ರಾಮ್ ರಹೀಮ್ ಪ್ರಕರಣ ಬೆಳಕಿಗೆ ತಂದಿದ್ದು ಯಾರು?, ಏನಾಯಿತು?

Posted By: Gururaj
Subscribe to Oneindia Kannada

ಚಂಡೀಗಢ, ಆಗಸ್ಟ್. 25 : ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ಪ್ರಕರಣ ಬೆಳಕಿಗೆ ತಂದು ಹತ್ಯೆಗೀಡಾದ ಪತ್ರಕರ್ತನ ಸಾವಿಗೆ ನ್ಯಾಯ ಸಿಕ್ಕಿದೆ.

Live: ರಾಮ್ ರಹೀಮ್ ಸಿಂಗ್ ಅನುಯಾಯಿಗಳಿಂದ ಹಿಂಸಾಚಾರ

2002ರಲ್ಲಿ ಪತ್ರಕರ್ತ ರಾಮ ಚಂದರ್ ಚತ್ರಪತಿ ಹತ್ಯೆ ನಡೆದಿತ್ತು. ಅವರ ನಿವಾಸದಲ್ಲಿಯೇ ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡಲಾಗಿತ್ತು. ರಾಮ ಚಂದರ್ ಹತ್ಯೆಗೂ ಕೆಲವು ತಿಂಗಳ ಹಿಂದೆ, ಅವರ ಪತ್ರಿಕೆಯಲ್ಲಿ ಅನಾಮಿಕ ಮಹಿಳೆಯ ಪತ್ರವನ್ನು ಪ್ರಕಟಿಸಲಾಗಿತ್ತು.

Journalist who exposed rapes at Dera killed, son awaits justice

ರಾಮ್ ರಹೀಮ್ ಸಿಂಗ್ ಮುಖ್ಯಸ್ಥರಾಗಿರುವ ದೇರಾ ಸಚ್ಚಾ ಸೌದಾದದಲ್ಲಿ ಸಾಧ್ವಿಯರ ಮೇಲೆ ಹೇಗೆ ಲೈಂಗಿಕ ಶೋಷಣೆ ನಡೆದಿತ್ತು? ಎಂಬುದನ್ನು ಪತ್ರ ವಿವರಿಸಿತ್ತು. ರಾಮ ಚಂದರ್ ಹತ್ಯೆಯ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಈ ತೀರ್ಪಿನ ಜೊತೆ ಹತ್ಯೆ ಪ್ರಕರಣದ ತೀರ್ಪು ಪ್ರಕಟವಾಗಿದೆ.

   Gurmeet Ram Rahim Singh, Secret Behind His Popularity | Oneindia Kannada

   ಅತ್ಯಾಚಾರಿ ಬಾಬಾ ರಾಮ್ ರಹೀಮ್ ಜನಪ್ರಿಯತೆಯ ಗುಟ್ಟೇನು?

   ರಾಮ ಚಂದರ್ ಪುತ್ರ ಅನ್ಸುಲ್ ಹಲವಾರು ವರ್ಷಗಳ ಕಾಲ ತಂದೆಯ ಸಾವಿಗೆ ನ್ಯಾಯ ಬೇಕು ಎಂದು ನ್ಯಾಯಾಲಯಕ್ಕೆ ಅಲೆದಾಡಿದ್ದಾರೆ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಅನ್ಸುಲ್ ತಂದೆಯ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಅರ್ಜಿ ಹಾಕಿದ್ದರು.

   ರಾಮ ಚಂದರ್ ಹತ್ಯೆ ಪ್ರಕರಣದ ಎಫ್‌ಐಆರ್‌ ನಲ್ಲಿ ಪೊಲೀಸರು ರಾಮ್ ರಹೀಮ್ ಸಿಂಗ್ ಹೆಸರು ಸೇರಿಸಿರಲಿಲ್ಲ. ಆಗ ಅನ್ಸುಲ್ ಕಾನೂನು ಹೋರಾಟ ಆರಂಭಿಸಿದರು. ರಾಮ್ ರಹೀಮ್‌ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ಇಂದು ತೀರ್ಪು ನೀಡಿದೆ. ಆಗಸ್ಟ್ 28ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   For the son of Ram Chander Chhatrapati today judgment day. His father who had exposed the alleged rape of sadhvis at the Dera was shot from point blank range at his residence on October 24, 2002.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ