Jharkhand Assembly Election 2024: ಜಾರ್ಖಂಡ್‌ನಲ್ಲಿ ಇಂಡಿಯಾ ಮೈತ್ರಿಕೂಟ ಘೋಷಿಸಿದ ಸಪ್ತ ಗ್ಯಾರಂಟಿಗಳು
Jharkhand Assembly Election 2024: ಜಾರ್ಖಂಡ್ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಈಗಾಗಲೇ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಇದೀಗ ಇಂಡಿಯಾ ಮೈತ್ರಿ ಕೂಟದಿಂದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಹಾಗಾದರೆ ಈ ಎಷ್ಟು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜೆಎಂಎಂ ನೇತೃತ್ವದ ಮೈತ್ರಿಕೂಟ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ಬುಡಕಟ್ಟು ಜನಾಂಗದವರಿಗೆ ಸರ್ನಾ ಧರ್ಮ ಸಂಹಿತೆ ಮತ್ತು 1932ರ ಖತಿಯಾನ್ ಆಧಾರದ ಮೇಲೆ ವಾಸಸ್ಥಳ ನೀತಿ ಜಾರಿ ಸೇರಿದಂತೆ ಯುವಜನರಿಗೆ 10 ಲಕ್ಷ ಉದ್ಯೋಗಗಳನ್ನು ನೀಡುವ ಭರವಸೆ ನೀಡಿದೆ. "ಒಂದು ಮತ, ಏಳು ಗ್ಯಾರಂಟಿಗಳು" ಎಂಬ ಘೋಷಣೆಯಡಿಯಲ್ಲಿ ಇಂಡಿಯಾ ಮೈತ್ರಿಕೂಟ ಹಲವು ಭರವಸೆಗಳನ್ನು ನೀಡಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ ಸ್ಥಾಪಿಸಲು ಜೆಎಂಎಂ ಮೈತ್ರಿಕೂಟ ಪ್ರತಿಜ್ಞೆ ಮಾಡಿದೆ.

ಮುಖ್ಯಮಂತ್ರಿ ಹೇಮಂತ್ ಸೋರೆನ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಪ್ರಮುಖ ನಾಯಕರು ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಹಾಗಾದರೆ ಸಂಪೂರ್ಣ ಸಪ್ತ ಗ್ಯಾರಂಟಿಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇಂಡಿಯಾ ಮೈತ್ರಿ ಕೂಟದ ಸಪ್ತ ಗ್ಯಾರಂಟಿಗಳು
* ಖತಿಯಾನ್‌ನ ಖಾತರಿ: ಸ್ಥಳೀಯ ಹಕ್ಕುಗಳನ್ನು ಕಾಪಾಡಲು 1932ರ ಖತಿಯಾನ್‌ನ ಆಧಾರದ ಮೇಲೆ ಸ್ಥಳೀಯ ನೀತಿ ಜಾರಿಗೊಳಿಸಲಾಗುವುದು. ಸರ್ನಾ ಧರ್ಮ ಸಂಹಿತೆಯನ್ನು ಪರಿಚಯಿಸಲಾಗುವುದು ಮತ್ತು ಪ್ರಾದೇಶಿಕ ಭಾಷೆ ಹಾಗೂ ಸಂಸ್ಕೃತಿ ಸಂರಕ್ಷಿಸಲು ಕ್ರಮ.
* ಮೈನಿಯ ಸಮ್ಮಾನ್ ಗ್ಯಾರಂಟಿ: ಮೈನಿಯ ಸಮ್ಮಾನ್ ಯೋಜನೆ ಡಿಸೆಂಬರ್ 2024ರಿಂದ ಆರಂಭಗೊಳ್ಳಲಿದ್ದು, ಈ ಯೋಜನೆಯಡಿ 2,500 ರೂಪಾಯಿ ಗೌರವಧನ ಒದಗಿಸಲಾಗುತ್ತದೆ.
* ಸಾಮಾಜಿಕ ನ್ಯಾಯದ ಖಾತರಿ: ಮೀಸಲಾತಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು, ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೇಕಡಾ 28ರಷ್ಟು, ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಶೇಕಡಾ 12 ಮತ್ತು ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಶೇಕಡಾ 27ರಷ್ಟು ಮೀಸಲಾತಿ ನೀಡಲಾಗುವುದು. ಹೆಚ್ಚುವರಿಯಾಗಿ, ಹಿಂದುಳಿ ವರ್ಗಗಳಿಗೆ ಪ್ರತ್ಯೇಕ ಕಲ್ಯಾಣ ಸಚಿವಾಲಯ, ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನೂ ರಕ್ಷಿಸಲಾಗುವುದು.
* 7 ಕೆಜಿ ಪಡಿತರ: ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಪ್ರತಿ ವ್ಯಕ್ತಿಗೆ 5-7 ಕೆಜಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುವುದು. ಜೊತೆಗೆ ಬಡ ಕುಟುಂಬಗಳಿಗೆ 450 ರೂಪಾಯಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ನೀಡಲಾಗುವುದು.
* ಉದ್ಯೋಗ ಖಾತ್ರಿ: ಜಾರ್ಖಂಡ್‌ನಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿ.
* ಶಿಕ್ಷಣದ ಭರವಸೆ: ಪ್ರತಿ ಬ್ಲಾಕ್‌ನಲ್ಲಿ ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು.
* ರೈತ ಕಲ್ಯಾಣ ಖಾತ್ರಿ: ರೈತರ ಜೀವನೋಪಾಯವನ್ನು ಸುಧಾರಿಸಲು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು(ಎಂಎಸ್‌ಪಿ) ಪರಿಷ್ಕರಿಸಲು ಮೈತ್ರಿಕೂಟ ವಾಗ್ದಾನ ಮಾಡಿದೆ. ಭತ್ತದ ಎಂಎಸ್‌ಪಿಯನ್ನು 2,400-3,200 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ.
ಇನ್ನು ಜಾರ್ಖಂಡ್‌ನ 81 ವಿಧಾನಸಭಾ ಸ್ಥಾನಗಳಿಗಗೆ ನವೆಂಬರ್ 13 ಮತ್ತು ನವೆಂಬರ್ 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23ರಂದು ನಡೆಯಲಿದೆ.












Click it and Unblock the Notifications