Karan Adani: ತಂದೆ-ತಾಯಿಯಿಂದ ಕಲಿತ ನಾಯಕತ್ವದ ಪಾಠಗಳನ್ನ ಬಿಚ್ಚಿಟ್ಟ ಕರಣ್ ಅದಾನಿ
Karan Adani: ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅದಾನಿ ಸಿಮೆಂಟ್ನ ನಿರ್ದೇಶಕರಾಗಿರುವ ಕರಣ್ ಅದಾನಿ ಅವರು, ತಮ್ಮ ಯಶಸ್ಸಿನ ಮೂಲವನ್ನು ಸ್ಮರಿಸಿದ್ದಾರೆ. ತಮ್ಮ ಬಾಲ್ಯದ ದಿನಗಳ ಬಗ್ಗೆ ಮಾತನಾಡಿದ ಅವರು, ಮನೆಯಲ್ಲಿ ಕಲಿತ ಪಾಠಗಳು, ನನ್ನ ನಾಯಕತ್ವದ ದೃಷ್ಟಿಕೋನ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಶೈಲಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವೆಂದು ತಿಳಿಸಿದ್ದಾರೆ.
ಮಾರ್ಚ್ 13ರಂದು ನವದೆಹಲಿಯಲ್ಲಿ ನಡೆದ ಲೀಡರ್ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಕರಣ್ ಅದಾನಿ ಅವರು, ತಮ್ಮ ತಂದೆಯಿಂದ ಬಂದ ಮೌಲ್ಯಗಳು ಇಂದಿಗೂ ವ್ಯವಹಾರದಲ್ಲಿ ಜವಾಬ್ದಾರಿಗಳು ಮತ್ತು ಸವಾಲುಗಳನ್ನು ಎದುರಿಸಲು ಮಾರ್ಗದರ್ಶನಕ್ಕೆ ಸಹಕಾರಿಯಾಗಿವೆ ಎಂದು ಹೇಳಿದರು. ತಮ್ಮ ತಂದೆ ಗೌತಮ್ ಅದಾನಿ ಅವರಿಂದ ತಾಳ್ಮೆ, ಶಿಸ್ತು ಹಾಗೂ ನಾಯಕನಾಗಿ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ ಗುಣಗಳನ್ನು ಕಲಿತಿದ್ದೇನೆ ಎಂದರು. ಇದೇ ವೇಳೆ ತಮ್ಮ ಬಾಲ್ಯದ ಒಂದು ಪ್ರಮುಖ ಘಟನೆಯನ್ನು ಹಂಚಿಕೊಂಡ ಅವರು, ಒಂದು ರಾತ್ರಿ ತಡವಾಗಿ ತಂದೆಯಿಂದ ಬಂದ ಫೋನ್ ಕರೆ ತಮ್ಮ ಜೀವನದ ಮೇಲೆ ಬೀರಿದ ಪ್ರಭಾವದ ಬಗ್ಗೆ ಉಲ್ಲೇಖಿಸಿದರು. ಈ ಘಟನೆಯು ತಮ್ಮ ನಾಯಕತ್ವದ ಶೈಲಿಯನ್ನು ರೂಪಿಸುವಲ್ಲಿ ದೊಡ್ಡ ಪ್ರಭಾವ ಬೀರಿದ್ದು, ಇಂದಿಗೂ ವೃತ್ತಿಪರ ಜವಾಬ್ದಾರಿಗಳನ್ನು ನಿಭಾಯಿಸಲು ಮತ್ತು ಕ್ಲಿಷ್ಟಕರ ನಿರ್ಧಾರಗಳನ್ನು ತೆಗೆದುಕೊಳ್ಳಲು ದಾರಿದೀಪವಾಗಿದೆ ಎಂದು ಅಭಿಪ್ರಾಯಪಟ್ಟರು.

ಒಂದು ಬಾರಿ ಮಧ್ಯರಾತ್ರಿ ಸುಮಾರು 1 ಗಂಟೆಯ ವೇಳೆಗೆ ತಂದೆ ಗೌತಮ್ ಅದಾನಿ ಅವರು ಕರೆ ಮಾಡಿ ನೀನು ಮಲಗಿದ್ದೀಯಾ? ಎಂದು ಕೇಳಿದರು. ಅದಕ್ಕೆ ನಾನು ಹೌದು ಮಲಗಿದ್ದೇನೆ ಎಂದು ಉತ್ತರಿಸಿದಾಗ, ನಾಯಕತ್ವ ಎಂದರೆ ಜವಾಬ್ದಾರಿ ಕರೆ ಮಾಡಿದಾಗ ಯಾವಾಗಲೂ ಲಭ್ಯವಾಗಿರುವುದೇ ಎಂದು ತಂದೆ ಹೇಳಿದ್ದರು. ಈ ಘಟನೆ ನಾಯಕತ್ವಕ್ಕೆ ಜಾಗೃತಿ ಮತ್ತು ಬದ್ಧತೆ ಅಗತ್ಯವೆಂಬ ಪಾಠವನ್ನು ತನ್ನಲ್ಲಿ ಗಟ್ಟಿಯಾಗಿ ಬಿತ್ತಿದೆ ಎಂದು ತಿಳಿಸಿದ್ದಾರೆ.
ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ಕರಣ್ ಅದಾನಿ, ತಮ್ಮ ತಂದೆ ಗೌತಮ್ ಅದಾನಿ ಅವರು ಸವಾಲುಗಳನ್ನು ಎದುರಿಸುತ್ತಿದ್ದರೂ ಭವಿಷ್ಯದ ಬಗ್ಗೆ ಗಟ್ಟಿಯಾದ ನಂಬಿಕೆಯನ್ನು ಕಾಯ್ದುಕೊಂಡಿರುವುದನ್ನು ಹಲವು ಬಾರಿ ನೋಡಿದ್ದೇನೆ. ಆ ವರ್ಷಗಳಲ್ಲಿ ಕಲಿತ ಅತ್ಯಂತ ಮಹತ್ವದ ಪಾಠವೆಂದರೆ, ಕಷ್ಟಕರ ಸಂದರ್ಭಗಳಲ್ಲಿಯೂ ದೀರ್ಘಕಾಲದ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಎಂಬುದಾಗಿದೆ ಎಂದು ಅವರು ಹೇಳಿದರು.
ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರ ಕೆಲಸದ ಒತ್ತಡ ಮತ್ತು ಶಿಸ್ತಿನ ಶೈಲಿಯ ಬಗ್ಗೆ ಜಗತ್ತಿಗೆ ತಿಳಿದಿದೆ. ಆದರೆ, ಅಂತಹ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ಅವರ ಕೆಲಸಕ್ಕೆ ಅಡ್ಡಿಪಡಿಸಲು ಅಥವಾ ಅವರ ಗಮನವನ್ನು ಸೆಳೆಯಲು ಸಾಧ್ಯವಿರುವ ಮೂವರು ವ್ಯಕ್ತಿಗಳಿದ್ದಾರೆ ಎಂದು ಕರಣ್ ಅದಾನಿ ಬಹಿರಂಗಪಡಿಸಿದ್ದಾರೆ. ಅದಾನಿ ಕುಟುಂಬದ ಪಾಲಿಗೆ ನಿಜವಾದ 'ಅಡ್ಡಿಪಡಿಸುವವರು' ಎಂದರೆ ಅವರ ಮೂವರು ಮೊಮ್ಮಕ್ಕಳು. ಎಷ್ಟೇ ಗಂಭೀರ ಸಭೆ ನಡೆಯುತ್ತಿರಲಿ, ಎಷ್ಟೇ ಮುಖ್ಯವಾದ ಚರ್ಚೆ ನಡೆಯುತ್ತಿರಲಿ, ಈ ಪುಟ್ಟ ಮೊಮ್ಮಕ್ಕಳು ಕೋಣೆಗೆ ಪ್ರವೇಶಿಸುತ್ತಿದ್ದಂತೆಯೇ ತಂದೆ ಗೌತಮ್ ಅದಾನಿ ಅವರ ಆ ಸಭೆಗೆ ವಿರಾಮ ಬೀಳುತ್ತದೆ ಎಂದು ಅವರು ನಗುತ್ತಾ ಹೇಳಿದರು.
ತಮ್ಮ ತಾಯಿ ಪ್ರೀತಿ ಅದಾನಿ ಅವರ ಸಾಮಾಜಿಕ ಬದ್ಧತೆಯು ತಮ್ಮ ವ್ಯಕ್ತಿತ್ವದ ಮೇಲೆ ಬೀರಿದ ಪ್ರಭಾವವನ್ನು ಸ್ಮರಿಸಿಕೊಂಡರು. ಪ್ರೀತಿ ಅದಾನಿ ಅವರು 'ಅದಾನಿ ಫೌಂಡೇಶನ್' ಮೂಲಕ ಶಿಕ್ಷಣ, ಆರೋಗ್ಯ ಮತ್ತು ಸ್ಥಿರ ಜೀವನೋಪಾಯದ ಕ್ಷೇತ್ರಗಳಲ್ಲಿ ದೇಶಾದ್ಯಂತ ಕೆಲಸ ಮಾಡುತ್ತಿರುವುದನ್ನು ಹತ್ತಿರದಿಂದ ಗಮನಿಸಿದ್ದೇನೆ. ಇದು ನಾಯಕತ್ವವು ಕೇವಲ ವ್ಯವಹಾರದ ಯಶಸ್ಸಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ನನಗೆ ಅರ್ಥೈಸಿಕೊಟ್ಟಿತು. ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ವೃದ್ಧಿ ಮಾತ್ರವಲ್ಲ, ಅದು ಜನರು ಮತ್ತು ಸಮಾಜದ ಜೀವನದಲ್ಲಿ ಅರ್ಥಪೂರ್ಣ ಪರಿಣಾಮ ಉಂಟುಮಾಡುವಂತಿರಬೇಕು ಎಂಬ ಪಾಠವೂ ಅದರಿಂದ ನನಗೆ ಸಿಕ್ಕಿತು ಎಂದು ತಿಳಿಸಿದ್ದಾರೆ.
ತಮ್ಮ ಇಬ್ಬರು ಪೋಷಕರ ಪ್ರಭಾವವು ನಾಯಕತ್ವದ ಬಗ್ಗೆ ಸಮತೋಲನದ ದೃಷ್ಟಿಕೋನವನ್ನು ರೂಪಿಸಲು ನೆರವಾಗಿದೆ. ತಂದೆ ಗೌತಮ್ ಅದಾನಿ ದೊಡ್ಡ ಮಟ್ಟದಲ್ಲಿ ವ್ಯವಹಾರಗಳನ್ನು ನಿಭಾಯಿಸುವ ಆತ್ಮವಿಶ್ವಾಸವನ್ನು ನೀಡಿದರೆ, ತಾಯಿ ಪ್ರೀತಿ ಅದಾನಿ ಅವರು ಸಹಾನುಭೂತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ತಿಳಿಸಿದ್ದಾರೆ ಎಂದು ಕರಣ್ ಹೇಳಿದ್ದಾರೆ.
ಅದಾನಿ ಗ್ರೂಪ್ ಬಂದರುಗಳು, ಲಾಜಿಸ್ಟಿಕ್ಸ್, ಇಂಧನ, ವಿಮಾನ ನಿಲ್ದಾಣಗಳು ಮತ್ತು ವಿವಿಧ ವಸ್ತುಗಳ ಕ್ಷೇತ್ರಗಳಲ್ಲಿ ತನ್ನ ವಿಸ್ತರಣೆಯನ್ನು ಮುಂದುವರಿಸುತ್ತಿರುವಾಗಲೂ, ಸಂಸ್ಥೆ ತನ್ನ ಮೂಲ ಮೌಲ್ಯಗಳನ್ನೇ ಮಾರ್ಗದರ್ಶಕವಾಗಿಟ್ಟುಕೊಂಡಿದೆ.
ಬೆಳವಣಿಗೆಗೆ ವೇಗ ಮತ್ತು ವ್ಯಾಪ್ತಿ ಮುಖ್ಯವಾದರೂ, ದೀರ್ಘಕಾಲಿಕ ಸಂಸ್ಥೆಗಳನ್ನು ನಿರ್ಮಿಸಲು ಸಹಾನುಭೂತಿ ಮತ್ತು ಹೊಣೆಗಾರಿಕೆಯೂ ಸಮಾನವಾಗಿ ಅಗತ್ಯವೆಂದು ಅವರು ಹೇಳಿದ್ದಾರೆ.
ನನ್ನ ಪೋಷಕರಿಂದ ನನಗೆ ದೊರೆತ ಅತ್ಯಮೂಲ್ಯವಾದ ಉತ್ತರಾಧಿಕಾರವೆಂದರೆ ಕೇವಲ ಅವಕಾಶಗಳಲ್ಲ, ಬದಲಾಗಿ ವಿಷಯಗಳನ್ನು ನೋಡುವ ದೃಷ್ಟಿಕೋನ. ವ್ಯವಹಾರಗಳು ಆಸ್ತಿಗಳನ್ನು ನಿರ್ಮಿಸಬಹುದು, ಆದರೆ ನೈತಿಕ ಮೌಲ್ಯಗಳೇ ಒಂದು ಸಂಸ್ಥೆಯನ್ನು ದೀರ್ಘಕಾಲಿಕವಾಗಿ ಉಳಿಯುವಂತೆ ಮತ್ತು ಬೆಳೆಯುವಂತೆ ಮಾಡುತ್ತವೆ ಎಂದು ಅವರು ಒತ್ತಿಹೇಳಿದರು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications