ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೀಕರ್‌ ಮೇಲೆ ವಿಶ್ವಾಸ, ಮಧ್ಯ ಪ್ರವೇಶಿಸಲು ಒಪ್ಪದ ಸುಪ್ರಿಂ

|
Google Oneindia Kannada News

ನವದೆಹಲಿ, ಜುಲೈ 23: ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ(ಜುಲೈ 22) ರಂದೇ ವಿಶ್ವಾಸಮತ ಯಾಚನೆ ಮಾಡುವಂತೆ ಆದೇಶ ನೀಡುವಂತೆ ಕೋರಿದ್ದ ಇಬ್ಬರು ಪಕ್ಷೇತರ ಶಾಸಕರ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡಿತು.

"ನಾವು ಕಾದು ನೋಡುತ್ತೆವೆ, ಸ್ಪೀಕರ್ ಮೇಲೆ ನಮಗೆ ನಂಬಿಕೆಯಿದೆ" ಎಂದು ಸಿಜೆಐ ರಂಜನ್ ಗೊಗಾಯ್ ಅವರು ಹೇಳಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.

Live Updates ಇಂದು ವಿಶ್ವಾಸಮತ ಯಾಚಿಸುವ ಭರವಸೆ ಇದೆ: ಸುಪ್ರೀಂಕೋರ್ಟ್Live Updates ಇಂದು ವಿಶ್ವಾಸಮತ ಯಾಚಿಸುವ ಭರವಸೆ ಇದೆ: ಸುಪ್ರೀಂಕೋರ್ಟ್

ಪಕ್ಷೇತರ ಶಾಸಕರಾದ ಮುಳುಬಾಗಿಲಿನ ಎಚ್.ನಾಗೇಶ್ ಮತ್ತು ರಾಣೇಬೆನ್ನೂರಿನ ಆರ್.ಶಂಕರ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿ, ವಿಶ್ವಾಸಮತ ಯಾಚನೆ ಕುರಿತು ತುರ್ತು ಅರ್ಜಿಯೊಂದನ್ನು ಹಾಕಿದ್ದರು.

ಗ್ಯಾಲರಿ: ವಿಶ್ವಾಸಮತ ವಿಳಂಬ, ಬಿಜೆಪಿ ಬೇಸರ, ಕೈ ತೆನೆ ವಾಕ್ಸಮರ

ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಅವರಿದ್ದ ನ್ಯಾಯಪೀಠವು, ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸಾಧ್ಯವಿಲ್ಲ, ಅರ್ಜಿಯನ್ನು ಕೋರಿರುವಂತೆ ತಕ್ಷಣಕ್ಕೆ ಆದೇಶ ನೀಡಲು ನಿರಾಕರಿಸಿದ್ದು, "ವಿಶ್ವಾಸಮತದ ಕುರಿತಾದ ಅರ್ಜಿಗಳನ್ನು ಈ ಹಿಂದೆಯೂ ತುರ್ತು ವಿಚಾರಣೆಗೆ ಎತ್ತಿಕೊಂಡಿರಲಿಲ್ಲ" ಎಂದಿದ್ದಾರೆ.

ಅತೃಪ್ತರಿಗೆ ಅನರ್ಹತೆ ಭೀತಿ, ವಿಪ್ ಬಗ್ಗೆ ಸ್ಪೀಕರ್ ಮಹತ್ವದ ರೂಲಿಂಗ್ಅತೃಪ್ತರಿಗೆ ಅನರ್ಹತೆ ಭೀತಿ, ವಿಪ್ ಬಗ್ಗೆ ಸ್ಪೀಕರ್ ಮಹತ್ವದ ರೂಲಿಂಗ್

ಈ ನಡುವೆ ಪತ್ರಿಕೆ ವರದಿ ಆಧಾರದಲ್ಲಿ, ಕುದುರೆ ವ್ಯಾಪಾರ ಮತ್ತು ರಾಜಕಾರಣಿಗಳ ಪಕ್ಷಾಂತರಕ್ಕೆ ಸಂಬಂಧಿಸಿದಂತೆ ವಕೀಲರಾದ ಲಿಲಿ ಥಾಮಸ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಮುಕುಲ್ ರೋಹ್ಟಗಿ ವಾದವೇನು?

ಮುಕುಲ್ ರೋಹ್ಟಗಿ ವಾದವೇನು?

ಮುಕುಲ್ ರೋಹ್ಟಗಿ ವಾದವೇನು?: ಶಾಸಕ ಆರ್ ಶಂಕರ್ ಹಾಗೂ ಎಚ್ ನಾಗೇಶ್ ಪರ ವಾದಿಸಿದ ಹಿರಿಯ ವಕೀಲ ಮುಕುಲ್, "ಕರ್ನಾಟಕದ ವಿಧಾನಸಭೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಇಂದೇ(ಜುಲೈ23) ಸಂಜೆಯೊಳಗೆ ವಿಶ್ವಾಸ ಮಯ ಯಾಚಿಸಲಿ, ಈಗಾಗಲೇ ಅವರೇ ನೀಡಿದ್ದ ಗಡುವನ್ನು ಮೀರಿದ್ದಾರೆ. ಇಂದು ಸಂಜೆ 6 ರೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸುವುದಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ಮುಂದೆ ನಿನ್ನೆ(ಜುಲೈ 22) ರಾತ್ರಿ ಹೇಳಿದ್ದಾರೆ" ಎಂದು ವಿವರಿಸಿದರು.

ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆ?ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆ?

ಅಭಿಷೇಕ್ ಮನು ಸಿಂಘ್ವಿ ವಾದ

ಅಭಿಷೇಕ್ ಮನು ಸಿಂಘ್ವಿ ವಾದ

ಅಭಿಷೇಕ್ ಮನು ಸಿಂಘ್ವಿ ವಾದ : ಕಳೆದ ನಾಲ್ಕು ದಿನಗಳಿಂದ ಸದನದಲ್ಲಿ ವಿಶ್ವಾಸಮತ ಕುರಿತಂತೆ ಚರ್ಚೆಯಾಗುತ್ತಿದೆ. ಸ್ಪೀಕರ್ ಅವರು ರಾಜೀನಾಮೆ ನೀಡಿರುವ ಶಾಸಕರಿಗೆ ನೋಟಿಸ್ ಕಳಿಸಿದ್ದಾರೆ. ಎಲ್ಲಾ ಶಾಸಕರ ವಿಚಾರಣೆಯಾದ ಬಳಿಕ ಈ ವಿಶ್ವಾಸಮತ ತೆಗೆದುಕೊಳ್ಳುವುದು ಸೂಕ್ತ. ರಾಜ್ಯಪಾಲರು ಸದನದ ಕಲಾಪದ ನಡುವೆ ಸ್ಪೀಕರ್ ಅವರಿಗೆ ಸಂದೇಶ ಕಳಿಸಿ ನಿರ್ದೇಶನ ನೀಡಿದ್ದಾರೆ. ಇದು ಅನಗತ್ಯ ಗೊಂದಲ ಸೃಷ್ಟಿಸಿತ್ತು ಎಂದು ಕಾಂಗ್ರೆಸ್ -ಜೆಡಿಎಸ್ ಸರ್ಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು? ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?

ಸರ್ಕಾರದಿಂದ ಅಧಿಕಾರ ದುರುಪಯೋಗ ಆರೋಪ

ಸರ್ಕಾರದಿಂದ ಅಧಿಕಾರ ದುರುಪಯೋಗ ಆರೋಪ

'ವಿಶ್ವಾಸಮತಯಾಚನೆ ತ್ವರಿತವಾಗಿ ಏಕೆ ನಡೆಸಬೇಕು?' ಎಂಬ ಪ್ರಶ್ನೆ ಎತ್ತಿದ ಸಿಜೆಐ ಅವರಿಗೆ ಉತ್ತರಿಸಿದ ಅತೃಪ್ತರ ಪರ ವಕೀಲ ಮುಕುಲ್, ಕೈತೆನೆ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ, ಆದರೆ, ಸರ್ಕಾರದಿಂದ ಅಧಿಕಾರ ದುರುಪಯೋಗವಾಗುತ್ತಿದೆ, ಸಾವಿರಾರು ಐಪಿಎಸ್, ಐಎಎಸ್, ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ, ಕಡತಗಳ ವಿಲೇವಾರಿ ಜೋರಾಗಿ ನಡೆಸಲಾಗಿದೆ, ಆಡಳಿತ ಯಂತ್ರ ಕುಸಿದಿದ್ದು, ಸರ್ಕಾರದ ವಿಶ್ವಾಸಮತ ಪರೀಕ್ಷೆ ಅಗತ್ಯ ಎಂದಿದ್ದಾರೆ.

"ಇಂದು ಸಂಜೆ ವೇಳೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಲಾಗುತ್ತದೆ, ಶಾಸಕರು ಸದನದಲ್ಲಿ ಹಾಜರಾಗಲು ಬಯಸಿದ್ದಾರೆ, ಹೀಗಾಗಿ, ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ಮಾಡಿ" ಎಂದು ಇಬ್ಬರು ಪಕ್ಷೇತರರ ಪರ ವಕೀಲ ಮುಕುಲ್ ರೋಹ್ಟಗಿ ವಾದಿಸಿದರು.

ಸಂಧಾನ, ಅನರ್ಹತೆ ಯಾವುದಕ್ಕೂ ಬಗ್ಗದ ಜಗ್ಗದ ರೆಬೆಲ್ ಶಾಸಕರುಸಂಧಾನ, ಅನರ್ಹತೆ ಯಾವುದಕ್ಕೂ ಬಗ್ಗದ ಜಗ್ಗದ ರೆಬೆಲ್ ಶಾಸಕರು

ಕಾಂಗ್ರೆಸ್ ಅರ್ಜಿಯಲ್ಲಿ ಏನಿದೆ?

ಕಾಂಗ್ರೆಸ್ ಅರ್ಜಿಯಲ್ಲಿ ಏನಿದೆ?

"ಜುಲೈ 17ರಂದು ಅತೃಪ್ತರ ಬಗ್ಗೆ ನೀಡಿರುವ ಮಧ್ಯಂತರ ಆದೇಶದಿಂದ ಗೊಂದಲ ಸೃಷ್ಟಿಯಾಗಿದೆ. ಕಲಾಪಕ್ಕೆ ಹಾಜರಾಗಬೇಕೇ? ಬೇಡವೇ ಎನ್ನುವುದನ್ನು ಶಾಸಕರ ವಿವೇಚನೆಗೆ ಬಿಡಲಾಗಿದೆ. ಈ ಆದೇಶ ರಾಜಕೀಯ ಪಕ್ಷಗಳ ವಿಪ್ ಅಧಿಕಾರವನ್ನು ಕಿತ್ತುಕೊಳ್ಳಲಿದೆ. ಶೆಡ್ಯೂಲ್ 102(1)ಬಿ ಅನ್ವಯ ರಾಜಕೀಯ ಪಕ್ಷಗಳಿಗೆ ವಿಪ್ ಅಧಿಕಾರವಿದೆ. ವಿಶ್ವಾಸಮತ ಸಾಬೀತು ವೇಳೆ ಶಾಸಕರಿಗೆ ವಿಪ್ ನೀಡುವುದು ಅನಿವಾರ್ಯವಾಗಿದೆ. ನೀವು ನೀಡಿರುವ ಆದೇಶ ಈ ವ್ಯಾಪ್ತಿಗೆ ಬರುತ್ತದೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು" ಎಂದು ಕೋರಲಾಗಿದೆ.

ಅತೃಪ್ತರಿಗೆ ಅನರ್ಹತೆ ಭೀತಿ, ವಿಪ್ ಬಗ್ಗೆ ಸ್ಪೀಕರ್ ಮಹತ್ವದ ರೂಲಿಂಗ್ಅತೃಪ್ತರಿಗೆ ಅನರ್ಹತೆ ಭೀತಿ, ವಿಪ್ ಬಗ್ಗೆ ಸ್ಪೀಕರ್ ಮಹತ್ವದ ರೂಲಿಂಗ್

English summary
Karnataka Crisis: Mukul Rohatgi for two MLAs seeking interim order directing floor test by 6 pm.Bench inclined to adjourn matter for tomorrow(July 24).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X