Jyothika: ಕಂಗುವಾ ಸಿನಿಮಾ: ಸೂರ್ಯ ಪತ್ನಿ, ನಟಿ ಜ್ಯೋತಿಕಾ ಪೋಸ್ಟ್ ಟ್ರೋಲ್!
ತಮಿಳು ನಟ ಸೂರ್ಯ ಅವರ ಬಹು ನಿರೀಕ್ಷಿತ ಕಂಗುವಾ ಸಿನಿಮಾ ಇದೇ 14ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ಭಾರೀ ಕಟು ವಿಮರ್ಶೆಗೆ ಒಳಗಾಗಿದೆ. ಸೂರ್ಯ ಅವರ ಅಭಿಮಾನಿಗಳೇ ಈ ಸಿನಿಮಾದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸೂರ್ಯ ಅವರ ಸಿನಿಮಾ ಬಿಡುಗಡೆಯಾಗಿ ಬಹಳಷ್ಟು ದಿನಗಳೇ ಆಗಿತ್ತು. ಈಚೆಗೆ ವಿಕ್ರಂ ಎನ್ನುವ ಸಿನಿಮಾಣದಲ್ಲಿ ರೋಲೆಕ್ಸ್ ಎನ್ನುವ ಸಣ್ಣ ಪಾತ್ರದಲ್ಲಿ ಸೂರ್ಯ ಅವರು ನಟಿಸಿದ್ದರು. ಆದರೆ, ಅದಾದ ಮೇಲೆ ಪೂರ್ಣ ಪ್ರಮಾಣದಲ್ಲಿ ಅವರು ನಟನಾಗಿ ನಟಿಸಿದ್ದ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಅದೇ ಕಾರಣಕ್ಕೆ ಕಂಗುವಾ ಸಿನಿಮಾ ಹೈಪ್ ಪಡೆದುಕೊಂಡಿತ್ತು. ಆದರೆ, ಇದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಇದೀಗ ಸೂರ್ಯ ಅವರ ಪತ್ನಿ ಹಾಗೂ ನಟಿ ಜ್ಯೋತಿಕಾ ಅವರು ಪ್ರತಿಕ್ರಿಯಿಸಿದ್ದಾರೆ.
ಕಂಗುವಾ ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಕಾ ಅವರು ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ. ಜ್ಯೋತಿಕಾ ಅವರ ಪೋಸ್ಟ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಕೆಲವರು ಜ್ಯೋತಿಕಾ ಅವರ ಮಾತನ್ನು ಟ್ರೋಲ್ ಸಹ ಮಾಡುತ್ತಿದ್ದಾರೆ. ಅವರ ಪೋಸ್ಟ್‌ನಲ್ಲಿ ಏನಿದೆ ಎನ್ನುವ ಮಾಹಿತಿ ಇಲ್ಲಿದೆ.

ಕಂಗುವಾ ಸಿನಿಮಾದ ಬಗ್ಗೆ ಜ್ಯೋತಿಕಾ ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಾನು ಕಂಗುವಾ ಸಿನಿಮಾಗೆ ಬರ್ತಿರುವ ಕಟು ವಿಮರ್ಶೆಯನ್ನು ನೋಡಿ ನನಗೆ ಶಾಕ್ ಆಗಿದೆ. ನಾನು ಈ ಸಿನಿಮಾದ ಬಗ್ಗೆ ಜ್ಯೋತಿಕಾ ಆಗಿ, ಸಿನಿಮಾದ ಪ್ರೇಮಿಯಾಗಿ ಬರೆಯುತ್ತಿದ್ದೇನೆ. ನಟ ಸೂರ್ಯ ಅವರ ಪತ್ನಿಯಾಗಿ ಅಲ್ಲ ಎಂದು ಪ್ರಾರಂಭಿಸಿದ್ದಾರೆ. ಈ ಪೋಸ್ಟ್ ಅನ್ನು ಸೂರ್ಯ ಅವರಿಗೆ ಬೆಂಬಲವಾಗಿ ಮಾಡಲಾಗಿದೆ.
ಸಿನಿಮಾ ಎನ್ನುವುದು ಒಂದು ಚಮತ್ಕಾರ. ಸೂರ್ಯ ಅವರೇ ನಿಮ್ಮ ಬಗ್ಗೆ ನನಗೆ ಅಪಾರ ಗೌರವ ಇದೆ. ನಿಮ್ಮ ಕನಸುಗಳ ಬಗ್ಗೆ ಹಾಗೂ ಚಿತ್ರರಂಗವನ್ನು ಯಾವ ಹಂತಕ್ಕೆ ನೀವು ತೆಗೆದುಕೊಂಡು ಹೋಗಬೇಕು ಎಂದು ಕನಸು ಕಾಣುತ್ತಿದ್ದೀರಿ ಹಾಗೂ ಅದರ ಧೈರ್ಯದ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.

ನಿಜ ಒಪ್ಪಿಕೊಳ್ಳೋಣ ಮೊದಲ ಅರ್ಧಗಂಟೆಯಲ್ಲಿ ಕೆಲವೊಂದು ಸಣ್ಣ ನ್ಯೂನ್ಯತೆ ಇದೆ. ಸೌಂಡ್ (ಚಿತ್ರದಲ್ಲಿನ ಸಂಭಾಷಣೆ ಅಥವಾ ಧ್ವನಿ) ಗೊಂದಲದಿಂದ ಕೂಡಿದೆ. ಪ್ರತಿ ಸಿನಿಮಾದಲ್ಲೂ ಕೆಲವೊಂದು ಸಣ್ಣ ಪುಟ್ಟ ದೋಷಗಳು ಇರುತ್ತವೆ. ಇನ್ನು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಈ ರೀತಿ ಆಗುವುದು ಸಹಜ. ಇನ್ನುಳಿದಂತೆ ಈ ಸಿನಿಮಾ ತುಂಬಾನೇ ಚೆನ್ನಾಗಿದೆ. ನಾನು ತಮಿಳು ಸಿನಿಮಾದಲ್ಲಿ ಈ ರೀತಿಯ ಕ್ಯಾಮರಾ ವರ್ಕ್ ನೋಡಿಲ್ಲ ಎಂದಿದ್ದಾರೆ.
ಕಂಗುವಾ ಸಿನಿಮಾದ ಬಗ್ಗೆ ಬಂದಿರುವ ವಿಮರ್ಶೆಗಳಿಂದ ವಿಚಲಿತಳಾಗಿದ್ದೇನೆ. ಡಬಲ್ ಮೀನಿಂಗ್, ಹಳೆಯ ಕಥೆ ಹಾಗೂ ಮಹಿಳೆಯರನ್ನು ಕೆಟ್ಟದಾಗಿ ಚಿತ್ರಿಸಿರುವ ಸಿನಿಮಾಗಳಿಗೆ ಈ ತರ ಆಗಲ್ಲ. ಕಂಗುವಾದಲ್ಲಿ ಒಳ್ಳೆಯದೂ ಇದೆ. ದ್ವಿತೀಯಾರ್ಧದಲ್ಲಿ ಮಹಿಳೆಯರ ಫೈಟ್, ಸ್ನೇಹ, ದ್ವೇಷ ಎಲ್ಲವೂ ಇದೆ. ಈ ರೀತಿ ಇರುವ ಒಳ್ಳೆಯ ಸೀನ್‌ಗಳ ಬಗ್ಗೆಯೂ ರಿವ್ಯೂನಲ್ಲಿ ಹೇಳಬೇಕಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
#Jyothika shamelessly blaming audience for her husband #Suriya ‘s poor choice of script 🤡#kanguva pic.twitter.com/0ihc2Excf9
— hariprasad (@_Hari_tweets) November 17, 2024
3D ತಂತ್ರಜ್ಞಾನದಲ್ಲಿ ಸಿನಿಮಾ ಮಾಡಿದವರಿಗೆ ಪ್ರಶಂಸೆ ಸಿಗಬೇಕಿತ್ತು. ಆದರೆ, ಅದು ಆಗಿಲ್ಲ. ಫಸ್ಟ್ ಶೋ ಮುಗಿಯುವ ಮೊದಲೇ ನೆಗೆಟಿವಿಟಿ ಪ್ರಚಾರ ಮಾಡಲಾಗಿದೆ. ಕಂಗುವಾ ಟೀಮ್ ಬಗ್ಗೆಯೂ ಅವರು ಮಾತನಾಡಿದ್ದು, ಈ ಟೀಮ್ ಹೆಮ್ಮೆ ಪಡಬೇಕು. ನೆಗೆಟಿವ್ ಕಾಮೆಂಟ್ ಮಾಡುವವರು ಮಾಡಲಿ. ಅವರಿಗೆ ತಮಿಳು ಸಿನಿಮಾವನ್ನು ಮುಂದಕ್ಕೆ ತೆಗೆದುಕೊಂಡು ಹೋಗೋಕೆ ಆಗಲ್ಲ ಎಂದು ತೀಕ್ಷಣವಾಗಿಯೇ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications