ಕಾಂಜಾವಾಲಾ ಅಪಘಾತ: 'ಸ್ಕೂಟಿಗೆ ಡಿಕ್ಕಿ ಹೊಡೆದು ಯು-ಟರ್ನ್ ತೆಗೆದುಕೊಂಡ ಕಾರು'
ದೆಹಲಿ ಜನವರಿ 2: ದೆಹಲಿಯ ಕಂಝಾವಾಲಾ ಅಪಘಾತದ ಮತ್ತೊಂದು ಸಿಸಿಟಿವಿ ವಿಡಿಯೋ ಹೊರಬಿದ್ದಿದೆ. ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಕಾರು ಯು-ಟರ್ನ್ ತೆಗೆದುಕೊಂಡಿರುವುದು ಈ ಹೊಸ ಸಿಸಿಟಿವಿ ವಿಡಿಯೋದಲ್ಲಿ ಕಂಡುಬಂದಿದೆ. ಪ್ರತ್ಯಕ್ಷದರ್ಶಿ ನೀಡಿರುವ ಸಾಕ್ಷಿ ಸತ್ಯ ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಸ್ಪಷ್ಟವಾಗಿದೆ. ವಾಸ್ತವವಾಗಿ, ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಕಾರು ಯು-ಟರ್ನ್ ತೆಗೆದುಕೊಂಡಿದೆ ಎಂದು ಕಾಂಜಾವಾಲಾ ಅಪಘಾತದ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರು ಮತ್ತು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂಜಾನೆ 3.34ರ ದೃಶ್ಯಾವಳಿ ಬಹಿರಂಗಗೊಂಡಿದ್ದು ಶವ ಪತ್ತೆಯಾದ ಸ್ಥಳದಲ್ಲಿ ಕಾರು ಹಿಂತಿರುಗುವುದನ್ನು ದೃಶ್ಯಾವಳಿಗಳು ತೋರಿಸುತ್ತವೆ.
20 ವರ್ಷದ ಅಂಜಲಿ ಜನವರಿ 1 ರಂದು ಮುಂಜಾನೆ 3 ಗಂಟೆಯ ಸುಮಾರಿಗೆ ತನ್ನ ಸ್ಕೂಟಿಯಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಕಾರು ಆಕೆಗೆ ಡಿಕ್ಕಿ ಹೊಡೆದಿದೆ. ನಂತರ ಸುಲ್ತಾನ್‌ಪುರಿಯಿಂದ ದೆಹಲಿಯ ಕಾಂಝಾವಾಲಾಗೆ 7-12 ಕಿಮೀ ಎಳೆದೊಯ್ದಿದೆ. ಇದರಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ.

ಹೊಸ ವಿಡಿಯೋ ಬಹಿರಂಗ
ಹೊಸ ಸಿಸಿಟಿವಿ ದೃಶ್ಯಗಳು ಬೆಳಗಿನ ಜಾವ 3.34 ರ ಸಮಯದ್ದಾಗಿದೆ. ಹೊಸ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಾರುತಿ ಬಲೆನೊ ಕಾರು ಪಶ್ಚಿಮ ದೆಹಲಿಯ ಕಂಝಾವಾಲಾದ ರಸ್ತೆಯಲ್ಲಿ ಯು-ಟರ್ನ್ ತೆಗೆದುಕೊಳ್ಳುತ್ತದೆ. ಅಲ್ಲಿನ ಪ್ರತ್ಯಕ್ಷದರ್ಶಿ ದೀಪಕ್ ದಹಿಯಾ ಅವರು ಇದನ್ನು ವೀಕ್ಷಿಸಿದ್ದಾರೆ. ದೀಪಕ್ ಮಿಠಾಯಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಕಾರು ಯು-ಟರ್ನ್ ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ ಎಂದು ದೀಪಕ್ ದಹಿಯಾ ಹೇಳಿದ್ದಾರೆ. ಮುಂಜಾನೆ 3.34 ಕ್ಕೆ ದಾಖಲಾಗಿರುವ ದೃಶ್ಯಾವಳಿಗಳಲ್ಲಿ ಶವ ಪತ್ತೆಯಾಗಿದೆ. ಶವ ಪತ್ತೆಯಾದ ಸ್ಥಳಕ್ಕೆ ಕಾರು ಹಿಂತಿರುಗುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದು. ವಿಡಿಯೋದಲ್ಲಿ ಕಾರಿನ ಕೆಳಗೆ ಮೃತ ದೇಹವು ಸ್ಪಷ್ಟವಾಗಿ ಗೋಚರಿಸುತ್ತದೆ.

ಪ್ರತ್ಯಕ್ಷದರ್ಶಿ ಹೇಳುವುದೇನು?
ಕಾರು ಡಿಕ್ಕಿ ಹೊಡೆದ ಬಳಿಕ ಅಂಜಲಿ ಸಾವನ್ನಪ್ಪಿದ್ದಾಳೆ. ಆಕೆಯ ಶವವನ್ನು ಕಾರು ಚಾಲಕ 18 ರಿಂದ 20 ಕಿಲೋಮೀಟರ್ ವರೆಗೆ ಎಳೆದೊಯ್ದು ಸುಮಾರು ಒಂದೂವರೆ ಗಂಟೆಗಳ ಕಾಲ ತಿರುಗಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿ ದೀಪಕ್ ದಹಿಯಾ ಹೇಳಿದ್ದಾರೆ. ದೀಪಿಕ್ ದಹಿಯಾ ಸುದ್ದಿ ಸಂಸ್ಥೆ ANI ಗೆ ಮಾತನಾಡಿ, "ಅದು ಬೆಳಿಗ್ಗೆ 3:20 ಆಗಿತ್ತು. ನಾನು ಅಂಗಡಿಯ ಹೊರಗೆ ನಿಂತಿದ್ದಾಗ 100 ಮೀಟರ್ ದೂರದಲ್ಲಿ ವಾಹನದಿಂದ ದೊಡ್ಡ ಶಬ್ದ ಕೇಳಿಸಿತು. ಮೊದಮೊದಲು ಟೈರ್ ಒಡೆದಿದೆ ಎಂದುಕೊಂಡಿದ್ದೆ. ಕಾರು ಮುಂದೆ ಹೋಗುತ್ತಿದ್ದಂತೆ, ದೇಹವನ್ನು ಎಳೆದುಕೊಂಡು ಹೋಗುವುದನ್ನು ನಾನು ನೋಡಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದೆ'' ಎಂದಿದ್ದಾರೆ.

ಕಾರನ್ನು ಹಿಂಬಾಲಿಸಿದ ಪ್ರತ್ಯಕ್ಷದರ್ಶಿ
ಆರೋಪಿಗಳು ಒಂದೇ ರಸ್ತೆಯಲ್ಲಿ ಪದೇ ಪದೇ ಯು-ಟರ್ನ್ ಪಡೆದು ವಾಹನ ಚಲಾಯಿಸುತ್ತಿದ್ದರು ಎಂದು ದಹಿಯಾ ಹೇಳಿದ್ದರು. ನಾನು ಹಲವು ಬಾರಿ ಅವರನ್ನು ತಡೆಯಲು ಯತ್ನಿಸಿದರೂ ವಾಹನ ನಿಲ್ಲಿಸದೆ ಸುಮಾರು ಒಂದೂವರೆ ಗಂಟೆಗಳ ಕಾಲ ಯುವತಿಯ ಶವವನ್ನು ಸುಮಾರು 20 ಕಿ.ಮೀ. ಆರೋಪಿಗಳು ಎಳೆದೊಯ್ದಿದ್ದಾರೆ. ದೀಪಿಕ್ ದಹಿಯಾ ತನ್ನ ಮೋಟಾರ್ ಸೈಕಲ್‌ನಲ್ಲಿ ಕಾರನ್ನು ಹಿಂಬಾಲಿಸಿದ್ದಾರೆ. ಜೊತೆಗೆ ಪೊಲೀಸರೊಂದಿಗೆ ಸಂಪರ್ಕಿಸಿದ್ದಾರೆ. ಕಾರಿನಿಂದ ಶವ ಬಿದ್ದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೀಪಿಕ್ ದಹಿಯಾ ಆರೋಪಿಸಿದ್ದಾರೆ.
|
ನ್ಯಾಯಕ್ಕಾಗಿ ಕುಟುಂಬಸ್ಥರ ಪ್ರತಿಭಟನೆ
ದಹಿಯಾ ಅವರು, "ಇದು ಕೇವಲ ಅಪಘಾತವಲ್ಲ" ಎಂದು ಹೇಳಿದರು. ಪೊಲೀಸರು ಈ ಪ್ರಕರಣದಲ್ಲಿ ಕಾರಿನಲ್ಲಿದ್ದ ಎಲ್ಲಾ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೊಸ ವರ್ಷದ ಪಾರ್ಟಿ ಮೋಜಿನಲ್ಲಿದ್ದ ಯುವಕರಿಗೆ ಘಟನೆ ನಡೆದ ಬಗ್ಗೆ ಪರಿವಿಲ್ಲ ಎಂದು ಹೇಳಿದ್ದಾರೆಮದು ತಿಳಿದು ಬಂದಿದೆ. ಹಾಡು ಪ್ಲೇ ಆಗುತ್ತಿತ್ತು. ಆದ್ದರಿಂದ ಅವರು ಶವವನ್ನು ನೋಡಲಿಲ್ಲ. ಬಳಿಕ ತಿಳಿದ ಕೂಡಲೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ನ್ಯಾಯಕ್ಕಾಗಿ ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದು, ಇದೊಂದು ಉದ್ದೇಶ ಪೂರ್ವಕ ಘಟನೆ ಎಂದು ಆರೋಪಿಸಿದ್ದಾರೆ.












Click it and Unblock the Notifications