• search

ದೇಶದಲ್ಲೇ ಮೊದಲ ತೀರ್ಪು: ಗೋರಕ್ಷಣೆ ಹೆಸರಲ್ಲಿ ಹತ್ಯೆಗೈದವರಿಗೆ ಶಿಕ್ಷೆ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ರಾಮಗರ್, ಮಾರ್ಚ್ 17: ಜಾರ್ಖಂಡ್ ನ ರಾಮಗರ್ ನಲ್ಲಿ ಕಳೆದ ಒಂಭತ್ತು ತಿಂಗಳಿಗೂ ಮೊದಲು ಗೋ ರಕ್ಷಣೆಯ ಹೆಸರಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ರಾಮಗರ್ ತ್ವರಿತ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  11 ಆರೋಪಿಗಳಲ್ಲಿ ಓರ್ವನನ್ನು ಬಿಜೆಪಿ ಮುಖಂಡ ಎಂದು ಗುರುತಿಸಲಾಗಿದ್ದು, ಈ ತಂಡಲ್ಲಿ ಸ್ಥಳೀಯ ಗೋ ರಕ್ಷಾ ಸಮಿತಿಯ ಮೂವರು ಸದಸ್ಯರೂ ಇದ್ದಾರೆ. ಶಿಕ್ಷೆಯ ಪ್ರಮಾಣವನ್ನು ಮಾರ್ಚ್ 21 ರಂದು ನ್ಯಾಯಾಲಯ ಘೋಷಿಸಲಿದೆ.ಗೋರಕ್ಷಣೆಯ ಹೆಸರಲ್ಲಿ ಹತ್ಯೆ ಮಾಡಿದವರಿಗೆ ಶಿಕ್ಷೆ ನೀಡಿದ ದೇಶದ ಮೊಟ್ಟ ಮೊದಲ ಪ್ರಕರಣ ಇದಾಗಿದೆ.

  ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ, ಸ್ಪಷ್ಟ ಸಂದೇಶ ರವಾನಿಸಿದ ಮೋದಿ

  2017 ಜೂನ್ 29 ರಂದು ಅಲಿಮುದ್ದಿನ್ ಅನ್ಸಾರಿ ಎಂಬ ಮಾಂಸ ವ್ಯಾಪಾರಿಯನ್ನು ಗೋಹತ್ಯೆಯ ಆರೋಪದ ಮೇಲೆ ಸಾರ್ವಜನಿಕವಾಗಿಯೇ ಹತ್ಯೆಗೈಯ್ಯಲಾಗಿತ್ತು. ಗೋ ರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ವತಃ ಪ್ರಧಾನಿ ಮೋದಿ ಹೇಳಿದ್ದರೂ, ಪ್ರಧಾನಿ ಮೋದಿಯವರ ಮಾತಿಗೆ ಕ್ಯಾರೇ ಎನ್ನದ ಈ ಗುಂಪು ಅನ್ಸಾರಿಯನ್ನು ಕೊಲೆ ಮಾಡಿತ್ತು.

  Jharkhand: First conviction in lynching over cow: 11 held guilty

  ದೋಷಿಗಳನ್ನು ಇಲ್ಲಿನ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ನಿತ್ಯಾನಂದ ಮಹಾತೊ, ವಿಕಿ ಸಾ, ಸಿಕಂದರ್ ರಾಮ್, ವಿಕ್ರಮ್ ಪ್ರಸಾದ್, ರಾಜು ಕುಮಾರ್, ರೋಹಿತ್ ಠಾಕೂರ್, ಕಪಿಲ್ ಠಾಕೂರ್ ಮತ್ತು ಉತ್ತಮ್ ಕುಮಾರ್ ಎಂದು ಗುರುತಿಸಲಾಗಿದ್ದು. ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302, 147, 148, 149, 427 ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Almost 9 months after a meat trader was lynched by cow vigilantes in Jharkhan'd Ramgarh district, a fast track court convicted 11 people as assused. One of the 11 accused is a BJP leader. The quantum of punishment will be announced on March 21st.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more