೆ.

ಉದಾಹರಣೆ ಗೆ ಹೇಳುವುದಾದರೆ ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ 25 ಕೋಟಿ ರೂಪಾಯಿ ಇದ್ದರೆ, ಪಶ್ಚಿಮ ಭಾಗದ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಶಾಸಕರ ಆಸ್ತಿ ಮೌಲ್ಯ ಸರಾಸರಿ 20 ಕೋಟಿ ರೂಪಾಯಿ ಎನ್ನಲಾಗಿದೆ.
ಪೂರ್ವ ರಾಜ್ಯಗಳಲ್ಲಿ ಬಡ ಶಾಸಕರು
ಆದರೆ ಪೂರ್ವ ಭಾರತದ ರಾಜ್ಯಗಳಾದ ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಅಥವಾ ಬಿಹಾರ ರಾಜ್ಯಗಳ ಸರಾಸರಿ ಆಸ್ತಿ ಮೌಲ್ಯ 5 ಕೋಟಿ ರೂಪಾಯಿ ದಾಟುವುದಿಲ್ಲ ಎನ್ನಲಾಗಿದೆ. ಅದೆ ರಿತಿ ಕೇರಳ, ಈಶಾನ್ಯ ರಾಜ್ಯಗಳಾದ ತ್ರಿಪುರ, ಮಣಿಪುರ, ಮಿಜೋರಾಂ ಮತ್ತು ಅಸ್ಸಾಂಗಳಲ್ಲಿ ಬಡ ಶಾಸಕರು ಇದ್ದಾರೆ ಎಂದು ವರದಿ ತಿಳಿಸಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆಗೆ ಇತರ ಪಕ್ಷಗಳ ಅಂಕಿ ಅಂಶ ಹೀಗಿದೆ. ರಾಜ್ಯ ಕಾಂಗ್ರೆಸ್ ಶಾಸಕರು ಸರಾಸರಿ 60 ಕೋಟಿ ರೂಪಾಯಿ, ಜನತಾ ದಳ (ಜಾತ್ಯತೀತ) ಶಾಸಕರ ಸರಾಸರಿ ಆಸ್ತಿ ಮೌಲ್ಯ 23.5 ಕೋಟಿ ರೂಪಾಯಿ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ಸರಾಸರಿ 17.4 ಕೋಟಿ ರೂಪಾಯಿಯ ಆಸ್ತಿ ಹೊಂದಿದ್ದಾರೆ.
ಅದೇ ರೀತಿ ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದ ಬಿಜೆಪಿ ಶಾಸಕರು ರೂ. 27 ಕೋಟಿ ಆಸ್ತಿ ಮೂಲಕ ಎರಡನೇ ಅತಿ ಹೆಚ್ಚು ಸರಾಸರಿ ಆಸ್ತಿ ಹೊಂದಿದವರಾಗಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕರು ಸರಾಸರಿ ಆಸ್ತಿ ರೂ. 22.4 ಕೋಟಿಯಷ್ಟಿದೆ ಎಂದು ಹೇಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಮರು ಆಯ್ಕೆಯಾದ ಕಾಂಗ್ರೆಸ್ ಶಾಸಕರ ಸರಾಸರಿ ಆಸ್ತಿ ಮೌಲ್ಯ 43.5 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ. ಇದು ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಇತ್ತೀಚಿನ ಸಮೀಕ್ಷೆಗಳಲ್ಲಿ 108ರಷ್ಟು ಅಧಿಕ ಎನ್ನಲಾಗುತ್ತಿದೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ಮರು ಚುನಾಯಿತ ಶಾಸಕರ ಸರಾಸರಿ ಆಸ್ತಿ ಮೌಲ್ಯ 32 ಕೋಟಿ ರೂಪಾಯಿ, ಇದು ಶೇಕಡಾ 78ರಷ್ಟು ಅಧಿಕವಾಗಿದೆ.
ಅಸ್ಸಾಂ ಬಿಜೆಪಿಯ ಮರು ಚುನಾಯಿತ ಶಾಸಕರ ಸರಾಸರಿ ಆಸ್ತಿ 2.5 ಕೋಟಿ ರೂಪಾಯಿ (ಶೇಕಡಾ 124). ಮಹಾರಾಷ್ಟ್ರದಲ್ಲಿ, ಮರು ಚುನಾಯಿತ ಬಿಜೆಪಿ ಶಾಸಕರ ಸರಾಸರಿ ಆಸ್ತಿ ಮೌಲ್ಯ 12.4 ಕೋಟಿ ರೂಪಾಯಿ (ಶೇಕಡಾ 81). ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಶಾಸಕರ ಆಸ್ತಿ 10 ಕೋಟಿ ರೂಪಾಯಿ (ಶೇಕಡಾ 123). ಶಿವಸೇನೆಯವರು 10.7 ಕೋಟಿ ರೂ. (ಶೇಕಡಾ 135). ಮರು ಚುನಾವಣೆ ಬಳಿಕ ಆಸ್ತಿ ಪ್ರಮಾಣ ತುಸು ಹೆಚ್ಚಾಗಿದೆ.
ಮರು ಚುನಾಯಿತ ಶಾಸಕರ ಆಸ್ತಿ ಮೌಲ್ಯ
ಕರ್ನಾಟಕದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಚುನಾಯಿತರಾಗಿ ನಂತರ ಬಿಜೆಪಿ ಸೇರಿದ ಹೊಸಕೋಟೆಯ ಎನ್. ನಾಗರಾಜು (ಎಂಟಿಬಿ) ಎಲ್ಲಾ ಶಾಸಕರಲ್ಲಿ ಅತ್ಯಂತ ಶ್ರೀಮಂತರಾಗಿದ್ದಾರೆ. ಬಿಜೆಪಿ ಸೇರಿದಂತೆ ನಂತರ 1,000 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ. ನಂತರ ಕೆಪಿಸಿಸಿ ಅಧ್ಯಕಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಮತ್ತು ಕರ್ನಾಟಕದಿಂದ ರೂಪಾಯಿ 840 ಕೋಟಿ. ರೂಪಾಯಿ ಹೊಂದಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಟಿಡಿಪಿಯ ನಾರಾ ಚಂದ್ರಬಾಬು ನಾಯ್ಡು 650 ಕೋಟಿ ರೂಪಾಯಿ, ಬಿಜೆಪಿಯ ಪರಾಗ್ ಶಾ ಮತ್ತು ಮಂಗಲಪ್ರಭಾತ್ ಲೋಧಾ ಅವರು ತಲಾ 400 ಕೋಟಿ ರೂಪಾಯಿ ಹೊಂದುವ ಮೂಲಕ ಮಹಾರಾಷ್ಟ್ರದ ಶ್ರೀಮಂತ ಶಾಸಕರಾಗಿದ್ದಾರೆ ಎಂದು ವರದಿ ತಿಳಿಸಿದೆ.












Click it and Unblock the Notifications