ಕಪ್ಪು ಬಾವುಟ ತೋರಿದವರ ಮೇಲೆ ಕನ್ಹಯ್ಯಾ ಬೆಂಬಲಿಗರ ಹಲ್ಲೆ

Subscribe to Oneindia Kannada

ಪಟ್ನಾ, ಮೇ. 02: ದೇಶದ್ರೋಹದ ಘೋಷಣೆ ಕೂಗಿದ ಆರೋಪ ಎದುರಿಸಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ದೆಹಲಿ ಜವಾಹರಲಾಲ್ ವಿವಿ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯ ಕುಮಾರ್ ಭಾಷಣದ ವೇಳೆ ಕಪ್ಪು ಭಾವುಟ ಪ್ರದರ್ಶನ ಮಾಡಿದವರ ಮೇಲೆ ಹಲ್ಲೆ ನಡೆದ ಪ್ರಕರಣ ವರದಿಯಾಗಿದೆ.

ಪಟ್ನಾದಲ್ಲಿ ಕನ್ಹಯ್ಯಾ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇಳೆ ಘಟನೆ ನಡೆದಿದೆ. ಕಾರ್ಯಕ್ರಮದ ವೇಳೆ ಕಪ್ಪು ಬಾವುಟ ಪ್ರದರ್ಶಿಸಿದ ಇಬ್ಬರು ಯುವಕರನ್ನು ಕನ್ಹಯ್ಯಾ ಬೆಂಬಲಿಗರು ಥಳಿಸಿದ್ದಾರೆ. [ನಾಗ್ಪುರದಲ್ಲಿ ಕನ್ಹಯ್ಯಾ ಕುಮಾರ್ ಮೇಲೆ ಚಪ್ಪಲಿ ಎಸೆತ]

new delhi

ಕನ್ಹಯ್ಯಾ ಭಾಷಣದ ಆರಂಭ ಮಾಡಿದ ತಕ್ಷಣ ಬಿಹಾರದ ಇಬ್ಬರು ಯುವಕರು "ಭಾರತ ಮಾತಾ ಕೀ ಜೈ" ಎನ್ನುತ್ತಾ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಆಗ ಭಾಷಣಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕನ್ಹಯ್ಯಾ ಬೆಂಬಲಿಗರು ಯುವಕರನ್ನು ಹಿಡಿದು ಥಳಿಸಿದ್ದಾರೆ.[ಮೋದಿ ಬಗ್ಗೆ ಕನ್ಹಯ್ಯಾ ಹೇಳಿದ್ದೇನು?]

ನಾಗ್ಪುರದಲ್ಲಿ ಕನ್ಹಯ್ಯಾ ಕುಮಾರ್ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದ ವೇಳೆ ಅವರ ಮೇಲೆ ಶೂ ಎಸೆಯಲಾಗಿತ್ತು. ಹೈದಾರಾಬಾದ್ ನಲ್ಲಿ ಕುಮಾರ್ ಅವರಿಗೆ ಮುತ್ತಿಗೆ ಹಾಕಿ ಹೈದರಾಬಾದ್ ಸಂಶೋಧನಾ ವಿವಿ ಪ್ರವೇಶ ಮಾಡದಂತೆ ತೆಡೆ ಹಾಕಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JNUSU president Kanhaiya Kumar was today shown black flags at a function here by two unidentified persons who were roughed up by his supporters before being detained by the police for questioning. The two persons belonging to a little-known outfit -'Youth Swaraj' - showed black flags to the JNUSU president, besides raising slogan of 'Bharat Mata Ki Jai' while he was speaking at a function 'Azadi' in SK Memorial hall here organised by AISF and AIYF.
Please Wait while comments are loading...