Get Updates
Get notified of breaking news, exclusive insights, and must-see stories!

Joshimath: ಹಾನಿಯಾದ ಕಟ್ಟಡಗಳ ಧ್ವಂಸಕ್ಕೆ ಭಾರೀ ವಿರೋಧ- ಪರಿಹಾರಕ್ಕಾಗಿ ಸ್ಥಳೀಯರ ಪಟ್ಟು

ಉತ್ತರಾಖಂಡದ ಜೋಶಿಮಠದಲ್ಲಿ ಮಂಗಳವಾರ ಅಳಿವಿನಂಚಿನಲ್ಲಿರುವ ಕಟ್ಟಡಗಳ ನೆಲಸಮ ಮಾಡುವ ಕಾರ್ಯ ಆರಂಭವಾಗಿದ್ದು ಸ್ಥಳೀಯರು ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಎರಡು ಹೋಟೆಲ್‌ಗಳನ್ನು ಕೆಡವುವ ಮೊದಲು ಪ್ರತಿಭಟನೆಗಳು ಭುಗಿಲೆದ್ದಿವೆ. ಧ್ವಂಸಗೊಳಿಸಬೇಕಾದ ಆಸ್ತಿಗಳಿಗೆ ಹೇಗೆ ಪರಿಹಾರ ನೀಡಲಾಗುವುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಪ್ರತಿಭಟನಾಕಾರರು ಧ್ವಂಸ ಚಟುವಟಿಕೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಬದರಿನಾಥ ಧಾಮ್ ಮಾಸ್ಟರ್ ಪ್ಲಾನ್ ಪ್ರಕಾರ ಪರಿಹಾರ ನೀಡುವಂತೆ ಆಗ್ರಹಿಸಿ ಹೊಟೇಲ್ ಮಾಲೀಕರು ಹಾಗೂ ಸ್ಥಳೀಯರು, ಹೊಟೇಲ್ ಗಳನ್ನು ಕೆಡವಲು ಹೊರಟಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಜೋಶಿಮಠದ ಆಡಳಿತ ಇಂದು ಎಲ್ಲಾ ಅಧಿಕಾರಿಗಳು ಮತ್ತು ಹೋಟೆಲ್ ಮಾಲೀಕರ ಸಭೆ ಕರೆದಿದ್ದು, ಸಭೆಯಲ್ಲಿ ಕಟ್ಟಡಗಳ ನೆಲಸಮ ಮಾಡಲು ನಿರ್ಧರಿಸಲಾಗಿದೆ. ಪರಿಹಾರದ ಭರವಸೆ ನೀಡದೆ ಕಟ್ಟಡ ನೆಲಸಮ ಮಾಡಲು ಬಿಡುವುದಿಲ್ಲ ಎಂದು ಸ್ಥಳೀಯರು ಮತ್ತು ಹೋಟೆಲ್ ಮಾಲೀಕರು ಮಲಾರಿ ಹೋಟೆಲ್ ಬಳಿ ಧರಣಿ ಕುಳಿತರು.

ಮಕರ ಸಂಕ್ರಾಂತಿ ವಿಶೇಷ ಪುಟ

ಮಲಾರಿ ಇನ್ ಮತ್ತು ಮೌಂಟ್ ವ್ಯೂ ಎಂಬ ಎರಡು ಪಕ್ಕದ ಹೋಟೆಲ್‌ಗಳು ಒಂದಕ್ಕೊಂದು ಅಪಾಯಕಾರಿಯಾಗಿ ವಾಲಲು ಆರಂಭಿಸಿದ್ದು, ಸುತ್ತಮುತ್ತಲಿನ ಜನವಸತಿಗಳಿಗೆ ಅಪಾಯವನ್ನುಂಟು ಮಾಡಿದೆ. ಉತ್ತರಾಖಂಡ ಸರ್ಕಾರ ಈ ಎರಡು ಕಟ್ಟಡಗಳಿಂದ ನೆಲಸಮ ಕಾರ್ಯವನ್ನು ಪ್ರಾರಂಭಿಸಲು ನಿರ್ದೇಶಿಸಿದೆ. ಆದರೆ, ರಾಜ್ಯ ವಿಪತ್ತು ಪರಿಹಾರ ಪಡೆ (SDRF) ಸಿಬ್ಬಂದಿ ಭಾರೀ ಯಂತ್ರೋಪಕರಣಗಳೊಂದಿಗೆ ಸ್ಥಳಕ್ಕೆ ತಲುಪುತ್ತಿದ್ದಂತೆ, ಸಿಂಗ್ ಮತ್ತು ಇತರ ಪ್ರತಿಭಟನಾಕಾರರು ದಾರಿಯಲ್ಲಿ ಮಲಗಿದ್ದರು.

ಕೆಡವಿಕೆಯ ವಿರುದ್ಧ ಸ್ಥಳೀಯರ ಪ್ರತಿಭಟನೆ

ಕೆಡವಿಕೆಯ ವಿರುದ್ಧ ಸ್ಥಳೀಯರ ಪ್ರತಿಭಟನೆ

ಜೋಶಿಮಠದ ಬೆಟ್ಟದ ಪಟ್ಟಣದಲ್ಲಿ ಉತ್ತರಾಖಂಡ ಆಡಳಿತವು ಪರಿಹಾರವನ್ನು ಘೋಷಿಸದೆ ಮುಳುಗುತ್ತಿರುವ ಮನೆಗಳು ಮತ್ತು ಹೋಟೆಲ್‌ಗಳನ್ನು ನೆಲಸಮಗೊಳಿಸಿರುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು. ಅಸುರಕ್ಷಿತ ಎಂದು ಗುರುತಿಸಲಾದ ಹೋಟೆಲ್ ಮಲಾರಿ ಇನ್‌ನ ಹೊರಗೆ ಪ್ರತಿಭಟನೆಗಳು ಭುಗಿಲೆದ್ದವು.

ಹೋಟೆಲ್ ಮಲಾರಿ ಇನ್ ಮತ್ತು ಇತರ ಅಸುರಕ್ಷಿತ ಕಟ್ಟಡಗಳನ್ನು ಬುಧವಾರ ಕೆಡವಲು ನಿರ್ಧರಿಸಲಾಗಿದೆ. ಹಠಾತ್ ಧ್ವಂಸ ಕ್ರಮಕ್ಕೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಆಡಳಿತ ಮಂಡಳಿಯು ಸಂಜೆಯ ವೇಳೆಗೆ ಮಲಾರಿ ಇನ್ ಅನ್ನು ಕೆಡವಲು ಮುಂದಾಗಿದ್ದು ಅದರ ಮಾಲೀಕ ಠಾಕೂರ್ ಸಿಂಗ್ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಬುಧವಾರ ರಾತ್ರಿಯಿಂದ ಕೆಡವುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಕೆಡವಲು ಮುಂದಾಗಿರುವ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್‌ಐ) ತಂಡ ಮಂಗಳವಾರ ಎರಡು ಹೋಟೆಲ್‌ಗಳಲ್ಲಿ ಸಮೀಕ್ಷೆ ನಡೆಸಿದೆ.

CBRI ವಿಜ್ಞಾನಿ ಡಾ.ಸಿ.ಪಿ.ಕನುಂಗೋ ಇಂಡಿಯಾ ಟುಡೇಗೆ ಮಾತನಾಡಿ "ಕಟ್ಟಡಗಳನ್ನು ವ್ಯವಸ್ಥಿತವಾಗಿ ನೆಲಸಮಗೊಳಿಸಲಾಗುವುದು ಮತ್ತು ಇಳಿಜಾರಿನಲ್ಲಿನ ಹೊರೆ ಕಡಿಮೆ ಮಾಡಲು ಒತ್ತು ನೀಡಲಾಗುವುದು. ನೆಲಸಮ ಪ್ರಕ್ರಿಯೆಯನ್ನು ಮೇಲಿನಿಂದ ಕೆಳಕ್ಕೆ ಹಂತಗಳಲ್ಲಿ ಕೈಗೊಳ್ಳಲಾಗುವುದು ಮತ್ತು ಇದಕ್ಕೆ ಮೂರು-ನಾಲ್ಕು ದಿನಗಳು ತೆಗೆದುಕೊಳ್ಳುತ್ತದೆ" ಎಂದಿದ್ದಾರೆ.

800 ಮನೆಗಳಿಗೆ ಹಾನಿ

800 ಮನೆಗಳಿಗೆ ಹಾನಿ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಚಮೋಲಿ ನೀಡಿರುವ ಅಂಕಿಅಂಶಗಳ ಪ್ರಕಾರ ಉತ್ತರಾಖಂಡದ ಜೋಶಿಮಠದಲ್ಲಿ ಹಾನಿಗೊಳಗಾದ ಮನೆಗಳ ಸಂಖ್ಯೆ 800ಕ್ಕೆ ಏರಿದೆ. ಜೋಶಿಮಠ ಪಟ್ಟಣ ಪ್ರದೇಶದಲ್ಲಿ ಭೂಕುಸಿತದಿಂದ ಒಟ್ಟು 800 ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, 131 ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಜೋಶಿಮಠದಲ್ಲಿ 344 ಪರಿಹಾರ ಶಿಬಿರಗಳು ಮತ್ತು 491 ಕೊಠಡಿಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ 86 ಮನೆಗಳನ್ನು ಅಸುರಕ್ಷಿತ ವಲಯ ಎಂದು ಗುರುತಿಸಲಾಗಿದೆ. ಮುಳುಗುತ್ತಿರುವ ಪಟ್ಟಣದಲ್ಲಿ ವಾಸಿಸಲು ಅಸುರಕ್ಷಿತವಾಗಿರುವ ಮನೆಗಳಿಗೆ ಜಿಲ್ಲಾಡಳಿತ ರೆಡ್ ಕ್ರಾಸ್ ಗುರುತು ಹಾಕಿದೆ. ಇದೇ ವೇಳೆ ಗೃಹೋಪಯೋಗಿ ವಸ್ತುಗಳ ಖರೀದಿಗೆ ಕುಟುಂಬಗಳಿಗೆ 5 ಸಾವಿರ ರೂ., ಹಾನಿಗೊಳಗಾದ ಹತ್ತು ಕಟ್ಟಡಗಳ ಮಾಲೀಕರಿಗೆ ಪ್ರತಿ ಕಟ್ಟಡಕ್ಕೆ 1.30 ಲಕ್ಷ ರೂ. ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್‌ಗಳು, ಹಾಲು ಮತ್ತು ಹೊದಿಕೆಗಳನ್ನು ವಿತರಿಸಲಾಗಿದೆ.

ಜೋಶಿಮಠದಲ್ಲಿ ಮಳೆ ಮುನ್ಸೂಚನೆ

ಜೋಶಿಮಠದಲ್ಲಿ ಮಳೆ ಮುನ್ಸೂಚನೆ

ಮತ್ತೊಂದು ಆತಂಕಕಾರಿ ಸುದ್ದಿಯಲ್ಲಿ, ಮುಳುಗುತ್ತಿರುವ ಪಟ್ಟಣಕ್ಕೆ ಇಂದು ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಜೋಶಿಮಠದ ಮೇಲೆ ಸುಳಿದಾಡುತ್ತಿರುವ ಕಪ್ಪು ಮೋಡಗಳು ಎಚ್ಚರಿಕೆಯ ಗಂಟೆಯನ್ನು ಬಾರಿಸಿವೆ. IMD ಮುನ್ಸೂಚನೆಯ ಪ್ರಕಾರ, ಇಂದು ಲಘು ಮಳೆಯಾಗುವ ಸಾಧ್ಯತೆಯಿದೆ ಮತ್ತು ನಾಳೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಳೆಯು ಜೋಶಿಮಠದಲ್ಲಿ ಭೂಕುಸಿತ ಮತ್ತು ಭೂ ಕುಸಿತದ ನಿದರ್ಶನಗಳ ಅಪಾಯವನ್ನು ಇನ್ನಷ್ಟು ಹೆಚ್ಚಿಸಬಹುದು. ಇದು ಜೋಶಿಮಠದಲ್ಲಿ ಈಗಾಗಲೇ ಹಾನಿಗೊಳಗಾದ / ದುರ್ಬಲ ಕಟ್ಟಡಗಳಿಗೆ ಹೆಚ್ಚಿನ ಹಾನಿ ಉಂಟುಮಾಡಬಹುದು.

ಸುರಕ್ಷಿತ ಸ್ಥಳಾಂತರಕ್ಕೆ ಆದ್ಯತೆ

ಸುರಕ್ಷಿತ ಸ್ಥಳಾಂತರಕ್ಕೆ ಆದ್ಯತೆ

ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್‌ಸಿಎಂಸಿ) ಮಂಗಳವಾರ ಜೋಶಿಮಠದಲ್ಲಿ ಕಟ್ಟಡಗಳು ಮತ್ತು ಇತರ ರಚನೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವ ಪರಿಸ್ಥಿತಿಯನ್ನು ಪರಿಶೀಲಿಸಿತು. ಪೀಡಿತ ವಲಯದ ಎಲ್ಲಾ ನಿವಾಸಿಗಳನ್ನು ಸಂಪೂರ್ಣ ಮತ್ತು ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದೆ.

ಮನೆಗಳು, ರಸ್ತೆಗಳು ಮತ್ತು ಮೈದಾನದಲ್ಲಿ ಭಾರಿ ಬಿರುಕುಗಳು ಕಾಣಿಸಿಕೊಂಡ ನಂತರ ಜೋಶಿಮಠವನ್ನು ಭೂ ಕುಸಿತ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಪವಿತ್ರ ಪಟ್ಟಣ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಬದರಿನಾಥ್ ಮತ್ತು ಹೇಮಕುಂಡ್ ಸಾಹಿಬ್‌ಗೆ ಹೆಬ್ಬಾಗಿಲು ಆಗಿದ್ದು, ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಕೆಲವು ವಲಯಗಳಿಂದ ಬೇಡಿಕೆಯಿದೆ.

ಜೋಶಿಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸಲ್ಲಿಸಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಮುಂದೆ ಪ್ರಸ್ತಾಪಿಸಲಾಯಿತು. ಜೋಶಿಮಠದಲ್ಲಿನ ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಜನವರಿ 16 ರಂದು ವಿಚಾರಣೆಗೆ ಪಟ್ಟಿಮಾಡಿದೆ. ತುರ್ತು ವಿಚಾರಣೆಯನ್ನು ನಿರಾಕರಿಸಿದ ನ್ಯಾಯಾಲಯ, ಪರಿಸ್ಥಿತಿಯನ್ನು ನಿಭಾಯಿಸಲು 'ಪ್ರಜಾಪ್ರಭುತ್ವವಾಗಿ ಚುನಾಯಿತ ಸಂಸ್ಥೆಗಳು' ಇವೆ ಎಂದು ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+