Stories Of Strength : ನೆಗೆಟಿವ್ ಬಂತೆಂದು ಎಚ್ಚರ ತಪ್ಪದಿರಿ ಎಂದ ಕಂಗನಾ

ಬಾಲಿವುಡ್ ನಟಿ ಕಂಗನಾ ರನೌತ್ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಕೊರೊನಾವೈರಸ್‌ ವಿರುದ್ಧದ ತಮ್ಮ ಹೋರಾಟದ ಹಾದಿಯ ಬಗ್ಗೆ ಹಂಚಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ ಅಭಿಮಾನಿಗಳಲ್ಲಿಯೂ ತಮ್ಮ ಅನುಭವವನ್ನು ಹಂಚಿಕೊಳ್ಳುವಂತೆ ಕಂಗನಾ ಮನವಿ ಮಾಡಿದ್ದಾರೆ.

ಕಳೆದ ತಿಂಗಳು ಕೊರೊನಾ ವೈರಸ್‌ಗೆ ತುತ್ತಾಗಿದ್ದ ಕಂಗನಾ ಕೊರೊನಾವೈರಸ್‌ನಿಂದ ಚೇತರಿಸಿಕೊಂಡ ನಂತರ ಉಂಟಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೊರೊನಾವೈರಸ್‌ ನೆಗೆಟಿವ್ ವರದಿ ಬಂದ ಬಳಿಕ ಎಚ್ಚರ ತಪ್ಪದಂತೆಯೂ ಮನವಿ ಮಾಡಿದ್ದಾರೆ.

ತನ್ನ ಇತ್ತೀಚಿನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಕಂಗನಾ ಈ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. "ನಾನು ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ನಂತರ ಉಂಟಾದ ಅನುಭವವಗಳ ಬಗ್ಗೆ ಇಲ್ಲಿ ಮಾತನಾಡುತ್ತೇನೆ. ಈ ಅವಧಿಯಲ್ಲಿ ನಾನು ಆಘಾತಕಾರಿ ಸನ್ನಿವೇಶಗಳನ್ನು ಎದುರಿಸಿದೆ. ಬೇರೆ ಯಾವುದೇ ಅನಾರೋಗ್ಯಕ್ಕೆ ಒಳಗಾಗಿ ಚೇತರಿಸಲು ಆರಂಭಿಸಿದರೆ ನಂತರ ಅದು ನಿರಂತರವಾಗಿ ಚೇತರಿಕೆ ಕಾಣುತ್ತಾ ಸಾಗುವುದನ್ನು ನಾನು ಕಂಡಿದ್ದೇನೆ. ಆದರೆ ಕೊರೊನಾವೈರಸ್‌ ವಿಚಾರದಲ್ಲಿ ಅದು ನಕಲಿ ಚೇತರಿಕೆ" ಎಂದಿದ್ದಾರೆ.

Kangana opens up about her COVID-19 experience and warns against fake sense of recovery

"ಕೊರೊನಾ ನೆಗೆಟಿವ್ ವರದಿ ಬಂದ ಬಳಿಕ ನಾನು ಹಿಂದಿನ ರೀತಿ ಚಟುವಟಿಕೆ ಆರಂಭಿಸಬಹುದು, ವರ್ಕ್‌ಔಟ್, ಶೂಟಿಂಗ್‌ನಲ್ಲಿ ಭಾಗಿಯಾಗಬಹುದು ಎಂದು ಭಾವಿಸಿದೆ. ಆದರೆ ಈ ಚಟುವಟಿಕೆಗಳಲ್ಲಿ ನಾನು ಭಾಗಿಯಾಗಲು ಆರಂಭಿಸಿದ ನಂತರ ನನ್ನ ಆರೋಗ್ಯ ಉತ್ತಮವಾಗಿಲ್ಲ ಎಂಬ ಅರಿವಾಯಿತು. ಈ ಸಂದರ್ಭದಲ್ಲಿ ನಾನು ಹಾಸಿಗೆಯನ್ನೂ ಹಿಡಿಯಬೇಕಾಯಿತು" ಎಂದು ಹೇಳಿದ್ದಾರೆ ಕಂಗನಾ.

"ಇದು ಕೇವಲ ಒಂದು ಬಾರಿಯಲ್ಲ ಈ ಅವಧಿಯಲ್ಲಿ ನಾನು ನಾಲ್ಕರಿಂದ ಐದು ಬಾರಿ ಈ ರೀತಿಯ ಅನುಭವಕ್ಕೆ ಒಳಗಾಗಿದ್ದೇನೆ. ನಾನು ಕೊರೊನಾ ವೈರಸ್ ಪರೀಕ್ಷೆ ನೆಗೆಟಿವ್ ಬಂದು ನಾಳೆಗೆ 14 ದಿನಗಳು ಆಗಲಿದೆ" ಎಂದು ಹೇಳಿರುವ ಕಂಗನಾ ಈ ಕೊರೊನಾವೈರಸ್‌ನಿಂದ ಚೇತರಿಕೆ ಕಂಡ ನಂತರವೂ ವಿಶ್ರಾಂತಿಯ ಅಗತ್ಯವಿದೆ ಎಂದು ವಿವರಿಸಿದ್ದಾರೆ.

ಕೊರೊನಾವೈರಸ್‌ನ ಪರಿಣಾಮಗಳು ಚೇತರಿಕೆ ಕಂಡ ನಂತರವೂ ಬಾಧಿಸಬಹುದು. ಉಸಿರಾಟದ ಸಮಸ್ಯೆ, ಹೃದಯಾಘಾತ, ಅಂಗಾಂಗಗಳ ವೈಫಲ್ಯ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳು ಕಾಡಬಹುದು ಎಂದು ಹೇಳಿರುವ ಕಂಗನಾ ರನೌತ್ ಈ ವೈರಸ್‌ಅನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಹೇಳಿದ್ದಾರೆ. ಅಗತ್ಯ ಪ್ರಮಾಣದಲ್ಲಿ ವಿಶ್ರಾಂತಿಯನ್ನು ಪಡೆಯಿರಿ. ಇಲ್ಲವಾದರೆ ಪರಿಸ್ಥಿತಿ ಕೆಟ್ಟದಾಗಬಹುದು ಎಂದು ಅಭಿಮಾನಿಗಳಿಗೆ ಕಂಗನಾ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+