ತಮಿಳುನಾಡು ಚುನಾವಣೆಗೆ ಮುನ್ನ ಜಯಾ ಕೇಸ್ ತೀರ್ಪು?

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್, 01: ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರದೆ ಇರಲ್ಲ. ಸದ್ಯ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ ಸರ್ಕಾರ ಸಲ್ಲಿಕೆ ಮಾಡಿರುವ ಮೇಲ್ಮನವಿ ವಿಚಾರಣೆ ನಡೆಯುತ್ತಿದೆ.

ಎಲ್ಲ ರಾಜಕೀಯ ಪಕ್ಷಗಳು ಕೋರ್ಟ್ ತೀರ್ಪನ್ನು ಎದುರು ನೋಡುತ್ತಿವೆ. ಸುಪ್ರೀಂ ಕೋರ್ಟ್ ಮೇ 16 ರೊಳಗೆ ತೀರ್ಪು ನೀಡಲಿದೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಕರ್ನಾಟಕ ಸರ್ಕಾರದ ಪರ ಅಂದರೆ ಜಯಾ ವಿರುದ್ಧವಾಗಿ ದುಶ್ಯಂತ ದಾವೆ ಮತ್ತು ಬಿವಿ ಆಚಾರ್ಯ ವಾದ ಮಂಡನೆ ಮಾಡಿದ್ದಾರೆ. ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಹ ವಾದ ಮಂಡಿಸಲಿದ್ದಾರೆ. ಡಿಎಂಕೆ ಹಿರಿಯ ನಾಯಕ ಅನ್ಬಳಗನ್ ಸಹ ದಾಖಲೆಗಳನ್ನು ಸಲ್ಲಿಕೆ ಮಾಡಲಿದ್ದಾರೆ.['ಜನಸೇವಕಿ ಜಯಾ ಯಾಕೆ ಆಸ್ತಿ ಬಹಿರಂಗ ಮಾಡ್ಲಿಲ್ಲ?']


jayalalithaa

ಕೋರ್ಟ್ ಗೆ ರಜೆ
ಸುಪ್ರೀಂ ಕೋರ್ಟ್ ಗೆ ಮೇ 15 ರಿಂದ ಜೂನ್ 28 ರವೆಗೆ ಬೇಸಿಗೆ ರಜೆ. ಅದರೊಳಗೆ ತೀರ್ಪು ಹೊರ ಬೀಳುವ ಸಾಧ್ಯತೆಯಿದೆ. ಹಾಗಾಗಿ ಪ್ರಕರಣದ ತೀರ್ಪು ಯಾವಾಗ ಹೊರಕ್ಕೆ ಬೀಳುತ್ತದೆ ಎಂಬುದು ಕುತೂಹಲದ ಸಂಗತಿಯಾಗಿದೆ. ಏಪ್ರಿಲ್ 5,6 ಮತ್ತು 7 ರಂದು ವಿಚಾರಣೆ ನಡೆಯಲಿದೆ. ಕರ್ನಾಟಕ ಹೈ ಕೋರ್ಟ್ ಜಯಲಲಿಯಾ ಅಕ್ರಮ ಆಸ್ತಿ ಪ್ರಕರಣದಲ್ಲಿ ನಿರ್ದೋಶಿ ಎಂದು ಹೇಳಿದೆ.[ಜಯಾ ಪ್ರಕರಣ: 76 ಸಾಕ್ಷಿಗಳು ಉಲ್ಟಾ ಹೊಡೆದಿದ್ದು ಯಾಕೆ?]

ಆದರೆ ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದು ಅದರ ವಿಚಾರಣೆ ನಡೆಯುತ್ತಿದೆ. ಅತ್ತ ಜಯಲಲಿತಾ ಸಹ ಕರ್ನಾಟಕ ಸರ್ಕಾರ ಯಾವ ಆಧಾರದಲ್ಲಿ ಅರ್ಜಿ ಸಲ್ಲಿಕೆ ಮಾಡಿದೆ ಎಂದು ಪ್ರಶ್ನೆ ಮಾಡಿದೆ. ಒಟ್ಟಿನಲ್ಲಿ ತಮಿಳುನಾಡು ಚುನಾವಣೆಗೂ ಮುನ್ನ ತೀರ್ಪು ಹೊರಬಿದ್ದರೆ ಅದು ಚುನಾವಣೆ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ಲೇಷಣೆ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The verdict in the J Jayalalithaa disproportionate assets case is likely to impact the outcome of the Tamil Nadu elections. All political parties in fact are waiting for the outcome of the verdict. The question is will the Supreme Court deliver its verdict before May 16th?
Please Wait while comments are loading...