• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಇಇ ಮೇನ್ಸ್ 2021 ಫಲಿತಾಂಶ ಪ್ರಕಟ, 44 ಅಭ್ಯರ್ಥಿಗಳಿಗೆ ಶೇ.100 ಅಂಕ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಜೆಇಇ ಮೇನ್ಸ್ 2021 ಫಲಿತಾಂಶ ಪ್ರಕಟವಾಗಿದ್ದು, 44 ಅಭ್ಯರ್ಥಿಗಳು ಶೇ.100 ಅಂಕಗಳನ್ನು ಗಳಿಸಿದ್ದಾರೆ. ಹಾಗೂ 18 ಮಂದಿ ಟಾಪ್ ರಾಂಕ್‌ ಪಡೆದಿದ್ದಾರೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಗೌರವ್ ದಾಸ್,ಬಿಹಾರದ ವೈಭವ್ ವಿಶಾಲ್, ಆಂಧ್ರಪ್ರದೇಶದ ದುಗ್ಗಿನೇನಿ ವೆಂಕಟ ಪನೀಶ್, ರಾಜಸ್ಥಾನದ ಸಿದ್ಧಾಂತ್ ಮುಖರ್ಜಿ, ಅಂಶುಲ್ ವರ್ಮಾ ಹಾಗೂ ಮೃದುಲ್ ಅಗರ್ವಾಲ್, ದೆಹಲಿಯ ರುಚಿರ್ ಬನ್ಸಾಲ್ ಹಾಗೂ ಕಾವ್ಯಾ ಚೋಪ್ರಾ, ಉತ್ತರ ಪ್ರದೇಶದ ಅಮಯ್ಯ ಸಿಂಘಾಲ್ ಹಾಗೂ ಪಾಲ್ ಅಗರ್ವಾಲ್, ತೆಲಂಗಾಣದ ಕೊಮ್ಮಾ ಶರಣ್ಯ ಮತ್ತು ಜೋಯ್ಸುಲಾ ವೆಂಕಟ ಆದಿತ್ಯ, ಆಂಧ್ರಪ್ರದೇಶದ ಪಸಾಲ ವೀರ ಶಿವ, ಕರ್ಣಂ ಲೋಕೇಶ್ ಹಾಗೂ ಕಾಂಚನಪಲ್ಲಿ ರಾಹುಲ್ ನಾಯ್ಡು, ಪಂಜಾಬ್‌ನ ಪುಲ್ಕಿತ್ ಗೋಯಲ್, ಚಂಡೀಗಢದ ಗುರಮೃತ್ ಸಿಂಗ್ ಮೊದಲ ಸ್ಥಾನ ಪಡೆದಿದ್ದಾರೆ.

ಪರೀಕ್ಷೆಯನ್ನು ಒಟ್ಟು 13 ಭಾಷೆಗಳಲ್ಲಿ ನಡೆಸಲಾಯಿತು. ಇಂಗ್ಲಿಷ್, ಹಿಂದಿ, ಗುಜರಾತಿ, ಅಸ್ಸಾಮೆ, ಬೆಂಗಾಲಿ,ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದುವಿನಲ್ಲಿ ಪರೀಕ್ಷೆ ನಡೆಯಿತು.

ಈ ವರ್ಷ ಜೆಇಇ ಮೇನ್‌ 2021 ಪರೀಕ್ಷೆಯನ್ನು ನಾಲ್ಕು ಬಾರಿ ನಡೆಸಲಾಗಿದ್ದು, ಅಭ್ಯರ್ಥಿಗಳಿಗೆ ನಾಲ್ಕು ಬಾರಿ ಅಥವಾ ಅವರು ಇಚ್ಛಿಸಿದಷ್ಟು ಅವಕಾಶಗಳಿಗೆ ಭಾಗವಹಿಸುವ ಅವಕಾಶ ನೀಡಲಾಗಿತ್ತು.

jeemain.nta.nic.inನಲ್ಲಿ ಫಲಿತಾಂಶ ನೋಡಬಹುದಾಗಿದೆ.

English summary
A total of 44 candidates have scored 100 percentile in the engineering entrance exam JEE Main this year while 18 candidates have shared the top rank, Ministry of Education (MoE) officials said on Tuesday midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X