ಜಮ್ಮು ಕಾಶ್ಮೀರದಲ್ಲಿ ಅಪಘಾತ: 3 ಸಾವು, 20 ಜನರಿಗೆ ಗಂಭೀರ ಗಾಯ
ಬುಧಾಲ್, ಫೆಬ್ರವರಿ 03: ಜಮ್ಮು ಕಾಶ್ಮೀರದ ರಾಜೌರಿಯ ಬುಧಾಲ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತರಾಗಿದ್ದು, 20 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಿನಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತಕ್ಕೆ ತುತ್ತಾಗಿದ್ದು, ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರ ರಕ್ಷಣಾ ಕಾರ್ಯವನ್ನು ಹೆಲಿಕಾಪ್ಟರ್ ಮೂಲಕ ಮಾಡಲಾಗಿದ್ದು, ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ರಸ್ತೆ ಅಪಘಾತದ ಪ್ರಕರಣಗಳಲು ಇತ್ತೀಚೆಗೆ ಹೆಚ್ಚುತ್ತಿದ್ದು, ಮದುವೆಗೆಂದು ಹೊರಟಿದ್ದ ಐವರು ರಸ್ತೆ ಅಪಘಾತದಲ್ಲಿ ಮೃತರಾದ ಘಟನೆ ನಿನ್ನೆ ತಾನೇ ಜಾರ್ಖಂಡ್ ನಲ್ಲಿ ನಡೆದಿತ್ತು. ಪಶ್ಚಿಮ ಬಂಗಾಳದಲ್ಲಿ ಜ.29 ರಂದು ಸೇತುವೆ ಕುಸಿದ ಪರಿಣಾಮ ಬಸ್ ಒಂದು ಕಣಿವೆಗೆ ಉರುಳ 37 ಜನ ಮೃತರಾಗಿದ್ದರು.












Click it and Unblock the Notifications