51,000 ಪಡೆದಿದ್ದು ನಿಜ, ತಾಕತ್ತಿದ್ದರೆ ಪಿಎಫ್ಐ ನಿಷೇಧಿಸಿ: ಜಿಗ್ನೇಶ್

Subscribe to Oneindia Kannada

ಅಹಮದಾಬಾದ್, ಡಿಸೆಂಬರ್ 20: ಪಿಎಫ್ಐ ಸಂಘಟನೆಯಿಂದ ತಾವು ಗುಜರಾತ್ ಚುನಾವಣೆ ಸಂದರ್ಭದಲ್ಲಿ 51,000 ರೂಪಾಯಿ ಪಡೆದಿದ್ದು ನಿಜ ಎಂದು ವಡ್ಗಾಮ್ ನೂತನ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ಮಾತ್ರವಲ್ಲ ಕೇಂದ್ರ ಸರಕಾರ ಸಂಘಟನೆಯನ್ನು ನಿಷೇಧಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಗುಜರಾತ್: ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿಗೆ ಭರ್ಜರಿ ಜಯ

ಎಸ್.ಡಿ.ಪಿ.ಐ ಎಂಬುದು ಪಿಎಫ್ಐನ ರಾಜಕೀಯ ಸಂಘಟನೆಯಾಗಿದ್ದು ನೋಂದಾಯಿತ ರಾಜಕೀಯ ಪಕ್ಷವಾಗಿದೆ. "ಒಂದೊಮ್ಮೆ ಪಿಎಫ್ಐ ಸಂಶಯಾಸ್ಪದ ಸಂಘಟನೆಯಾಗಿದ್ದಲ್ಲಿ, 56 ಇಂಚಿನ ಎದೆಯ ಮನುಷ್ಯ ಏನು ಮಾಡುತ್ತಿದ್ದಾರೆ? ಅವರ ಯಾವುದೇ ಕ್ರಮ ಜರುಗಿಸುತ್ತಿಲ್ಲ ಯಾಕೆ?," ಎಂದು ಪ್ರಶ್ನಿಸಿದ್ದಾರೆ.

Jignesh Mevani admits of accepting Rs 51,000 from PFI

ಇದೇ ವೇಳೆ ಅವರು ಟ್ವಿಟ್ಟರಿನಲ್ಲಿ, ಗುಜರಾತ್ ನಲ್ಲಿ ಬಿಜೆಪಿ ಕೇವಲ 99 ಸ್ಥಾನಗಳಲ್ಲಿ ಗೆದ್ದಿದೆ. 2019ರಲ್ಲಿ ದೇಶ ಬದಲಾವಣೆಗೆ ಸಿದ್ದವಾಗಿದೆ ಎಂದಿದ್ದಾರೆ.

ಮಾತ್ರವಲ್ಲ ಖಾಸಗಿ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ರಾಜಕೀಯ ನಿವೃತ್ತಿ ತೆಗೆದುಕೊಂಡು ಹಿಮಾಲಯಕ್ಕೆ ಹೋಗಬೇಕು ಎಂದು ಸಲಹೆ ನೀಡಿದ್ದಾರೆ.

ತಮ್ಮ 70ರ ವಯಸ್ಸಲ್ಲೂ ಮೋದಿ ತಾವು ಇನ್ನೂ ಯುವಕ ಎನ್ನುತ್ತಿದ್ದಾರೆ. ಅವರು ಸನ್ಯಾಸತ್ವ ತೆಗೆದುಕೊಳ್ಳಬೇಕು ಎಂದು ಜಿಗ್ನೇಶ್ ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ವರ್ಷಕ್ಕೆ ಎರಡು ಕೋಟಿ ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಇದೀಗ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗಿವೆ. ಇಷ್ಟೊತ್ತಿಗೆ 8 ಕೋಟಿ ಜನರಿಗೆ ಉದ್ಯೋಗ ಸಿಗಬೇಕಿತ್ತು. ಈಗ ಪ್ರಧಾನಿ ಯುವ ಜನಾಂಗ ಎಂ ಶಬ್ದವನ್ನೇ ಪ್ರಸ್ತಾಪಿಸುತ್ತಿಲ್ಲ," ಎಂದು ಅವರು ಟೀಕಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vadgam MLA Jignesh Mevani admitted that he had taken Rs 51,000 as donation from the Popular Front of India (PFI) for his campaign in Gujarat assembly elections 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ