ಕಾಶ್ಮೀರ: ಪೊಲೀಸ್ ಪೇದೆಯನ್ನು ಅಪಹರಿಸಿ ಕೊಂದ ಉಗ್ರರು
ಶ್ರೀನಗರ, ಜುಲೈ 06: ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪೊಲೀಸ್ ಪೇದೆಯೊಬ್ಬರ ಶವ ಜಮ್ಮು ಕಾಶ್ಮೀರದ ಕುಲ್ಗಾಮ್ ನ ಪರಿವಾನ್ ಎಂಬಲ್ಲಿ ಪತ್ತೆಯಾಗಿದೆ.
ಪೊಲೀಸ್ ಪೇದೆಯನ್ನು ಜಾವಿದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಇಲ್ಲಿನ ಶೋಪಿಯಾನದ ಬಳಿ ಮೆಡಿಕಲ್ ಶಾಪ್ ಒಂದರಿಂದ ಜಾವಿದ್ ರನ್ನು ಅಪಹರಿಸಲಾಗಿತ್ತು. ಈ ಘಟನೆ ನಡೆದಿದ್ದು ಜು.5 ರಂದು. ಇದೀಗ ಅವರ ಮೃತದೇಹ ಪತ್ತೆಯಾಗಿದ್ದು, ಕಣಿವೆ ರಾಜ್ಯದಲ್ಲಿ ಆತಂಕ ಸೃಷ್ಟಿಯಾಗಿದೆ.
ಇತ್ತೀಚೆಗಷ್ಟೇ ಭಾರತೀಯ ಸೇನೆಯ ಯೋಧ ಔರಂಗಜೇಬ್ ಎಂಬುವವರನ್ನು ಅಪಹರಿಸಿದ್ದ ಉಗ್ರರು ಅವರಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ವಿಡಿಯೋವನ್ನು ಸಾಮಾಜಿ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಇದಾದ ನಂತರ ಉಗ್ರ ದಮನಕ್ಕೆ ಬಿಗಿಪಟ್ಟಾಗಿ ನಿಂತ ಭಾರತ, ನಾಲ್ವರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿತ್ತು.

ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತಂದು, ಹಿಂಸೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಸಬೂಬು ನೀಡಿ ಜಮ್ಮು-ಕಾಶ್ಮೀರದ ಪಿಡಿಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಲವನ್ನು ಬಿಜೆಪಿ ವಾಪಸ್ ಪಡೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications