ಕಂಗನಾ, ರಾಜಮೌಳಿಗೆ ವರ್ಷದ ಭಾರತೀಯರು ಪ್ರಶಸ್ತಿ

Posted By:
Subscribe to Oneindia Kannada

ನವದೆಹಲಿ, ಜೂನ್ 10 : ಬಾಹುಬಲಿ ಚಿತ್ರದ ಮೂಲಕ ದೇಶದಲ್ಲಿ ಸಂಚಲನ ಮೂಡಿಸಿದ ಎಸ್ಎಸ್ ರಾಜಮೌಳಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್ ಅವರಿಗೆ ಸಿಎನ್ಎನ್ ನ್ಯೂಸ್ 18 'ಇಂಡಿಯನ್ ಆಫ್ ದಿ ಇಯರ್' 2015 ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ಹಿರಿಯ ನ್ಯಾಯವಾದಿಗಳಾದ ಸೋಲಿ ಸೊರಾಬ್ಜಿ, ಹರೀಶ್ ಸಾಳ್ವೆ, ಕುನಾಲ್ ಬಾಹ್ಲ್, ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ನಟ ಮೊಹಲ್ ಲಾಲ್, ದೀಪಕ್ ಪರೇಖ್, ಕಿರಣ್ ಕಾರ್ಣಿಕ್ ಅವರು ಆಯ್ಕೆ ಸಮಿತಿ ಜ್ಯೂರಿ ಸದಸ್ಯರಾಗಿದ್ದಾರೆ.

Kangana Ranaut, Rajamouli Honoured With Indian of the Year Award

2015ರಲ್ಲಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಬರೆದು 600 ಕೋಟಿ ರು ಗೂ ಅಧಿಕ ಮೊತ್ತ ಗಳಿಸಿದ ಬಾಹುಬಲಿ ಚಿತ್ರದ ಗೆಲುವು ಜನತೆಯ ಗೆಲುವು, ಕೆಮರಾ ಹಿಂದೆ ಗಂಟೆಗಟ್ಟಲೇ ಕಾರ್ಯ ನಿರ್ವಹಿಸಬಲ್ಲೆ, ಮುಂದೆ ನಿಂತು ಹೆಚ್ಚು ಮಾತಾನಾಡಲಾರೆ ಎಂದು ರಾಜಮೌಳಿ ಹೇಳಿದರು.

ರಾಜಮೌಳಿ ಅವರನ್ನು ವಿಮರ್ಶಕ ರಾಜೀವ್ ಮಸಂದ್ ಮಾತನಾಡಿಸಿ, 'ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರಿಸಿ ಎಂದು ಕೇಳಿಕೊಂಡರು.

ಬಾಲಿವುಡ್ ನ ಕ್ವೀನ್ ಕಂಗನಾ ಅವರು ತನು ವೆಡ್ಸ್ ಮನು ರಿಟರ್ನ್ಸ್ ಯಶಸ್ಸಿನ ನಂತರ ಈ ಪ್ರಶಸ್ತಿ ಸಿಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

-
-
-
-
-
-
-
ಸಿಎನ್ಎನ್ ನ್ಯೂಸ್ 18 ವರ್ಷದ ಭಾರತೀಯರು ಪ್ರಶಸ್ತಿ

ಸಿಎನ್ಎನ್ ನ್ಯೂಸ್ 18 ವರ್ಷದ ಭಾರತೀಯರು ಪ್ರಶಸ್ತಿ

-
-
-
-

ನಟ ರಣವೀರ್ ಸಿಂಗ್, ಹಾಕಿ ಇಂಡಿಯಾದ ಒಲಿಂಪಿಕ್ ತಂಡದ ಬಲ್ಬೀರ್ ಸಿಂಗ್, ಟೆನಿಸ್ ತಾರೆ ಲಿಯಾಂಡರ್ ಪೇಸ್, ಸಾನಿಯಾ ಮಿರ್ಜಾ, ಸುನಾಮಿಗೆ ಎದುರಾಗಿ ನಿಂತ ಚೆನ್ನೈ ಜನತೆ, ಬಂಧನ್ ವಾಣಿಜ್ಯ ಸೇವೆಗೆ ಪ್ರಶಸ್ತಿ ನೀಡಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Baahubali: The Beginning' director SS Rajamouli and National Award winning actress Kangana on Thursday were felicitated with the CNN-News18 'Indian of the Year' 2015 award by Finance Minister Arun Jaitley for their contribution to the field of cinema.
Please Wait while comments are loading...