ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಾಟ್ಸಪ್ ನಲ್ಲಿ ಸದ್ದು ಮಾಡುತ್ತಿವೆ ಜನತಾ ಕರ್ಫ್ಯೂ ಸ್ಟಿಕರ್ಸ್
ಬೆಂಗಳೂರು, ಮಾರ್ಚ್ 22; ಪ್ರಧಾನಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂ ಕರೆಗೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ಜನತಾ ಕರ್ಫ್ಯೂಗೆ ಬೆಂಬಲ ನೀಡಲು ಜನ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಕ್ರಿಯೇಟಿವ್ ಸಂದೇಶಗಳನ್ನು ಹಂಚಿಕೊಂಡಿದ್ದರು.
Janta Curfew Live Updates: ಜನತಾ ಕರ್ಫ್ಯೂ: ಜಾಗಟೆ, ಗಂಟೆ, ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ ಭಾರತ
ಇದಕ್ಕೆ ಪೂರಕವಾಗಿ ಮೋದಿ ಅವರ ಜನತಾ ಕರ್ಫ್ಯೂ ಘೋಷಣೆಗೆ ವಾಟ್ಸಪ್ ಸ್ಟಿಕರ್ ಗಳಲ್ಲಿಯೂ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.
ಮನೆಯಲ್ಲಿಯೇ ಇರಿ, ಆರೋಗ್ಯವಾಗಿ ಇರಿ, ಕೊರೊನಾ ವಿರುದ್ಧ ಹೋರಾಡೋಣ ಎಂಬ ಮೋದಿ ಅವರ ಮಾತುಗಳನ್ನು ಸೂಚಿಸುವ ವಾಟ್ಸಪ್ ಸ್ಟಿಕ್ಕರ್ ಗಳು ಜನಪ್ರಿಯವಾಗಿವೆ.
ವಾಟ್ಸಪ್ ನಲ್ಲಿ ಸಂದೇಶಗಳನ್ನು ಸ್ಟಿಕರ್ ಗಳ ರೂಪದಲ್ಲಿ ಹಂಚಿಕೊಳ್ಳುವುದು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ...