ಭಾರತದಲ್ಲಿ ಶೀಘ್ರ ಮತ್ತೊಂದು ಏಕ ಡೋಸ್ ಲಸಿಕೆ ಸಾಧ್ಯತೆ; J&J ಅರ್ಜಿ

ನವದೆಹಲಿ, ಆಗಸ್ಟ್ 06: ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಲಸಿಕೆ ಅಭಿವೃದ್ಧಿಪಡಿಸಿರುವ ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಭಾರತದಲ್ಲಿ ಲಸಿಕೆಯ ತುರ್ತು ಬಳಕೆಯ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿದೆ.

ಲಸಿಕೆಯ ಸ್ಥಳೀಯ ಪ್ರಯೋಗಗಳಿಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದ ಬೆನ್ನಲ್ಲೇ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿದೆ. ಕೊರೊನಾ ವಿರುದ್ಧ Janssen ಎಂಬ ಲಸಿಕೆಯನ್ನು ಜಾನ್ಸನ್ ಅಂಡ್ ಜಾನ್ಸನ್ ಅಭಿವೃದ್ಧಿಪಡಿಸಿದ್ದು, ಈ ಲಸಿಕೆಯ ಪ್ರಯೋಗಕ್ಕೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿತ್ತು. ಲಸಿಕೆಯ ವೈದ್ಯಕೀಯ ಅಧ್ಯಯನಕ್ಕೆ ಅನುಮತಿ ನೀಡುವಂತೆ ಏಪ್ರಿಲ್ ತಿಂಗಳಿನಲ್ಲಿ ಕೇಳಿಕೊಂಡಿದ್ದು, ಸ್ಥಳೀಯ ನಿಯಮಗಳಿಗೆ ಅನುಸಾರವಾಗಿ ಭಾರತದಲ್ಲಿ ಏಕ ಡೋಸ್ ಲಸಿಕೆಯ ಅಧ್ಯಯನ ನಡೆಸಲು ಮುಂದಾಗಿತ್ತು.

ದೇಶಕ್ಕೆ ಕೊರೊನಾ ಲಸಿಕೆ ಆಮದನ್ನು ತ್ವರಿತಗೊಳಿಸಲು ಇದೇ ಮೇ ತಿಂಗಳಿನಲ್ಲಿ ಸಂಪೂರ್ಣ ಸ್ಥಾಪಿತ ವಿದೇಶಿ ಲಸಿಕೆಗಳಿಗೆ ಸ್ಥಳೀಯ ಪ್ರಯೋಗಗಳ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಹೀಗಾಗಿ J&J ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾಗಿ ಭಾರತೀಯ ಔಷಧ ನಿಯಂತ್ರಕ ಸಂಸ್ಥೆ-ಡಿಸಿಜಿಐ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ, ಇಎಂಎಯಿಂದ ಅನುಮೋದಿಸಲಾದ ಈ ಕೊರೊನಾ ಲಸಿಕೆಯ ಅಧ್ಯಯನದ ಅಗತ್ಯವಿಲ್ಲವೆಂದು ಭಾರತ ಹೇಳಿದೆ.

Johnson & Johnson Applies For EUA Of Single Dose Corona Vaccine In India

ಆನಂತರ ಪ್ರಕಟಣೆ ಹೊರಡಿಸಿದ್ದ ಜಾನ್ಸನ್ ಅಂಡ್ ಜಾನ್ಸನ್, "ಸಂಸ್ಥೆ ತನ್ನ ಏಕ ಡೋಸ್ ಲಸಿಕೆಯನ್ನು ಭಾರತದಲ್ಲಿ ಶೀಘ್ರವೇ ಬಿಡುಗಡೆಗೊಳಿಸಲು ಬದ್ಧವಾಗಿದೆ. ಭಾರತದಲ್ಲಿ ಸದ್ಯಕ್ಕೆ ಕೊರೊನಾ ಲಸಿಕೆಯ ವೈದ್ಯಕೀಯ ಅಧ್ಯಯನಗಳನ್ನು ನಡೆಸುವ ಅವಶ್ಯಕತೆಯಿಲ್ಲ ಎಂದು ತಿಳಿಸಲಾಗಿದೆ. ನಮ್ಮ ಏಕ ಡೋಸ್ ಲಸಿಕೆಯನ್ನು ಭಾರತಕ್ಕೆ ತಲುಪಿಸುವ ನಮ್ಮ ಸಾಮರ್ಥ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದರ ಕುರಿತು ಅನ್ವೇಷಣೆ ನಡೆಸುತ್ತಿದ್ದೇವೆ. ಈ ಕುರಿತು ಭಾರತ ಸರ್ಕಾರದೊಂದಿಗೆ ಚರ್ಚಿಸುತ್ತಿದ್ದೇವೆ" ಎಂದು ತಿಳಿಸಿದೆ.

ಶುಕ್ರವಾರ ಈ ಕೊರೊನಾ ಲಸಿಕೆ ತುರ್ತು ಬಳಕೆಗೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿದ್ದು, "ಭಾರತದ ಜನರಿಗೆ ಹಾಗೂ ವಿಶ್ವದ ಇತರೆ ದೇಶಗಳಿಗೆ ಬಯೋಲಾಜಿಕಲ್ ಇ ಲಿಮಿಟೆಡ್ ಸಹಯೋಗದೊಂದಿಗೆ ಏಕ ಡೋಸ್ ಕೊರೊನಾ ಲಸಿಕೆ ಪರಿಚಯಿಸಲು ಈ ಅನುಮೋದನೆ ಒಂದು ಪ್ರಮುಖ ಮೈಲುಗಲ್ಲಾಗಿದೆ" ಎಂದು ಜಾನ್ಸನ್ ಅಂಡ್ ಜಾನ್ಸನ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಬಯೋಲಾಜಿಕಲ್ ಇ ಅನ್ನು ಜಾನ್ಸನ್ ಅಂಡ್ ಜಾನ್ಸನ್ ಜಾಗತಿಕ ಪೂರೈಕೆ ಸರಪಳಿಯ ಪ್ರಮುಖ ಭಾಗವೆಂದು ಪರಿಗಣಿಸಿದ್ದು, ಹಲವು ಸರ್ಕಾರಗಳೊಂದಿಗೆ, ಆರೋಗ್ಯ ಇಲಾಖೆಗಳೊಂದಿಗೆ, ಸಂಸ್ಥೆಗಳೊಂದಿಗೆ ವ್ಯಾಪಕ ಸಹಯೋಗ ಹೊಂದಿರುವುದಾಗಿ ಕಂಪನಿ ತಿಳಿಸಿದೆ.

ಜಾನ್ಸನ್ & ಜಾನ್ಸನ್ ಸಂಸ್ಥೆಯ ಕೊರೊನಾ ಲಸಿಕೆ ಪಡೆದ ಎಂಟು ತಿಂಗಳ ನಂತರವೂ ಹೆಚ್ಚು ಸಾಂಕ್ರಾಮಿಕವಾಗಿರುವ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ಈಚೆಗೆ ಪ್ರಕಟಿಸಿತ್ತು. ಲಸಿಕೆಯು ಕೊರೊನಾ ಸೋಂಕಿನ ರೂಪಾಂತರಗಳ ವಿರುದ್ಧ ಶೇ.85 ರಷ್ಟು ಪರಿಣಾಮಕಾರಿಯಾಗಿದೆ. ಈ ಲಸಿಕೆ ಪಡೆದವರಿಗೆ ಕೊರೊನಾ ರೂಪಾಂತರ ತಗುಲಿದರೆ ಆಸ್ಪತ್ರೆಗೆ ದಾಖಲಾಗುವುದನ್ನು ಹಾಗೂ ಸಾವು ಸಂಭವಿಸುವ ಪ್ರಮಾಣವನ್ನು ತಗ್ಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಿಕೊಂಡಿತ್ತು.

ಆದರೆ ಜಾನ್ಸನ್ ಅಂಡ್ ಜಾನ್ಸನ್ ಕೋವಿಡ್ ಲಸಿಕೆ ಕುರಿತು ಎಫ್‌ಡಿಎ ಎಚ್ಚರಿಕೆ ನೀಡಿತ್ತು. "ಈ ಲಸಿಕೆ ಕೆಲವು ಸಂದರ್ಭಗಳಲ್ಲಿ ಅಪರೂಪದ ನರಮಂಡಲದ ಸಮಸ್ಯೆಗೆ ಕಾರಣವಾಗಬಹುದು. ಇದರಿಂದಾಗಿ ಪಾರ್ಶ್ವವಾಯು ಸಂಭವಿಸಬಹುದು," ಎಂದು ಯುಎಸ್‌ನ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಎಚ್ಚರಿಕೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+