ಪಿಎಂ-ಸಿಎಂ ಇಂಟರ್ನ್‌ಶಿಪ್ ಮೂಲಕ 7.5 ಲಕ್ಷ ಯುವಕರಿಗೆ ಉದ್ಯೋಗ: ಯೋಗಿ ಆದಿತ್ಯನಾಥ್‌

ಲಕ್ನೋ, ಜೂನ್ 28: ಎಂಎಸ್‌ಎಂಇ ಘಟಕಗಳು ಉತ್ತರ ಪ್ರದೇಶದ ಕೋಟ್ಯಂತರ ಜನರಿಗೆ ಜೀವನಾಧಾರವಾಗಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಪಿಎಂ ಮತ್ತು ಸಿಎಂ ಇಂಟರ್ನ್‌ಶಿಪ್ ಕಾರ್ಯಕ್ರಮಗಳ ಮೂಲಕ ಏಳೂವರೆ ಲಕ್ಷ ಯುವಕರಿಗೆ ಉದ್ಯೋಗಗಳನ್ನು ಒದಗಿಸಲಾಗುವುದು ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಎಂಎಸ್‌ಎಂಇ ಇಲಾಖೆಯು ಪೂರ್ವಾಂಚಲ, ಬುಂದೇಲ್‌ಖಂಡ್ ಮತ್ತು ಗಂಗಾ ಎಕ್ಸ್‌ಪ್ರೆಸ್‌ವೇಗಳ ಉದ್ದಕ್ಕೂ ಭೂಮಿಯನ್ನು ಗುರುತಿಸುವ ಮೂಲಕ ಎಂಎಸ್‌ಎಂಇ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಬೇಕು. ಲಕ್ನೋ, ವಾರಣಾಸಿ ಮತ್ತು ಆಗ್ರಾದಲ್ಲಿ ಯೂನಿಟಿ ಮಾಲ್‌ಗಳನ್ನು ಸ್ಥಾಪಿಸಲು ಮತ್ತು ಎಂಎಸ್‌ಎಂಇ ವಲಯದ ಉದ್ಯಮಿಗಳಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

UP Chief Minister Yogi Adityanath

ಅಂತರಾಷ್ಟ್ರೀಯ ಎಂಎಸ್‌ಎಂಇ ದಿನ-2023ರ ಸಂದರ್ಭದಲ್ಲಿ ಲಕ್ನೋದ ಲೋಕಭವನದಲ್ಲಿ ಬ್ಯಾಂಕ್‌ಗಳು ಆಯೋಜಿಸಿದ್ದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಯೋಗಿ ಈ ಎಲ್ಲವನ್ನು ಹೇಳಿದ್ದಾರೆ. ಈ ಸಂದರ್ಭದಲ್ಲಿ MSME ವಲಯದ ಸಮಗ್ರ ಅಭಿವೃದ್ಧಿಗಾಗಿ 3.41 ಲಕ್ಷ MSME ಉದ್ಯಮಿಗಳಿಗೆ ಒಟ್ಟು 20,000 ಕೋಟಿ ರೂ.ಗಳನ್ನು ಏಕಕಾಲದಲ್ಲಿ ವಿತರಿಸಲಾಯಿತು.

ಸಾಲ ವಿತರಣಾ ಕಾರ್ಯಕ್ರಮದಡಿ ರಾಜ್ಯದ 3.41 ಲಕ್ಷ ಎಂಎಸ್‌ಎಂಇ ಉದ್ಯಮಿಗಳಿಗೆ ಏಕಕಾಲಕ್ಕೆ ಸಾಲ ವಿತರಿಸಲಾಗುತ್ತಿದ್ದು, ಕೃಷಿಯ ನಂತರ ಈ ಕ್ಷೇತ್ರ ಗರಿಷ್ಠ ಉದ್ಯೋಗ ನೀಡಲಿದೆ ಎಂದ ಮುಖ್ಯಮಂತ್ರಿಗಳು, ಎಂಎಸ್‌ಎಂಇ ವಲಯದ ಉದ್ಯಮಿಗಳು ಉತ್ತರ ಪ್ರದೇಶಕ್ಕೆ ಈ ವಲಯದಲ್ಲಿ ಹೊಸ ಜೀವ ತುಂಬುವ ಮೂಲಕ ಪ್ರದೇಶ ಹೊಸ ಗುರುತನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಯೋಜನೆಯ ಮೊದಲ ಹಂತದ ಮೂರು ತಿಂಗಳೊಳಗೆ ರಾಜಧಾನಿ ಲಕ್ನೋದ ಅವಧ್ ಶಿಲ್ಪಗ್ರಾಮದಲ್ಲಿ ಯೂನಿಟಿ ಮಾಲ್ ಅನ್ನು ತೆರೆಯುವುದಾಗಿ ಸಿಎಂ ಘೋಷಿಸಿದರು. ಉತ್ತರ ಪ್ರದೇಶದಲ್ಲಿ ಎಂಎಸ್‌ಎಂಇ ವಲಯ ಸಾವಿನ ದವಡೆಯಲ್ಲಿದ್ದ ಕಾಲವೊಂದಿತ್ತು ಎಂದು ಮುಖ್ಯಮಂತ್ರಿ ಯೋಗಿ ಹೇಳಿದ್ದಾರೆ.

UP Chief Minister Yogi Adityanath

ಸರ್ಕಾರದ ಸಹಕಾರದ ಕೊರತೆಯಿಂದಾಗಿ, ಈ ವಲಯದ ಉದ್ಯಮಿಗಳು ಹತಾಶರಾಗಿದ್ದಾರೆ. ಆದರೆ, ಕಳೆದ ಆರು ವರ್ಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆಯೊಂದಿಗೆ, ನಮ್ಮ ಸರ್ಕಾರ ಸುಮಾರು 96 ಲಕ್ಷ ಎಂಎಸ್‌ಎಂಇ ಘಟಕಗಳನ್ನು ನಡೆಸುತ್ತಿದೆ. ಇದು ಕೋಟಿಗಟ್ಟಲೆ ಜನರಿಗೆ ಜೀವನಾಧಾರವಾಗಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ.

ಎಂಎಸ್‌ಎಂಇ ವಲಯವನ್ನು ಜೀವಂತವಾಗಿಡಲು "ಒಂದು ಜಿಲ್ಲೆ ಒಂದು ಉತ್ಪನ್ನ" (ಒಡಿಒಪಿ) ಯೋಜನೆಯನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರ ಪ್ರದೇಶವಾಗಿದೆ, ಇದು ಈಗ ದೇಶದೊಳಗೆ ಬ್ರಾಂಡ್‌ ಆಗಿ ಮಾರ್ಪಟ್ಟಿದೆ. ಎಂಎಸ್‌ಎಂಇ ಮತ್ತು ಒಡಿಒಪಿಯನ್ನು ಉಲ್ಲೇಖಿಸಿದಾಗಲೆಲ್ಲಾ ಇಂದು ದೇಶ, ಉತ್ತರ ಪ್ರದೇಶದ ಹೆಸರು ಜನರ ಬಾಯಲ್ಲಿ ಮೊದಲು ಬರುತ್ತದೆ ಎಂದರು.

ರಾಜ್ಯದಲ್ಲಿ ಒಡಿಒಪಿ ಯೋಜನೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿ, ಉತ್ತರ ಪ್ರದೇಶವು ತನ್ನ 52 ಉತ್ಪನ್ನಗಳಿಗೆ ಜಿಐ ಟ್ಯಾಗ್ ಪಡೆಯುವಲ್ಲಿ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ ಎಂದು ಪ್ರತಿಪಾದಿಸಿದರು.

ವಾರಣಾಸಿ ಮಾತ್ರ 23 ಉತ್ಪನ್ನಗಳಿಗೆ ಜಿಐ ಟ್ಯಾಗ್‌ಗಳನ್ನು ಪಡೆದುಕೊಂಡಿದೆ. ನಮ್ಮಲ್ಲಿ 75 ಜಿಲ್ಲೆಗಳಿದ್ದು, ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದ ಇತರ ಹಲವು ಉತ್ಪನ್ನಗಳು ಜಿಐ ಟ್ಯಾಗ್ ಪಡೆಯಲಿವೆ. ಉತ್ತರ ಪ್ರದೇಶದ ಸಾಂಪ್ರದಾಯಿಕ ಉತ್ಪನ್ನಗಳು ದೇಶದೊಳಗೆ ಮತ್ತು ಪ್ರಪಂಚದಾದ್ಯಂತ ತಿಳಿಯುವ ದಿನ ದೂರವಿಲ್ಲ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+