Missing Dog: ಕಾಣೆಯಾಗಿರುವ ನ್ಯಾಯಾಧಿಶರ ನಾಯಿಗಾಗಿ ಪೊಲೀಸರ ಹುಡುಕಾಟ: ಹಲವರ ಬಂಧನ
ಕಾಣೆಯಾಗಿರುವ ವ್ಯಕ್ತಿ ಒಂದು ವೇಳೆ ಹೆಚ್ಚು ದಿನ ಕಾಣಿಸಿಕೊಳ್ಳದೇ ಇದ್ದರೆ, ಮಿಸ್ಸಿಂಗ್ ಕಂಪ್ಲೇಟ್ ನೀಡುತ್ತೇವೆ. ಪ್ರೀತಿಯಿಂದ ಸಾಕಿದ ಸಾಕು ಪ್ರಾಣಿ ಕಾಣೆಯಾದರೂ, ಪೊಲೀಸ್ ಠಾಣೆಯಲ್ಲಿ ನಾಯಿಯ ಫೋಟೋ ಸಮೇತ ದೂರು ನೀಡುತ್ತೆವೆ. ಪೊಲೀಸರು ನೋಡೋಣ, ಮಾಡೋಣ ಅನ್ನುವ ಮಾತು ಹೇಳುತ್ತಾರೆ. ಆದರೆ, ಈ ಕೇಸ್ ಕೊಂಚ ಡಿಫ್ರಂಟ್ ಆಗಿದೆ. ನಾಯಿ ಕಾಣೆಯಾಗಿದೆ ಎಂದು ಪೊಲೀಸರಲ್ಲಿ ದೂರು ನೀಡುತ್ತಲೆ, ಅನುಮಾನಸ್ಪದ ವ್ಯಕಿಗಳನ್ನು ಖಾಕಿ ದಾರಿಗಳು ಬಂಧಿಸಿದ್ದಾರೆ.
ಅಬ್ಬಾ.. ಏನ್ ರಿ ಇದು.. ಎಂದು ನೀವು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವ ಮುನ್ನ ಕಂಪ್ಲೇಟ್ ನೀಡಿದವರು, ಯಾರು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಅಲ್ಲದೆ ಪ್ರಕರಣದಲ್ಲಿ ಆಗಿದ್ದೇನು, ಪೊಲೀಸರು ಜನರನ್ನು ಏಕೆ ಬಂಧಿಸಿದ್ದಾರೆ, ಎಂಬ ಕುತೂಹಲ ಸಹ ನಿಮ್ಮಲ್ಲಿ ಮೂಡಬಹುದು. ಅಸಲಿಗೆ ನಾಯಿ ಕಾಣೆ ಆಗಿದ್ದು, ನ್ಯಾಯಾಧಿಶರ ಮನೆಯಿಂದ.

ನ್ಯಾಯಾಧೀಶರ ನಾಯಿ ನಾಪತ್ತೆ
ಉತ್ತರ ಪ್ರದೇಶದ ಬರೇಲಿಯಲ್ಲಿ ನ್ಯಾಯಾಧೀಶರೊಬ್ಬರ ನಾಯಿ ನಾಪತ್ತೆಯಾಗಿರುವ ಘಟನೆ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ನಾಯಿಯನ್ನು ಹುಡುಕಲು ಈಗಾಗಲೇ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಕಾರ್ಯಾಚರಣೆ ಚುರುಕಿನಿಂದ ನಡೆಯುತ್ತಿದೆ. ನಾಯಿ ನಾಪತ್ತೆಯಾಗಿ ಐದು ದಿನಗಳೇ ಕಳೆದರೂ ಅದರ ಕುರುಹು ಇನ್ನು ಪತ್ತೆಯಾಗದಿರುವುದು ನ್ಯಾಯಾಧಿಶರ ಕುಟುಂಬದಲ್ಲಿ ತಲ್ಲಣ ಸೃಷ್ಟಿ ಮಾಡಿದೆ.
15ಕ್ಕೂ ಹೆಚ್ಚು ಜನರ ವಿರುದ್ಧ ದೂರು
ಕಾಣೆಯಾಗಿರುವ ನಾಯಿಗೆ ಸಂಬಂಧಿಸಿದಂತೆ ನ್ಯಾಯಾಧೀಶರ ಪತ್ನಿ ನೆರೆಹೊರೆಯವರ ಹೆಸರನ್ನು ಹೆಸರಿಸಿ 15 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಈಗಾಗಲೇ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ನಾಯಿ ನಾಪತ್ತೆ ಪ್ರಕರಣ ನ್ಯಾಯಾಧೀಶರ ಕುಟುಂಬದಲ್ಲಿ ಆತಂಕ ಸೃಷ್ಟಿಸಿದೆ.
ನಾಯಿ ಕಾಣೆಯಾಗಿದ್ದು ಹೇಗೆ
ಬರೇಲಿಯ ಇಜ್ಜತ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಖಾಕಿ ಧಾರಿಗಳ ನಿದ್ದೆ ಗೆಡಿಸಿದೆ. ಸಿವಿಲ್ ನ್ಯಾಯಾಧೀಶ ವಿಶಾಲ್ ದೀಕ್ಷಿತ್ ಅವರ ನಾಯಿ ಮೇ 18 ರಂದು ಅವರ ಮನೆಯ ಹೊರಗೆ ನಡೆದಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾಯಿ ಕಾಣೆಯಾಗಿದೆ. ಬಳಿಕ ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಕಾಲೋನಿಯ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೂ ನ್ಯಾಯಾಧೀಶರ ನಾಯಿಯ ಕುರುಹು ಪತ್ತೆಯಾಗಿರಲಿಲ್ಲ.
ಇದೀಗ ಇಜ್ಜತ್ ನಗರ ಪೊಲೀಸ್ ಠಾಣೆಯಲ್ಲಿ ನ್ಯಾಯಾಧೀಶರ ಪತ್ನಿ ಪೂಜಾ ದೀಕ್ಷಿತ್ ಪರವಾಗಿ ಪ್ರಕರಣ ದಾಖಲಿಸಿದ್ದಾರೆ. ಪೂಜಾ ದೀಕ್ಷಿತ್ ಅವರು ನೆರೆಹೊರೆಯಲ್ಲಿ ವಾಸಿಸುವ ಡಂಪಿ ಅಹ್ಮದ್ ಮತ್ತು ಅವರ ಹತ್ತಕ್ಕೂ ಹೆಚ್ಚು ಸಹಾಯಕರ ವಿರುದ್ಧ ದೂರು ನೀಡಿದ್ದಾರೆ. ಡಂಪಿ ಅಹ್ಮದ್ ತನ್ನ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಮತ್ತು ತನ್ನ ನಾಯಿಯನ್ನು ಕಾಣೆಯಾಗಿಸಿ ತನ್ನ ನ್ಯಾಯಾಧೀಶ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಇದರಿಂದ ನ್ಯಾಯಾಧೀಶರ ಮನೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನ್ಯಾಯಾಧೀಶರ ಪತ್ನಿಯ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಡಂಪಿ ಅಹಮದ್ ತಲೆಮರೆಸಿಕೊಂಡಿದ್ದಾನೆ.
ದೂರುದಾರೆ ನ್ಯಾಯಾಧೀಶರ ಪತ್ನಿ, ಡಂಪಿ ಅಹ್ಮದ್ ತಮ್ಮ ನಾಯಿಯನ್ನು ಕಾಣೆಯಾಗಿಸುವಲ್ಲಿ ಸಫಲನಾಗಿದ್ದಾನೆ. ನ್ಯಾಯಾಧೀಶರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಅವರು ತಮ್ಮ ಹೆಣ್ಣು ಮಕ್ಕಳನ್ನು ಟ್ಯೂಷನ್ ಮತ್ತು ಶಾಲೆಗೆ ಕಳುಹಿಸುತ್ತಿಲ್ಲ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications