Jio IPO: ಭಾರತದ IPO ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಜಿಯೋ; ಅಕ್ಟೋಬರ್ 28ಕ್ಕೆ ಷೇರು ಲಿಸ್ಟಿಂಗ್
Jio IPO: ಇದೇ ಮೊದಲ ಬಾರಿಗೆ ರಿಲಯನ್ಸ್ ಕಂಪನಿಯ ಜಿಯೋ IPO ಷೇರು ಪೇಟೆಯಲ್ಲಿ ವಿಶ್ವದಾಖಲೆ ಬರದಿದೆ. ದೇಶಾದ್ಯಂತ ಯಶಸ್ವಿ ಟೆಲಿಕಾಂ ಸೇವೆ ನೀಡುತ್ತಿರುವ ಜಿಯೋ ಐಪಿಓ ಪ್ರವೇಶಿಸಿದೆ. 30000 ಕೋಟಿ ಮೌಲ್ಯದ IPOಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆದರೆ ನಿರೀಕ್ಷೆಗೂ ಮೀರಿ ಅಂದರೆ ಬರೋಬ್ಬರಿ 1.39 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಮೂಲಕ 7.4ಲಕ್ಷ ಕೋಟಿ ರೂಪಾಯಿಯ ಬಿಡ್ ಸಲ್ಲಿಕೆ ಆಗಿದೆ. ಹೀಗೆ ಸಾರ್ವಕಾಲಿ ದಾಖಲೆ ಮಾಡುವ ಮೂಲಕ ಭಾರತದಲ್ಲಿ ಇಂಟರ್‌ನೆಟ್ ಸೇವೆಗೆ ಮುಂದಾಗಿದ್ದ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್‌ಗೆ ಟಕ್ಕರ್ ನೀಡಿದೆ.
ಜಿಯೋ IPOಗೆ ಅರ್ಜಿ ಸಲ್ಲಿಕೆ ಮುಕ್ತಾಯಗೊಂಡ ಬೆನ್ನಲ್ಲೆ ಬಿಡ್, ಅರ್ಜಿಗಳ ಮಾಹಿತಿ ಬಹಿರಂಗವಾಗಿದೆ. ದೇಶದ ಅತಿದೊಡ್ಡ ಐಪಿಒ ಎಂಬ ಐತಿಹಾಸಿಕ ದಾಖಲೆ ರಿಲಯನ್ಸ್‌ಗೆ ಧಕ್ಕಿದೆ. ಆ್ಯಂಕರ್ ಬೇಡಿಕೆ ಸೇರಿದಂತೆ ಒಟ್ಟು ಸುಮಾರು ₹7.40 ಲಕ್ಷ ಕೋಟಿ ಮೌಲ್ಯದ ಬಿಡ್‌ಗಳು ಸಲ್ಲಿಕೆ ಆಗಿದ್ದು, ಇದು ದೇಶದ ಉದ್ಯಮಗಳ, ಹೂಡಿಕೆದಾರರ ಗಮನ ಸೆಳೆದಿದೆ.

ಶುಕ್ರವಾರ ಬಿಡ್ಡಿಂಗ್ ಮುಕ್ತಾಯ, ಅಂಕಿ ಅಂಶ ಬಹಿರಂಗ
ಶುಕ್ರವಾರ ರಾತ್ರಿ 7 ಗಂಟೆಗೆ ಬಿಡ್ಡಿಂಗ್ ಕೊನೆಗೊಂಡಿತು. ಆ ಹೊತ್ತಿಗೆ ಜಿಯೋ ₹30,213 ಕೋಟಿ ಮೌಲ್ಯದ ಈ ಸಾರ್ವಜನಿಕ ಬಿಡುಗಡೆಯು ಹೂಡಿಕೆದಾರರ ಅರ್ಜಿಗಳ ವಿಷಯದಲ್ಲೂ ವಿಶ್ವ ದಾಖಲೆ ನಿರ್ಮಿಸಿದೆ. ಏಕೆಂದರೆ ಮೂರು ದಿನಗಳಲ್ಲಿ 1.38 ಕೋಟಿಗೂ ಹೆಚ್ಚು ಅರ್ಜಿಗಳು ಬಂದಿವೆ. ಒಟ್ಟು ಬೇಡಿಕೆಯಲ್ಲಿ ಸುಮಾರು ₹4.90 ಲಕ್ಷ ಕೋಟಿ ಆ್ಯಂಕರ್ ಅಲ್ಲದ ಬಿಡ್‌ಗಳು ಮತ್ತು ₹2.50 ಲಕ್ಷ ಕೋಟಿ ಆ್ಯಂಕರ್ ಬೇಡಿಕೆ ಸೇರಿವೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಐಪಿಓಗೆ ಬಿಡ್ ಸಲ್ಲಿಸಿರುವುದು ಇದೇ ಮೊದಲು. ಈ ಮೂಲಕ ಈ ಹಿಂದೆ ವಾರಿ ಎನರ್ಜಿ ಐಪಿಓಗೆ 97 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದ್ದವು. ಜಿಯೋ ಆ ದಾಖಲೆ ಪುಡಿ ಮಾಡಿದೆ.
ದೇಶಾದ್ಯಂತ ಜಿಯೋ ಸೇವೆ ಪಡೆಯುವ ಜನರಿಗೆ, ಹೂಡಿಕೆದಾರರಿಗೆ ಜಿಯೋ ಮೇಲೆ ನಂಬಿಕೆ ಹುಟ್ಟಿಕೊಂಡಿದೆ. ಕುಸಿದಿರುವ ಷೇರುಪೇಟೆಯಲ್ಲಿ ಜಿಯೋ ಐಪಿಒಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದ್ದು, ರೀಟೇಲ್ ಹೂಡಿಕೆದಾರರೂ ಬಲವಾದ ಆಸಕ್ತಿ ತೋರಿಸಿದ್ದಾರೆ. ರೀಟೇಲ್ ಹೂಡಿಕೆದಾರರಿಗೆ ಮೀಸಲಿಟ್ಟಿದ್ದ ಸುಮಾರು 8.5 ಕೋಟಿ ಷೇರುಗಳಿಗೆ ಪ್ರತಿಯಾಗಿ 23 ಕೋಟಿಗೂ ಹೆಚ್ಚು ಷೇರುಗಳಿಗೆ ಬಿಡ್‌ಗಳು ಬಂದಿವೆ. ಚಂದಾದಾರಿಕೆ 2.72 ಪಟ್ಟಿಗೆ ತಲುಪಿದೆ.
ಸಾಂಸ್ಥಿಕ ಹೂಡಿಕೆದಾರರು ಬೇಡಿಕೆಯಲ್ಲೂ ಮುಂದಿದ್ದು, ಅರ್ಹ ಸಾಂಸ್ಥಿಕ ಖರೀದಿದಾರರ (QIB) ವಿಭಾಗವು 70.55 ಪಟ್ಟು ಚಂದಾದಾರಿಕೆ ಪಡೆದಿದೆ. ಸಾಂಸ್ಥಿಕೇತರ ಹೂಡಿಕೆದಾರರ (NII) ವರ್ಗವು 14 ಪಟ್ಟು, ಅರ್ಹ ರಿಲಯನ್ಸ್ ಇಂಡಸ್ಟ್ರೀಸ್ ಷೇರುದಾರರಿಗೆ ಮೀಸಲಾದ ಭಾಗವು 7.60 ಪಟ್ಟು ಚಂದಾದಾರಿಕೆ ಹೊಂದಿದೆ ಎಂದು ವರದಿ ಹೇಳುತ್ತದೆ.
ಅಕ್ಟೋಬರ್ 28ಕ್ಕೆ ಷೇರುಪೇಟೆಯಲ್ಲಿ ಜಿಯೋ ಲಿಸ್ಟಿಂಗ್
ಈ ಬಿಡ್‌ಗಳಲ್ಲಿ ಉದ್ಯೋಗಿಗಳ ಚಂದಾದಾರಿಕೆ ಪಾಲು ಸುಮಾರು 2.93 ರಷ್ಟಿದೆ. IPO ಪ್ರಕ್ರಿಯೆ ಪೂರ್ಣಗೊಳಿಸಿರುವ ಜಿಯೋ ಕಂಪನಿಯು ಇದೇ ತಿಂಗಳ ಸೋಮವಾರ (ಅ.26) ರಂದು ಷೇರು ಹಂಚಿಕೆ ಮಾಡಲಿದೆ. ಅದು ಅರ್ಹ ಹೂಡಿಕೆದಾರರ ಡಿಮ್ಯಾಟ್ ಖಾತೆಗಳಿಗೆ ಅಕ್ಟೋಬರ್ 27ರಂದು ಜಮೆಯಾಗಲಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಅಕ್ಟೋಬರ್ 28ರಂದು ಬಿಎಸ್ಇ (BSE) ಹಾಗೂ ಎನ್ಎಸ್ಇ (NSE)ಯಲ್ಲಿ ಲಿಸ್ಟಿಂಗ್ ಆಗಲಿದೆ. ಆಗ ಎಲ್ಲರೂ ಬಹಿರಂಗ ಷೇರು ಖರೀದಿಸಬಹುದು.
ವಾರೀ ಎನರ್ಜೀಸ್ ಕುರಿತು...
2024ರ ಅಕ್ಟೋಬರ್ ನಲ್ಲಿ 'ವಾರೀ ಎನರ್ಜೀಸ್' ಕಂಪನಿಯು ಐಪಿಓ ಕರೆದಿತ್ತು. ಆಗ ಅದು 97.3 ಲಕ್ಷ ಅರ್ಜಿಗಳನ್ನು ಸ್ವೀಕರಿಸಿತ್ತು. ಎರಡನೇ ದಿನದಲ್ಲಿ 75 ಲಕ್ಷ ಅರ್ಜಿಗಳಲ್ಲಿ ಸಲ್ಲಿಕೆ ಆಗಿದ್ದವು. ಇಲ್ಲಿಯವರೆಗೆ ವಾರೀ ಕಂಪನಿಯದ್ದೇ ದಾಖಲೆ ಇತ್ತು. ಇದೀಗ ಶೇ. 42ರಷ್ಟು ಅಧಿಕ ಅರ್ಜಿ ಸ್ವೀಕರಿಸುವ ಮೂಲಕ ಜಿಯೋ ಆ ಎಲ್ಲ ಷೇರುಪೇಟೆ ದಾಖಲೆ ಸರಿಗಟ್ಟಿದೆ.


Click it and Unblock the Notifications
