ಕೊಳೆಯುತ್ತಿದ್ದ ಮಾವಿಗೆ ಈಗ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್‌: ಆದಾಯವನ್ನ ಮೂರು ಪಟ್ಟು ಹೆಚ್ಚಿಸಿಕೊಂಡ ಈ ರೈತ ಮಹಿಳೆ

Jharkhand Woman Farmer: ಜಾರ್ಖಂಡ್‌ನ ಸಿಮ್ಡೆಗಾ ಜಿಲ್ಲೆಯ ಬೀರ್ನಿಬೆರಾ ಗ್ರಾಮದ 50 ವರ್ಷದ ಮಹಿಳಾ ರೈತೆ ಜಿವಂತಿ ಬಾರಾ ಅವರಿಗೆ ಪ್ರತಿ ಬೇಸಿಗೆಯಲ್ಲಿ ತಮ್ಮ ತೋಟದಲ್ಲಿ ಬೆಳೆದ ಆಮ್ರಪಾಲಿ ಮಾವಿನಹಣ್ಣುಗಳನ್ನ ನೋಡಿ ಖುಷಿಯ ಜೊತೆ ಜೊತೆಗೆ ಆತಂಕವೂ ಆಗ್ತಿತ್ತು. ಪ್ರತಿ ವರ್ಷ ಎಷ್ಟೇ ಕಷ್ಟಪಟ್ಟು ಬೆಳೆದರೂ, ಸರಿಯಾದ ಸಮಯಕ್ಕೆ ಖರೀದಿದಾರರು ಸಿಗದೆ, ಸ್ಥಳೀಯ ವ್ಯಾಪಾರಿಗಳು ಹೇಳಿದಷ್ಟು ತುಂಬಾ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತಿತ್ತು.

ಇನ್ನೂ, ಉಳಿದ ಹಣ್ಣುಗಳು ಮರದಲ್ಲೇ ಕೊಳೆಯುತ್ತಿದ್ದವು. ಹೀಗಾಗಿ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಅವರು ಕಂಗಾಲಾಗಿದ್ದರು. ಆದರೆ, ಇಂದು ಮಹಿಳೆಯರೇ ಮುನ್ನಡೆಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳ (FPO) ಬೆಂಬಲದೊಂದಿಗೆ ಅವರೇ ಬೆಳೆದ ಮಾವು ಇಂಗ್ಲೆಂಡ್, ಇಟಲಿ ಮತ್ತು ಯುಎಇ ದೇಶಗಳಿಗೆ ರಫ್ತಾಗುತ್ತಿದೆ. ಅವರ ಆದಾಯವೂ ಇದೀಗ ಮೂರು ಪಟ್ಟು ಹೆಚ್ಚಾಗಿದೆ ಎಂದರೆ ನೀವು ನಂಬುತ್ತೀರಾ?

Jharkhand Woman Farmer Triples Income as Her Amrapali Mangoes Reach Markets in England and UAE

Jharkhand Woman Farmerಗೆ ರೈತ ಉತ್ಪಾದಕ ಸಂಸ್ಥೆಗಳ ಬೆಂಬಲ

ಈ ಒಳ್ಳೆಯ ಬದಲಾವಣೆಯ ಹಿಂದೆ ಜಾರ್ಖಂಡ್ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಬರ್ಸಾ ಹರಿತ್ ಗ್ರಾಮ ಯೋಜನೆ, PRADAN ಮತ್ತು ಜಾರ್ಖಂಡ್ ರಾಜ್ಯ ಜೀವನೋಪಾಯ ಉತ್ತೇಜನ ಸೊಸೈಟಿನಂತಹ ಅನೇಕ ಸಂಸ್ಥೆಗಳ ಶ್ರಮವಿದೆ. ಕೇವಲ ಮಾವು ಬೆಳೆಯುವುದಷ್ಟೇ ಅಲ್ಲದೆ, ಕೊಯ್ಲಿನ ನಂತರದ ನಿರ್ವಹಣೆ, ಮಾರುಕಟ್ಟೆ ಸಂಪರ್ಕದ ಕೊರತೆಯನ್ನ ನೀಗಿಸಲು ರೈತ ಉತ್ಪಾದಕ ಸಂಸ್ಥೆಗಳು (FPOs) ನೆರವಿಗೆ ಬಂದವು.

ಇದೀಗ ರಾಜ್ಯದಾದ್ಯಂತ 2.15 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿವೆ. ಮಹಿಳಾ ಜಾಗೃತಿ ಮತ್ತು ಬಿಯುರಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿಗಳು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದವು. ಮಹಿಳೆಯರಿಗೆ ಕೀಟ ನಿಯಂತ್ರಣ, ಮಾವಿನ ಹಣ್ಣುಗಳನ್ನು ಕೀಳುವ ಸರಿಯಾದ ವಿಧಾನ, ರಸ ತೆಗೆಯುವಿಕೆ, ವಿಂಗಡಣೆ, ಮತ್ತು ರಫ್ತು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ವೈಜ್ಞಾನಿಕ ತರಬೇತಿ ನೀಡಲಾಯಿತು.


ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಆಮ್ರಪಾಲಿ ಮಾವು ರಫ್ತು

ತರಬೇತಿಯ ನಂತರ, ರೈತರು ತಾವು ಬೆಳೆದ ಆಮ್ರಪಾಲಿ ಮತ್ತು ಮಲ್ಲಿಕಾ ಮಾವಿನಹಣ್ಣುಗಳನ್ನು ರಫ್ತು ಗುಣಮಟ್ಟಕ್ಕೆ ತಕ್ಕಂತೆ ಸಿದ್ಧಪಡಿಸಲು ಪ್ರಾರಂಭಿಸಿದರು. ರೈತರು ಮತ್ತು ಖರೀದಿದಾರರ ನಡುವೆ ನೇರ ಸಂಪರ್ಕ ಕಲ್ಪಿಸಲು ಹಲವು ಸಭೆಗಳನ್ನ ಆಯೋಜಿಸಲಾಯಿತು.

2026ರ ಮೇ ಮತ್ತು ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ಸಿಮ್ಡೆಗಾದಿಂದ ಇಂಗ್ಲೆಂಡ್ ಮತ್ತು ಇಟಲಿಗೆ ಮಾವಿನ ಹಣ್ಣುಗಳನ್ನ (mango) ಯಶಸ್ವಿಯಾಗಿ ರಫ್ತು ಮಾಡಲಾಯಿತು. ಕೇವಲ ರಫ್ತು ಮಾತ್ರವಲ್ಲದೆ, ಉಳಿದ ಹಣ್ಣುಗಳನ್ನ ದೇಶೀಯ ಮಾರುಕಟ್ಟೆಗಳಾದ ಬಿಗ್‌ಬಾಸ್ಕೆಟ್, ರಿಲಯನ್ಸ್, ಬ್ಲಿಂಕಿಟ್ ನಂತಹ ದೊಡ್ಡ ಕಂಪನಿಗಳಿಗೂ ಪೂರೈಸಲು ಆರಂಭಿಸಿದರು. ಜಾರ್ಖಂಡ್‌ನ ವಿವಿಧ ಜಿಲ್ಲೆಗಳಿಂದ ಒಟ್ಟು 15.8 ಮೆಟ್ರಿಕ್ ಟನ್ ಮಾವು ದುಬೈ, ಲಂಡನ್ ಮತ್ತು ಇಟಲಿಗೆ ರಫ್ತಾಗಿದೆ.

ಜಾರ್ಖಂಡ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು

ಈ ಹೊಸ ಮಾರುಕಟ್ಟೆ ಮತ್ತು ರಫ್ತು ವ್ಯವಸ್ಥೆಯಿಂದಾಗಿ ಜಾರ್ಖಂಡ್ ಮಾವು ಬೆಳೆಗಾರರ ಆದಾಯ ಗಣನೀಯವಾಗಿ ಏರಿಕೆಯಾಗಿದೆ. ಹಿಂದೆ ಮಾವು ಮಾರಾಟದಿಂದ ಕೇವಲ 25,000 ರೂಪಾಯಿ ಆದಾಯ ಗಳಿಸುತ್ತಿದ್ದ ಜಿವಂತಿ ಎನ್ನುವ ರೈತಾ ಮಹಿಳೆ, ಈ ವರ್ಷ ಬರೋಬ್ಬರಿ 80,000 ರೂಪಾಯಿ ಆದಾಯ ಗಳಿಸಿದ್ದಾರೆ. ಸ್ಥಳೀಯವಾಗಿ ಪ್ರತಿ ಕೆಜಿಗೆ 20 ರೂಪಾಯಿ ಸಿಗುತ್ತಿದ್ದ ಜಾಗದಲ್ಲಿ, ಈಗ ದೇಶೀಯ ಮಾರುಕಟ್ಟೆಯಲ್ಲಿ 31 ರೂಪಾಯಿ ಹಾಗೂ ರಫ್ತು ಗುಣಮಟ್ಟದ ಹಣ್ಣಿಗೆ 42 ರೂಪಾಯಿವರೆಗೆ ಉತ್ತಮ ಬೆಲೆ ಸಿಗುತ್ತಿದೆ.

ಕೇವಲ ತೋಟದ ಕೆಲಸಕ್ಕೆ ಸೀಮಿತವಾಗಿದ್ದ ಮಹಿಳೆಯರು, ಈಗ ಮಾರಾಟ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ನಿರ್ಧಾರಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಬ್ಯುರುಹೊಂಜೇರ್ ಗ್ರಾಮದ ದೇವಂತಿ ದೇವಿ ಹೇಳುವಂತೆ, "ನಮ್ಮ ಹಣ್ಣುಗಳು ವಿದೇಶಕ್ಕೆ ಹೋಗುತ್ತಿರುವುದು ನಮಗೆ ಅತೀವ ಹೆಮ್ಮೆ ತಂದಿದೆ. ಮಹಿಳೆಯರು ಒಗ್ಗೂಡಿದರೆ ಇಡೀ ಸಮುದಾಯಕ್ಕೆ ಉತ್ತಮ ಆರ್ಥಿಕ ಭದ್ರತೆ ಮತ್ತು ಅವಕಾಶಗಳನ್ನ ಸೃಷ್ಟಿಸಬಹುದು."

ಇದು ಕೇವಲ ಮಾವು ರಫ್ತಿನ (export) ಯಶಸ್ಸಿನ ಕಥೆಯಲ್ಲ, ಬದಲಾಗಿ ತಮ್ಮದೇ ಜಮೀನಿನಲ್ಲಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಪಡೆದು ಮಕ್ಕಳ ಶಿಕ್ಷಣ, ಆರೋಗ್ಯ ಸುಧಾರಿಸಿಕೊಂಡ ಗ್ರಾಮೀಣ ಮಹಿಳೆಯರ ಸ್ಫೂರ್ತಿದಾಯಕ ಸಾಧನೆಯ ಕಥೆ. ಒಮ್ಮೆ ಮರದಾಡಿಯೇ ಕೊಳೆಯುತ್ತಿದ್ದ ಜಿವಂತಿ ಅವರ ಮಾವಿನಹಣ್ಣುಗಳು, ಇಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಾ, ಜಾರ್ಖಂಡ್‌ನ ರೈತರ ಶ್ರಮವನ್ನ ಜಗತ್ತಿಗೆ ಸಾರುತ್ತಿವೆ. ಕೃಷಿ ಕೂಡ ಒಂದು ಗೌರವಾನ್ವಿತ ಹಾಗೂ ಸುಸ್ಥಿರ ಜೀವನೋಪಾಯವಾಗಬಲ್ಲದು ಎಂಬುದಕ್ಕೆ ಈ ಮಹಿಳೆಯರೇ ಒಂದೊಳ್ಳೆ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+