ಕಪ್ಪು ಹಣ: ಕರ್ನಾಟಕ, ಬಿಜೆಪಿಯವರದೇ ಮೇಲುಗೈ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 8: ನೋಟು ರದ್ದು ಘೋಷಣೆ ಅದ ಮೇಲೆ ಕಾನೂನು ಬಾಹಿರ ನಗದು ವ್ಯವಹಾರಗಳ ಕಾರಣದಿಂದಾಗಿ ಕರ್ನಾಟಕದ ಹೆಸರು ದೇಶದಾದ್ಯಂತ ಚಲಾವಣೆಗೆ ಬಂದಿದೆ. ಆದಾಯ ತೆರಿಗೆ ಇಲಾಖೆ ಬಹಿರಂಗ ಪಡಿಸಿದ ಮಾಹಿತಿ ಪ್ರಕಾರವೇ ಹೇಳುವುದಾದರೆ, ಲೆಕ್ಕಕ್ಕೆ ನೀಡದ ಹಣದ ಪ್ರಕರಣಗಳು ಅತಿ ಹೆಚ್ಚು ಬೆಳಕಿಗೆ ಬಂದಿರುವುದು ಬೆಂಗಳೂರಿನಲ್ಲಿ.

ಆದಾಯ ತೆರಿಗೆ ಇಲಾಖೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ 400 ಪ್ರಕರಣಗಳು ಬಯಲಿಗೆ ಬಂದಿದ್ದು, 130 ಕೋಟಿ ಹಣ ಮತ್ತು ಆಭರಣ ಬೆಳಕಿಗೆ ಬಂದಿದೆ. ಜತೆಗೆ ತೆರಿಗೆ ಕದ್ದಿದ್ದವರು ತಮ್ಮ ಬಳಿ 2,000 ಕೋಟಿ ಇರುವುದಾಗಿ ಒಪ್ಪಿಕೊಂಡಿದ್ದಾರೆ. ಹೊಸ ನೋಟಿನ ದೊಡ್ಡ ಹಗರಣ ಬೆಂಗಳೂರಿನಲ್ಲಿ ನವೆಂಬರ್ 30ರಂದು ಬಯಲಾಯಿತು.[ಪುತ್ತೂರಿನಲ್ಲಿ ಸಿಕ್ಕಿದ್ದು ದಾಖಲೆ ಇಲ್ಲದ 19 ಲಕ್ಷ, ಮೂವರು ಆರೋಪಿಗಳು]

ಸರಕಾರಿ ಅಧಿಕಾರಿಗಳ ಮೇಲಿನ ದಾಳಿಯಲ್ಲಿ 4.7 ಕೋಟಿ ರುಪಾಯಿಯಷ್ಟು ಹೊಸ 2 ಸಾವಿರ ನೋಟುಗಳು ಸಿಕ್ಕಿದ್ದವು. ಜತೆಗೆ ಏಳು ಕೆಜಿ ಚಿನ್ನ, 90 ಲಕ್ಷದಷ್ಟು ಹಳೇ ನೋಟುಗಳು ಕೂಡ ಸಿಕ್ಕಿದವು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿಸೆಂಬರ್ 1ರಂದು ತಿಳಿಸಿದ್ದರು.

ಇದರ ಹೊರತಾಗಿ ಅಧಿಕಾರಿಗಳಷ್ಟೇ ಅಲ್ಲ, ಬಿಜೆಪಿ ನಾಯಕರು ಸಹ ಹೊಸ ನೋಟುಗಳೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅಂಥ ಮೂವತ್ತಕ್ಕೂ ಹೆಚ್ಚು ಪ್ರಕರಣಗಳನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿದೆ ಮತ್ತು ಸಿಬಿಐಗೆ ಕಳಿಸಲಾಗಿದೆ. ಆ ಪೈಕಿ ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆ ವಿಭಾಗವು ಅತಿ ಹೆಚ್ಚು (18) ಪ್ರಕರಣಗಳನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಿದೆ.[ಹೈದರಾಬಾದ್ : ಐಟಿ ದಾಳಿ, 17 ಲಕ್ಷ ಅಕ್ರಮ ಹಣ ವಶ]

ಲೂಧಿಯಾನ ಮತ್ತು ಭೋಪಾಲ್ ನಲ್ಲಿ ತಲಾ ಎರಡು, ಹೈದರಾಬಾದ್ ಮತ್ತು ಪುಣೆಯಲ್ಲಿ ತಲಾ ಒಂದು ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿದೆ.

ರಾಜಸ್ತಾನದಲ್ಲಿ ಲಂಚ ಪಡೆವಾಗ ಸಿಕ್ಕಿಬಿದ್ದ

ರಾಜಸ್ತಾನದಲ್ಲಿ ಲಂಚ ಪಡೆವಾಗ ಸಿಕ್ಕಿಬಿದ್ದ

ನೋಟು ರದ್ದು ಘೋಷಣೆ ಮಾಡಿದ ಮರುದಿನವೇ ರಾಜಸ್ತಾನದ ಬಾರನ್ ಜಿಲ್ಲೆ, ಛಬ್ರಾ ಪುರಸಭೆ ಅಧ್ಯಕ್ಷೆ, ಜಿತೇಂದ್ರ ಕುಮಾರ್ ಸಾಹು ಹಾಗೂ ಆತನ ಪತ್ನಿ ಒಂದು ಲಕ್ಷ ರುಪಾಯಿ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದರು. ಒಂದು ಸಾವಿರ ರುಪಾಯಿ ಮುಖಬೆಲೆಯ ಹಳೇ ನೋಟಿನ ಮೂಲಕ ಲಂಚ ಪಡೆಯುತ್ತಿದ್ದರು. ಪಿಂಕಿ ಸಾಹು ಬಿಜೆಪಿಯವರು. ನವೆಂಬರ್ 2014ರಲ್ಲಿ ಛಬ್ರಾ ಪುರಸಭೆ ಅಧ್ಯಕ್ಷೆಯಾಗಿದ್ದರು.

ಅತ ಬಿಜೆಪಿ ಯುವ ಮುಖಂಡ

ಅತ ಬಿಜೆಪಿ ಯುವ ಮುಖಂಡ

ತಮಿಳುನಾಡು ಸೇಲಂನ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಅರುಣ್ 20.25 ಲಕ್ಷ ರುಪಾಯಿ ಜತೆಗೆ ಪೊಲೀಸರಿಗೆ ಸಿಕ್ಕಿಬಿದ್ದ. 2000 ಮುಖಬೆಲೆಯ 926 ನೋಟು, 100ರ 1530 ನೋಟು ಹಾಗೂ ಐವತ್ತು ಮುಖಬೆಲೆಯ ಒಂದು ಸಾವಿರ ನೋಟು ಸಿಕ್ಕಿತ್ತು.

ಬಂಗಾಲದಲ್ಲಿ ಸಿಕ್ಕಿದ್ದು 33 ಲಕ್ಷ

ಬಂಗಾಲದಲ್ಲಿ ಸಿಕ್ಕಿದ್ದು 33 ಲಕ್ಷ

ಪಶ್ಚಿಮ ಬಂಗಾಲದ ಬಿಜೆಪಿ ಮುಖಂಡ ಮನೀಶ್ ಶರ್ಮಾ ಬಳಿ ಪೊಲೀಸರಿಗೆ ಹೊಸ 2000 ನೋಟುಗಳ ಮೂವತ್ಮೂರು ಲಕ್ಷ ರುಪಾಯಿ ತೆಗೆದುಕೊಂಡು ಹೋಗುವಾಗ ಪೊಲೀಸರು ವಶಪಡಿಸಿಕೊಂಡರು. ಏಳು ಪಿಸ್ತೂಲು, 89 ಸುತ್ತಿನ ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಯಿತು. ಇನ್ನು ಕಾರಿನಲ್ಲಿ ಎರಡು ಸಾವಿರ ನೋಟಿನ ಹತ್ತು ಲಕ್ಷ ವಶಕ್ಕೆ ಪಡೆದರು. ಇದರ ಜತೆಗೆ 50, 100ರ ನೋಟುಗಳೂ ಇದ್ದವು.

ಮಹಾರಾಷ್ಟ್ರ ಸಚಿವರ ಬಳಿ 91.50 ಲಕ್ಷ

ಮಹಾರಾಷ್ಟ್ರ ಸಚಿವರ ಬಳಿ 91.50 ಲಕ್ಷ

ಮಹಾರಾಷ್ಟ್ರದ ಸಚಿವ ಸುಭಾಷ್ ದೇಶ್ ಮುಖ್ ರಿಂದ ನವೆಂಬರ್ 18ರಂದು 91.50 ಲಕ್ಷದ 1000, 500ರ ನೋಟುಗಳನ್ನು ವಶಪಡಿಸಿಕೊಳ್ಳಲಾಯಿತು.

ಮೂರು ಕೋಟಿ ರುಪಾಯಿ

ಮೂರು ಕೋಟಿ ರುಪಾಯಿ

ಗಾಜಿಯಾಬಾದ್ ನಲ್ಲಿ ಬಿಜೆಪಿ ಮುಖಂಡರೊಬ್ಬರಿಂದ ನವೆಂಬರ್ 9ರಂದು ಮೂರು ಕೋಟಿ ರುಪಾಯಿಗಳನ್ನು ವಶಪಡಿಸಿಕೊಳ್ಳಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka, it appears, has emerged as the biggest hotspot for illegal cash transactions in the country post the demonetisation announcement and probes by the income tax department have revealed that Bangalore reported the highest cases of undisclosed cash in new denominations.
Please Wait while comments are loading...