ಐಪಿಎಸ್ ಸಿಂಗಂನಿಂದ ಬಿಜೆಪಿ ನಾಯಕನ ತನಕ: ಅಣ್ಣಾಮಲೈ ಕಥೆ
ಕರ್ನಾಟಕದಲ್ಲಿ ಕೆ.ಅಣ್ಣಾಮಲೈ ಐಪಿಎಸ್ ಅಧಿಕಾರಿಯಾಗಿ ಸಿಂಗಂ ಅಂತಲೇ ಹೆಸರಾಗಿದ್ದವರು, ಖಾಕಿ ಬಿಟ್ಟು ಕೆ.ಅಣ್ಣಾಮಲೈ ರಾಜಕೀಯಕ್ಕೆ ಬಂದ ಮೇಲೆ ಅವರ ಹೊಸ ಜೀವನ ಶುರುವಾಯಿತು ಅಂದುಕೊಡರು. ಆದರೆ, ಬಿಜೆಪಿ ತಮಿಳುನಾಡಿನ ರಾಜಾದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವಂತಹ ಪರಿಸ್ಥಿತಿ ಬಂತು. ಪಕ್ಷ ಕೊಟ್ಟಿರುವ ಜವಾಬ್ದಾರಿಯಿಂದ ಇತ್ತೀಚಿಗೆ ಅವರೇ ದೂರ ಸರಿಯುವ ನಿರ್ಧಾರವನ್ನು ಮಾಡಿದರು.
ಕೆ.ಅಣ್ಣಾಮಲೈ ಹಿನ್ನೆಲೆ:
ಜನನ: ಕೆ.ಅಣ್ಣಾಮಲೈ ಅವರು 1984ರ ಜೂನ್ 4ರಂದು ತಮಿಳುನಾಡಿನ ಕರೂರು ಜಿಲ್ಲೆಯ ರೈತ ಕುಟುಂಬದಲ್ಲಿ ಜನಿಸಿದರು.
ವಿದ್ಯಾಭ್ಯಾಸ: ಕೊಯಮತ್ತೂರಿನ ಪಿಎಸ್‌ಜೆ ಕಾಲೇಜ್ ಆಫ್ ಟೆಕ್ನಾಲಜಿ ಮತ್ತು ಲಕ್ನೋದ ಐಐಎಂನಲ್ಲಿ ವ್ಯಾಸಂಗ ಮಾಡಿದರು.
ಸೇವೆ: 2011ರಲ್ಲಿ ಐಪಿಎಸ್ ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಅವರ ಕಾರ್ಯವೈಖರಿಯಿಂದ ಸಿಂಗಂ ಎಂದು ಹೆಸರು ಮಾಡಿದರು.

ರಾಜಕೀಯ ಪಯಣದ ಹೈಲೈಟ್ಸ್:
ಬಿಜೆಪಿ ಸೇರ್ಪಡೆ: 2020ರಲ್ಲಿ ಬಿಜೆಪಿ ಸೇರಿ 2021ರಲ್ಲಿ ತಮಿಳುನಾಡಿನ ಬಿಜೆಪಿ ಘಟಕದ ಅತಿ ಕಿರಿಯ ರಾಜ್ಯಾಧ್ಯಕ್ಷರಾಗಿ ನೇಮಕವಾದರು. ಅದಕ್ಕೂ ಮುಂಚೆ ಕರ್ನಾಟಕದ (ಐಪಿಎಸ್) ಸಿಂಗಂ ಎಂದೇ ಅವರನ್ನಾ ಕರೆಯಲಾಗುತ್ತಿತ್ತು. ಇದಾದ ನಂತರ ಸಂಪೂರ್ಣವಾಗಿ ತಮಿಳುನಾಡು ರಾಜಕಾರಣಕ್ಕೆ ಕಾಲಿಟ್ಟರು.
ಪಾದಯಾತ್ರೆ: ಎನ್ ಮಣ್ಣು ಎನ್ ಮಕ್ಕಳು (ನಮ್ಮ ನೆಲ ನಮ್ಮ ಜನ) ಪಾದಯಾತ್ರೆ ಮೂಲಕ ೨೩೪ ವಿಧಾನಭಾ ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷದ ಸಂಘನೆಗೆ ಶ್ರಮಿಸಿದರು.
ಚನಾವಣೆ: 2021ರ ವಿಧಾನಸಭೆ ಮತ್ತು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಗೆಲವು ಸಾಧಿಸಲಿಲ್ಲ.
ರಾಜಕೀಯ ಸವಾಲುಗಳು ಮತ್ತು ಅತಂತ್ರ ಸ್ಥಿತಿ:
ಮೈತ್ರಿ ಬಿರುಕು: ಎಐಎಡಿಎಂಕೆ (AIADMK) ನಾಯಕರಾದ ಅಣ್ಣಾ ದೊರೈ ಮತ್ತು ಜಯಲಲಿತಾ ಅವರ ಬಗ್ಗೆ ನೀಡಿದ ಹೇಳಿಕೆಗಳು ಬಿಜೆಪಿ-ಎಐಎಡಿಎಂಕೆ ಮೈತ್ರಿ ಮುರಿಯಲು ಕಾರಣವಾಯಿತು ಎಂಬ ವಿಶ್ಲೇಷಣೆ ಇದೆ.
ಕೈತಪ್ಪಿದ ರಾಜ್ಯಾಧ್ಯಕ್ಷ ಸ್ಥಾನ: 2025 ಏಪ್ರಿಲ್‌ನಲ್ಲಿ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ನೈನಾ ನಾಗೇಂದ್ರನ್ ಅವರನ್ನು ನೇಮಕ ಮಾಡಲಾಯಿತು.
ಇತ್ತೀಚಿನ ಬೆಳವಣಿಗೆ: 2026 ಫೆಬ್ರವರಿಯಲ್ಲಿ ಚುನಾವಣಾ ಪ್ರಭಾರಿಯಾಗಿ ನೇಮಕವಾಗಿದ್ದರೂ ತಂದೆಯ ಅನಾರೋಗ್ಯ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಇದು ಅವರ ರಾಜಕೀಯ ಭವಿಷ್ಯದ ಅನೇಕ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.
ಮುಂದಿನ ಹಾದಿ ಏನು?
ಅಣ್ಣಾಮಲೈ ಅವರು ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆ ಅಥವಾ ನಟ ವಿಜಯ್ ಅವರ ಟಿವಿಕೆ (TVK) ಪಕ್ಷ ಸೇರುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಅಣ್ಣಾಮಲೈ ಅವರು ತಮ್ಮ ಬದ್ಧತೆ ಬಿಜೆಪಿಗೇ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಐಪಿಎಸ್ ಆಗಿ ಸಿಂಗಂ ಎನಿಸಿಕೊಂಡಿದ್ದ ಅವರು ರಾಜಕೀಯವೆಂಬ ಅರಣ್ಯದಲ್ಲಿ ಸೈಲೆಂಟ್ ಆದ್ರಾ? ಅಥವಾ ಮೊದಲಿನಂತೆ ಮತ್ತೆ ಘರ್ಜಿಸುತ್ತಾರಾ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.












Click it and Unblock the Notifications