• search
For Quick Alerts
ALLOW NOTIFICATIONS  
For Daily Alerts

  ಕರ್ನಾಟಕ ಎಫೆಕ್ಟ್; ಗೋವಾ, ಬಿಹಾರ ರಾಜಕೀಯದಲ್ಲಿ ಸಂಚಲನ

  By Sachhidananda Acharya
  |

  ಪಣಜಿ/ಪಾಟ್ನಾ, ಮೇ 17: ಕರ್ನಾಟಕ ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ರಾಜಕಾರಣ ಪಕ್ಕದ ಗೋವಾ ಮತ್ತು ಬಿಹಾರದ ರಾಜಕೀಯದ ಮೇಲೂ ಪರಿಣಾಮ ಬೀರಿದೆ.

  ಕರ್ನಾಟಕದಲ್ಲಿ ಅತೀದೊಡ್ಡ ಪಕ್ಷಕ್ಕೆ ಸರಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ ಬೆನ್ನಿಗೆ ಗೋವಾದಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಬಿಹಾರದಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಆರ್.ಜೆ.ಡಿ ಸರಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಿವೆ.

  ಗೋವಾ,ಮಣಿಪುರದಲ್ಲಿ ತಾನೇ ಹೆಣೆದ ತಂತ್ರ ಕರ್ನಾಟಕ ಬಿಜೆಪಿಗೆ ಮುಳುವಾಯ್ತೇ?

  ಗೋವಾದ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 17 ಶಾಸಕರನ್ನು ಹೊಂದಿದ್ದು ಅತೀ ದೊಡ್ಡ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯಪಾಲರ ತೀರ್ಮಾನ ಉಲ್ಲೇಖಿಸಿ ನಮಗೆ ಸರಕಾರ ರಚನೆಗೆ ಅವಕಾಶ ಕೊಡಿ ಎಂದು ರಾಜ್ಯಪಾಲರ ಮುಂದೆ ಶಾಸಕರ ಪೆರೇಡ್ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.

  Karnataka effect: Now Goa Congress stakes claim to form govt

  ಇಲ್ಲಿ 13 ಶಾಸಕರನ್ನು ಹೊಂದಿರುವ ಬಿಜೆಪಿ ಎಂಜಿಪಿಯ ಮೂರು ಶಾಸಕರ ಬೆಂಬಲದೊಂದಿಗೆ ಸರಕಾರ ನಡೆಸುತ್ತಿದ್ದು, ಮನೋಹರ್ ಪರಿಕ್ಕರ್ ಗೋವಾದ ಮುಖ್ಯಮಂತ್ರಿಯಾಗಿದ್ದಾರೆ.

  ಬಿಹಾರದಲ್ಲೂ ಕರ್ನಾಟಕದ ಸದ್ದು
  ಅತ್ತ ಬಿಹಾರದಲ್ಲೂ ಕರ್ನಾಟಕ ಮಾದರಿಯಲ್ಲೇ ನಮಗೆ ಸರಕಾರ ರಚನೆಗೆ ಅವಕಾಶ ನೀಡಬೇಕು ಎಂದು ಆರ್.ಜೆ.ಡಿ ಪಕ್ಷದ ನಾಯಕ ತೇಜ್ ಪ್ರತಾಪ್ ಯಾದವ್ ಆಗ್ರಹಿಸಿದ್ದಾರೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 80 ಶಾಸಕರನ್ನು ಹೊಂದಿದ್ದು ಆರ್.ಜೆ.ಡಿ ಅತೀ ದೊಡ್ಡ ಪಕ್ಷವಾಗಿದೆ. ಆದರೆ 70 ಶಾಸಕರನ್ನು ಹೊಂದಿರುವ ಜೆಡಿಯು ಇಲ್ಲಿ ಬಿಜೆಪಿ ಬೆಂಬಲದೊಂದಿಗೆ ಸರಕಾರ ರಚಿಸುತ್ತಿದೆ.

  ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ರಾಜ್ಯಪಾಲರ ಮುಂದೆ ಪೆರೇಡ್ ನಡೆಸಿ ಸರಕಾರ ರಚನೆಗೆ ಹಕ್ಕು ಮಂಡಿಸಲು ತೇಜ್ ಪ್ರತಾಪ್ ಯಾದವ್ ಮುಂದಾಗಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  While Karnataka continues to provides twists every minute, there is one playing out in Goa. Now the Goa Congress MLAs numbering 16 would march to Raj Bhavan on Friday and stake a claim to form the government.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more