ಕಾಶ್ಮೀರ: ಐವರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ
ಶೋಪಿಯಾನ್, ಆಗಸ್ಟ್ 04: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಎಂಬಲ್ಲಿ ಶುಕ್ರವಾರ ರಾತ್ರಿಯಿಂದ ಆರಂಭವಾದ ಎನ್ ಕೌಂಟರ್ ನಲ್ಲಿ ಐವರು ಭಯೋತ್ಪಾದಕರನ್ನು ಬಲಿಪಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಶೋಪಿಯಾನ್ ನ ಕಿಲ್ಲೋರಾ ಹಳ್ಳಿಯಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಆರಂಭವಾದ ಗುಂಡಿನ ಚಕಮಕಿಯಲ್ಲಿ ಸಾವಿಗೀಡಾದ ಐವರು ಉಗ್ರರಲ್ಲಿ ಓರ್ವನನ್ನು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಉಮರ್ ಮಲೀಕ್ ಎಂದು ಗುರುತಿಸಲಾಗಿದೆ.
ಆಗಸ್ಟ್ 2 ರಂದು ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು.

ಭಾರತಕ್ಕೆ 600 ಮಂದಿ ಭಯೋತ್ಪಾದಕರನ್ನು ನುಗ್ಗಿಸಲು ಪಾಕಿಸ್ತಾನ ಷಡ್ಯಂತ್ರ ನಡೆಸುತ್ತಿದೆ ಎಂಬ ಗುಪ್ತಚರ ವರದಿ ಹೊರಬಿದ್ದಿದ್ದು, ಜಮ್ಮು-ಕಾಶ್ಮೀರದಲ್ಲಿ ಹೆಚ್ಚಾಗುತ್ತಿರುವ ಉಗ್ರರ ಉಪಟಳವೂ ಈ ವರದಿಗೆ ಪುಷ್ಠಿ ನೀಡಿದೆ.












Click it and Unblock the Notifications