ಬಿಜೆಪಿ ಲೋಕಸಭಾ ಟಿಕೆಟ್ ನಿರಾಕರಿಸಿದ ಶಾಸಕಿ
ರಾಂಚಿ, ಮಾರ್ಚ್ 13: ಲೋಕಸಭಾ ಚುನಾವಣೆ 2024ಯ ಟಿಕೆಟ್‌ಗಾಗಿ ನಾನು, ತಾಮುಂದೆ ಎನ್ನುವ ಹೊತ್ತಿನಲ್ಲಿ ಇಲ್ಲೊಬ್ಬ ಶಾಸಕರು ಬಿಜೆಪಿಯ ಟಿಕೆಟ್ ಆಫರ್ ಅನ್ನು ನಿರಾಕರಿಸಿದ್ದಾರೆ. ತಮಗೆ ಬಿಜೆಪಿ ಟಿಕೆಟ್ ಕೊಡುವುದಾಗಿ ತಿಳಿಸಿದರೂ ಸಹಿತ ಯಾವ ಕಾರಣಕ್ಕೆ ನಾನು ತಿರಸ್ಕರಿಸಿದೆ ಎಂಬುದನ್ನು ಸ್ವತಃ ಅವರೇ ತಿಳಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಾರ್ಖಂಡ್ ರಾಜ್ಯದ ಬಾರ್ಕಗಾಂವ್ (Barkagaon) ವಿಧಾನಸಭಾ ಕ್ಷೇತ್ರದ ಶಾಸಕಿ ಅಂಬಾ ಪ್ರಸಾದ್ (Amba Prasad) ಅವರು ಬಿಜೆಪಿಯ ಟಿಕೆಟ್ ಅನ್ನು ಕಡೆಗಣಿಸಿದ್ದಾರೆ. ಬಿಜೆಪಿ ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಗೆ ಶಾಸಕಿಗೆ ಆಫರ್ ನೀಡಿತ್ತು.

ಜಾರ್ಖಂಡ್ ಕಾಂಗ್ರೆಸ್ ಶಾಸಕ ಅಂಬಾ ಪ್ರಸಾದ್ ಅವರು ಮೇಲೆ ಜಾರಿ ನಿರ್ದೇಶನಾಲಯವು (ED) ದಾಳಿ ನಡೆಸಿತ್ತು.
ದಾಳಿ ವೇಳೆ ಅವರ ಮನೆಯನ್ನು ತಡಕಾಡಿದ್ದ ಅಧಿಕಾರಿಗಳು ವಿಚಾರಣೆಗೆ ಕರೆಸಿದ್ದರು. ವಿಚಾರಣೆ ವೇಳೆ ಬೆಳಗ್ಗೆಯಿಂದ ಸಂಜೆವರೆಗೆ ಕಾಯಿಸಿದ್ದಾರೆ. ಇಡೀ ದಿನ ಚಿತ್ರಹಿಂಸೆ ಕೊಟ್ಟಿದ್ದಲ್ಲದೇ, ನನ್ನನ್ನು ಗಂಟೆಗಟ್ಟಲೇ ನಿಲ್ಲುವಂತೆ ಮಾಡಿದ್ದರು ಎಂಬುದನ್ನು ಸ್ಮರಿಸಿದ್ದಾರೆ.
ಟಿಕೆಟ್ ಪಡೆಯುವಂತೆ ಒತ್ತಡ
ಈ ಕಾರಣದಿಂದ ಶಾಸಕಿ ಬಿಜೆಪಿ ಟಿಕೆಟ್ ಕಡೆಗಣಿಸಿದ್ದಾರೆ ಎನ್ನಲಾಗಿದೆ. ನನಗೆ ಬಿಜೆಪಿಯಿಂದ ಹಜಾರಿಬಾಗ್ ಲೋಕಸಭಾ ಟಿಕೆಟ್ ನೀಡಲಾಯಿತು, ಆ ಬಗ್ಗೆ ನಾನು ತಲೆಕೆಡಿಕೊಳ್ಳಲಿಲ್ಲ. ಈ ಸಂಬಂಧ ನನ್ನ ಮೇಲೆ ಒತ್ತಡ ಹೇರಲಾಯಿತು ಎಂದು ಪ್ರಸಾದ್ ಅವರು ಮಂಗಳವಾರ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಗೆಲ್ಲುವ ಅಭ್ಯರ್ಥಿ ಮೇಲೆ ಒತ್ತಡ ಸಹಜ
ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದಿಂದ ಬಂದವರು ಬಿಜೆಪಿಯ ಟಿಕೆಟ್ ಪಡೆದು ಕ್ಷೇತ್ರದಿಂದ ಸ್ಪರ್ಧಿಸುವಂತೆ ನನ್ನ ಮೇಲೆ ಒತ್ತಡ ಹೇರಿದ್ದರು. ನಾನು ಅದಕ್ಕೆ ಕಿವಿಗೊಡಲಿಲ್ಲ. ಒತ್ತಡಕ್ಕೆ ಮಣಿಯಲಿಲ್ಲ. ಬಿಜೆಪಿ ನನ್ನನ್ನು ಹಜಾರಿಬಾಗ್‌ನಲ್ಲಿ ಪ್ರಬಲ ಅಭ್ಯರ್ಥಿ ತಿಳಿದುಕೊಂಡಿದ್ದಾರೆ. ಕಾರಣ ನಾವು (ಕಾಂಗ್ರೆಸ್) ನಿರಂತರವಾಗಿ ಬಾರ್ಕಗಾಂವ್ (Barkagaon) ಸ್ಥಾನಗಳನ್ನು ಗೆಲ್ಲುತ್ತೇವೆ. ನಾವು ಕಾಂಗ್ರೆಸ್‌ನಿಂದ ಬಂದವರು, ಬಿಜೆಪಿಯಿಂದಲ್ಲ. ಹೀಗಾಗಿ ಅವರ ಕೆಂಗಣ್ಣಿಗೆ ನಾನು ಗುರಿಯಾಗುವುದು ಸುಲಭ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ, ಭೂ ಮತ್ತು ವರ್ಗಾವಣೆ-ಪೋಸ್ಟಿಂಗ್ ಹಗರಣಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಾಂಗ್ರೆಸ್ ಶಾಸಕನಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ದಾಳಿ ನಡೆದಿದೆ. ಅಂಬಾ ಪ್ರಸಾದ್ ಅವರ ರಾಂಚಿಯಲ್ಲಿರುವ ಮನೆ ಹಾಗೂ ಹಜಾರಿಬಾಗ್‌ನಲ್ಲಿರುವ ಅವರ ಮನೆಗಳ ಮೇಲೆ ಇಡಿ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿದ್ದರು.
ದಿನಪೂರ್ತಿ ಶಾಸಕಿ ಮನೆ ಶೋಧ
ಎಎನ್‌ಐ ವರದಿಗಳ ಪ್ರಕಾರ, ಶಾಸಕಿ ಮನೆಗಳು ಮತ್ತು ಆಸ್ತಿ ಮೇಲೆ ನಡೆದ ದಾಳಿ ಬೆಳಗ್ಗೆಯಿಂದ ಆರಂಭವಾಗಿ ತಡರಾತ್ರಿವರೆಗೆ ನಡೆಯಿತು.
2023 ರಲ್ಲಿ ಆಕೆಯ ವಿರುದ್ಧ ಕೇಂದ್ರ ಸಂಸ್ಥೆಯ ರಾಂಚಿ ವಲಯ ಕಚೇರಿಯಲ್ಲಿ ಹಣ ವರ್ಗಾವಣೆಯ ದೂರಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ದಾಳಿಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕಿ ಮೇಲೆ ಇಡಿ ದಾಳಿ ನಡೆಯುವುದು ಗೊತ್ತಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆ ಹೊತ್ತಿನಲ್ಲಿ ದುರುದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
-
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications