ಆಧಾರ್ ನೊಂದಿಗೆ ರೇಶನ್ ಕಾರ್ಡ್ ಜೋಡಿಸದ ತಪ್ಪಿಗೆ ಮುಗ್ಧ ಬಾಲಕಿ ಬಲಿ!

ಸಿಂದೆಗಾ(ಜಾರ್ಖಂಡ್), ಅಕ್ಟೋಬರ್ 17: ಆಧಾರ್ ಕಾರ್ಡ್ ನೊಂದಿಗೆ ರೇಶನ್ ಕಾರ್ಡ್ ಜೋಡಣೆಯಾಗಿಲ್ಲ ಎಂಬ ಕಾರಣಕ್ಕೆ ದಿನಸಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದರಿಂದ ಹನ್ನೊಂದು ವರ್ಷದ ಹೆಣ್ಣು ಮಗು ಅಸುನೀಗಿದ ಮನಕಲಕುವ ಘಟನೆ ಜಾರ್ಖಂಡ್ ರಾಜ್ಯದ ಸಿಂದೆಗಾ ಜಿಲ್ಲೆಯಲ್ಲಿ ನಡೆದಿದೆ.

ಇವರ್ಯಾರೂ ಆಧಾರ್ ಕಾರ್ಡ್ ಹೊಂದಿರದ ಕಾರಣ ಅವರಿಗೆ ಕುಟುಂಬದ ರೇಶನ್ ಕಾರ್ಡ್ ನೊಂದಿಗೆ ಆಧಾರ್ ಜೋಡಿಸಲು ಸಾಧ್ಯವಾಗಿಲ್ಲ. ರೇಶನ್ ಗೆಂದು ಹೋಗಿದ್ದ ಮಹಿಳೆ ಅಕ್ಕಿ ಕೇಳಿದರೆ, ಅಲ್ಲಿದ್ದ ಅಧಿಕಾರಿಗಳು ಒರಟಾಗಿ ಉತ್ತರಿಸಿ, ಆಧಾರ್ ಲಿಂಕ್ ಮಾಡದ ರೇಶನ್ ಕಾರ್ಡ್ ಗೆ ಅಕ್ಕಿ ಕೊಡುವುದಕ್ಕೆ ಬರುವುದಿಲ್ಲ ಎಂದಿದ್ದಾರೆ. ಮಹಿಳೆ ಪರಿಪರಿಯಾಗಿ ಬೇಡಿಕೊಂಡರೂ ಆಕೆಯ ಕಣ್ಣೀರಿಗೆ ಬೆಲೆ ಸಿಕ್ಕಿಲ್ಲ.

Jharkhand girl starves to death as family did not have Aadhaar-linked ration card

ಇದರಿಂದ ಹಸಿವು ತಾಳಲಾರದೆ ಆಕೆಯ ಮಗು ಸೆಪ್ಟೆಂಬರ್ 28 ರಂದೇ ಅಸುನೀಗಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಆಧಾರ್ ಕಾರ್ಡ್ ಹೊಂದದೇ ಇರುವವರು, ಆಧಾರ್ ನಂಬರ್ ಪಡೆಯುವವರೆಗೆ ಅವರಿಗೆ ಯಾವ ಕಾರಣಕ್ಕೂ ರೇಶನ್ ನೀಡುವುದನ್ನು ನಿಲ್ಲಿಸಬೇಡಿ ಎಂದು ಜಾರ್ಖಂಡ್ ನ ಆಹಾರ ಮತ್ತು ಪೂರೈಕೆ ಮಂತ್ರಿ ಸರಯು ರೈ ತಿಳಿಸಿದ್ದು, ಇಂಥ ಘಟನೆ ಮರುಕಳಿಸಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+