ಜಯಾ ಅನಾರೋಗ್ಯ: ಏಮ್ಸ್ ತಜ್ಞ ವೈದ್ಯರು ಭಾಗಿ, 5ಕ್ಕೆ ಪತ್ರಿಕಾ ಪ್ರಕಟಣೆ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 5: ತಮಿಳುನಾಡು ಸಿಎಂ ಜಯಲಲಿತಾ ಹೃದಯಸ್ಥಂಭನವಾಗಿದ್ದು ಈ ಹಿನ್ನೆಲೆ ಅಪೋಲೋ ವೈದ್ಯರೊಂದಿಗೆ ಕೇಂದ್ರ ಏಮ್ಸ್ ತಂಡದ ವೈದ್ಯರು ಜೊತೆಯಾಗಿ ಚಿಕಿತ್ಸೆ ನೀಡಲಿದ್ದಾರೆ.

ಪ್ರಸ್ತುತ ಚಿಕಿತ್ಸೆ ನೀಡುತ್ತಿದ್ದ ಲಂಡನ್ ನ ರಿಚರ್ಡ್ ಬಿಲೆ ಅವರು ಪ್ರತಿ ಒಂದು ಗಂಟೆಗೆ ಜಯಲಲಿತಾ ಅವರು ಹೃದಯಬಡಿತ, ರಕ್ತದೊತ್ತಡ ಸೇರಿದಂತೆ ಚಿಕಿತ್ಸೆಯನ್ನು ನೀಡುತ್ತಿದ್ದು, ಅವರೊಂದಿಗೆ ಕೇಂದ್ರದ ಏಮ್ಸ್ ತಜ್ಞ ವೈದ್ಯರ ತಂಡ ಚಿಕಿತ್ಸೆಗೆ ಮುಂದಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಡಾ. ಜಿ. ಪಿ. ನಾಡ್ಡಾ ತಿಳಿಸಿದರು.[ಊಟ ನಿದ್ದೆ ಬಿಟ್ಟು ಜಯಾಗಾಗಿ ಕಾದ ಅಭಿಮಾನಿಗಳು]

jaya

ಈ ತಜ್ಞ ವೈದ್ಯರ ತಂಡದಲ್ಲಿ ಕಾರ್ಡಿಯಾಲಜಿಸ್ಟ್ ಗಳಾದ ಡಾ. ನಾರಂಗ್, ಡಾ. ತಲ್ವಾರ್, ಡಾ, ರೆಹಾನ್, ಡಾ. ಟ್ರಿಕಾ, ಡಾ. ಟ್ರೆಹಾನ್ ಇದ್ದಾರೆ. ತಂಡದಿಂದ ಚಿಕಿತ್ಸೆ ಪ್ರಾರಂಭಿಸಿ ಚಿಕಿತ್ಸೆ ಬಗ್ಗೆ ಹಾಗೂ ಸಿಎಂ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಲು ಸಂಜೆ 5 ಗಂಟೆಗೆ ಪತ್ರಿಕಾ ಪ್ರಕಟಣೆಯನ್ನು ನೀಡಲಾಗುವುದು ಎಂದು ನಾಡ್ಡಾ ತಿಳಿಸಿದರು. ಹಾಗೆಯೇ ಚೆನ್ನೈನಗರದ ಕಾರ್ಡಿಯಾಲಜಿಸ್ಟ್ ಗಳಿಗೂ ಆಹ್ವಾನ ನೀಡಿರುವುದಾಗಿ ಅವರು ತಿಳಿಸಿದರು.

ಪ್ರಸ್ತುತಇಸಿಎಂಒ ಸಾಧನ ಮೂಲಕ ದೇಹದ ರಕ್ತ ಪರಿಚಲನೆಯನ್ನು ಯಥಾಸ್ಥಿತಿಗೊಳಿಸಲು ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನು ಮಧ್ಯಾಹ್ನ 12 ಸಂಜೆ 5 ಗಂಟೆವರೆಗೆ ನೀಡಲಾಗುವುದು. ಅವರ ಆರೋಗ್ಯ ಸ್ಥಿತಿ ಸುಧಾರಿಸುವುದು ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tamil Nadu chief minister J Jayalalithaa cardiac arrest : The aims special doctor to join in chennai with London Doctor Richard bile.
Please Wait while comments are loading...