ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಹೆಚ್ಚಳ: ಜೆಇಇ ಮೇನ್ ಪರೀಕ್ಷೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಮೇ 04: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೆಇಇ ಮೇನ್ ಪರೀಕ್ಷೆಯನ್ನು ಮುಂದೂಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿವಿದ್ಯಾರ್ಥಿಗಳಿಗೆ ಎನ್‌ಟಿಎಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ ಎಂದು ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ. ಜೆಇಇ (ಮೇನ್) - 2021 ಮೇ ಸೆಶನ್ ಅನ್ನು 24, 25, 26, 27, 28 ಮೇ 2021 ರಂದು ನಿಗದಿಪಡಿಸಲಾಗಿತ್ತು.ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜೆಇಇ (ಮೇನ್) - 2021 ಮೇ ಸೆಶನ್ ಅನ್ನು ಮುಂದೂಡಲಾಗುತ್ತಿದೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ.

ನೀಟ್ ಪಿಜಿ 2021 ಪರೀಕ್ಷೆ 4 ತಿಂಗಳು ಮುಂದೂಡಿಕೆ ನೀಟ್ ಪಿಜಿ 2021 ಪರೀಕ್ಷೆ 4 ತಿಂಗಳು ಮುಂದೂಡಿಕೆ

ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ಜಂಟಿ ಪ್ರವೇಶ ಪರೀಕ್ಷೆ - ಮೇನ್(ಜೆಇಇ ಮೇನ್)ಮೇ 2021ರ ಸೆಶನ್ ಅನ್ನು ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಂಗಳವಾರ ಪ್ರಕಟಿಸಿದ್ದಾರೆ.

JEE (Main) May 2021 Session Postponed

ಪರೀಕ್ಷೆಗಳಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳಿಗಾಗಿ ಅಧಿಕೃತ ಎನ್‌ಟಿಎ ವೆಬ್‌ಸೈಟ್ (www.nta.ac.in) ಮತ್ತು (https://jeemain.nta.nic.in/) ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಈ ಮೊದಲು ದೇಶಾದ್ಯಂತ ಕೋವಿಡ್ -19 ಪ್ರಕರಣಗಳ ಏರಿಕೆಯಿಂದಾಗಿ ಜೆಇಇ-ಮೇನ್ ಏಪ್ರಿಲ್ ಸೆಶನ್ ಅನ್ನು ಮುಂದೂಡಲಾಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಏಪ್ರಿಲ್ 27, 28 ಮತ್ತು 30 ರಂದು ನಿಗದಿಯಾಗಿದ್ದ ಜೆಇಇ (ಮೇನ್ ) - 2021 ಏಪ್ರಿಲ್ ಸೆಶನ್ ಅನ್ನು ಈಗಾಗಲೇ ಮುಂದೂಡಲಾಗಿದೆ.

ಏಪ್ರಿಲ್ ಮತ್ತು ಮೇ ಸೆಶನ್ ಗಳ ಮರು ಹೊಂದಿಸುವಿಕೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ಮೇ ಸೆಶನ್ ನ ನೋಂದಣಿಯನ್ನು ನಂತರದ ಹಂತದಲ್ಲಿ ಪ್ರಕಟಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ. ಇನ್ನು ಮೊದಲ ಎರಡು ಸೆಷನ್‌ಗಳು ಈಗಾಗಲೇ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಪೂರ್ಣಗೊಂಡಿವೆ

English summary
Union education minister Dr Ramesh Pokriyal tweeted the postponement of the JEE (Main) May 2021 session due to the prevailing coronavirus disease (Covid-19) situation in the country. “Looking at the present situation of Covid-19 and keeping students safety in mind, JEE (Main) - May 2021 session has been postponed .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X