Jharkhand Election 2024: ಜಾರ್ಖಂಡ್ ಚುನಾವಣೆಗೆ ಕಾಂಗ್ರೆಸ್‌ನ 7 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
ಕಾಂಗ್ರೆಸ್ ಜಾರ್ಖಂಡ್ ವಿಧಾನಸಭಾ ಚುನಾವಣೆ 2024ರ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 7 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಹಾಗಾದರೆ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳ ಹೆಸರು ಹಾಗೂ ವಿವರ ತಿಳಿಯೋಣ.
ಪಾಕೂರ್‌ನಿಂದ ನಿಶಾತ್ ಆಲಂಗೆ ಪಕ್ಷ ಟಿಕೆಟ್ ನೀಡಿದೆ. ನಿಶಾತ್ ಆಲಂ ಕಾಂಗ್ರೆಸ್ ನಾಯಕ ಅಲಂಗೀರ್ ಆಲಂ ಅವರ ಪತ್ನಿ. ಅರುಣ್ ಸಾಹು ಅವರಿಗೆ ಬರ್ಹಿಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ದಲ್ತೆಂಗಂಜ್ ನಿಂದ ಕೆಎನ್ ತ್ರಿಪಾಠಿ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಸುರೇಶ್ ಕುಮಾರ್ ಬೈತಾ ಅವರನ್ನು ಕಣಕೆ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಇನ್ನೂ ಪಂಕಿಯಿಂದ ಸ್ಪರ್ಧಿಸಲು ಲಾಲ್ ಸೂರಜ್ ಅವರಿಗೆ ಟಿಕೆಟ್ ನಿಡಲಾಗಿದೆ ಸುಧೀರ್ ಕುಮಾರ್ ಚಂದ್ರವಂಶಿ ವಿಶ್ರಾಮಪುರದಿಂದ ಟಿಕೆಟ್ ಪಡೆದಿದ್ದಾರೆ.

ಮಂಗಳವಾರ ತಡರಾತ್ರಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ 21 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಪ್ರಸ್ತುತ ಸರ್ಕಾರದ ಹಣಕಾಸು ಸಚಿವ ರಾಮೇಶ್ವರ್ ಓರಾನ್ ಅವರನ್ನು ಮತ್ತೊಮ್ಮೆ ಲೋಹರ್ದಗಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅಜಯ್ ಕುಮಾರ್ ಅವರನ್ನು ಜೆಮ್‌ಶೆಡ್‌ಪುರ ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಇರ್ಫಾನ್ ಅನ್ಸಾರಿ ಅವರನ್ನು ಅವರ ಪ್ರಸ್ತುತ ಕ್ಷೇತ್ರ ಜಮ್ತಾರಾದಿಂದ ಮತ್ತೊಮ್ಮೆ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಪಕ್ಷವು ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರನ್ನು ಜೆಮ್‌ಶೆಡ್‌ಪುರ ಪಶ್ಚಿಮದಿಂದ ಕಣಕ್ಕಿಳಿಸಿದೆ.
ರಿಕ್ಷಾ ಓಡಿಸುವ ಮೂಲಕ ಬಂದು ನಾಮಪತ್ರ ಸಲ್ಲಿಕೆ
ಜಾರ್ಖಂಡ್‌ನ ಪಂಕಿಯಲ್ಲಿ ನೆಲೆಸಿರುವ ಸಾಗಲಿಂ ನಿವಾಸಿ ವಿನಯ್ ಡಾಂಗಿ ಅವರು ತಮ್ಮ ಸರಳತೆ ಮತ್ತು ದೃಢಸಂಕಲ್ಪದಿಂದ ಚುನಾವಣಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೇದಿನಿನಗರದ ಕಲೆಕ್ಟರೇಟ್ ಆವರಣದಲ್ಲಿ ಪಂಕಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ವಿನಯ್ ನಾಮಪತ್ರ ಸಲ್ಲಿಸಿದರು. ಇವರು ವೃತ್ತಿಯಲ್ಲಿ ರಿಕ್ಷಾ ಚಾಲಕರು.
ವಿನಯ್ ಡಂಗಿ ನಾಮಪತ್ರ ಸಲ್ಲಿಕೆಯಲ್ಲಿ ವಿಶೇಷವೆಂದರೆ ಸೈಕಲ್ ರಿಕ್ಷಾದಲ್ಲಿ ಕುಳಿತು ನಾಮಪತ್ರ ಸಲ್ಲಿಸಲು ಬಂದಿದ್ದ ಅವರು ಸರಳತೆ ಪ್ರದರ್ಶಿಸಿದ್ದಲ್ಲದೆ ಸಾರ್ವಜನಿಕರ ಹೃದಯದಲ್ಲಿ ಛಾಪು ಮೂಡಿಸಿದ್ದಾರೆ. ಸೈಕಲ್ ರಿಕ್ಷಾದಲ್ಲಿ ಬರುವ ಅವರ ಸರಳ ಶೈಲಿ ಮತ್ತು ವಿಶಿಷ್ಟ ನಡೆ ನೂರಾರು ಜನರನ್ನು ಆಕರ್ಷಿಸಿತು.
ಪಂಕಿ ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರದಿಂದ ಅಭಿವೃದ್ಧಿಗಳು ನಾಶವಾಗಿವೆ ಎನ್ನುತ್ತಾರೆ ರಿಕ್ಷಾ ಹತ್ತಿ ನಾಮಪತ್ರ ಸಲ್ಲಿಸಲು ಬಂದಿದ್ದ ವಿನಯ್. ಇಲ್ಲಿನ ಮುಖಂಡರು ಕ್ಷೇತ್ರದ ಜನತೆಗೆ ಏನೂ ಮಾಡಿಲ್ಲ, ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿದ್ದು, ಜನ ಸಾಮಾನ್ಯರ ಸಮಸ್ಯೆಗಳು ಕೇಳುವವರಿಲ್ಲದಂತಾಗಿದೆ. ವಿನಯ್ ತಮ್ಮ ಭಾಷಣದಲ್ಲಿ ಚುನಾವಣೆಯಲ್ಲಿ ಗೆದ್ದರೆ ಭ್ರಷ್ಟಾಚಾರವನ್ನು ತೊಡೆದುಹಾಕುವುದು ನನ್ನ ಮೊದಲ ಕೆಲಸ ಮತ್ತು ಸಾರ್ವಜನಿಕರ ಸೇವೆ ತನ್ನ ಆದ್ಯತೆಯಾಗಿದೆ ಎಂದು ಭರವಸೆ ನೀಡಿದರು.
ಈ ವಿಶಿಷ್ಟ ನಾಮನಿರ್ದೇಶನದ ನಂತರ, ಕ್ಷೇತ್ರದ ಜನರು ವಿನಯ್ ಅವರ ಸರಳತೆ ಮತ್ತು ದೃಢತೆಯನ್ನು ಮೆಚ್ಚುತ್ತಿದ್ದಾರೆ. ವಿನಯ್ ಅವರಂತಹ ಅಭ್ಯರ್ಥಿಗಳು ಮಾತ್ರ ಜನರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರು ಮಾತ್ರ ಸರಿಯಾದ ಕೆಲಸವನ್ನು ಮಾಡಬಹುದು ಎಂದು ಜನರು ಹೇಳುತ್ತಾರೆ.
ದೊಡ್ಡ ನಾಯಕರ ವಾಹನಗಳ ಮಧ್ಯೆ ರಿಕ್ಷಾ ಚಾಲಕನೊಬ್ಬ ಬದಲಾವಣೆಯ ಆಶಾಭಾವನೆ ಮೂಡಿಸಿದ್ದಾರೆ. ಚುನಾವಣಾ ವಾತಾವರಣದಲ್ಲಿ ವಿನಯ್ ಡಾಂಗಿಯ ಈ ಹೆಜ್ಜೆ ಹೊಸ ಆಕರ್ಷಣೆ ತಂದಿದೆ.












Click it and Unblock the Notifications