ಕಾಶ್ಮೀರದಲ್ಲಿ ಉಗ್ರರಿಂದ ಐವರು ಪೊಲೀಸ್ ಕುಟುಂಬಸ್ಥರ ಅಪಹರಣ

ಶೋಪಿಯಾನ್, ಆಗಸ್ಟ್ 31: ಪೊಲೀರ ಮೇಲೆ ಉಗ್ರರ ಆಕ್ರಮಣ ಪ್ರಕರಣಗಳು ಜಮ್ಮು-ಕಾಶ್ಮೀರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಐವರು ಪೊಲೀಸ್ ಕುಟುಂಬಸ್ಥರನ್ನು ಅಪಹರಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಅಧಿಕಾರಿಗಳು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸಯ್ಯದ್ ಸಲಾಲುದ್ದಿನ್ ನ ಮಗ ಶಕೀಲ್ ನನ್ನು ಬಂಧಿಸಿದ ನಂತರ ಈ ಘಟನೆ ನಡೆದಿದೆ.

ಶೋಪಿಯಾನ್, ಕುಲ್ಗಾಂ, ಅನಂತನಾಗ್, ಅವಂತಿಪೊರ ಎಂಬಲ್ಲಿಂದ ಪೊಲೀಸ್ ಕುಟುಂಬಸ್ಥರನ್ನೇ ಆಯ್ದು ಅಪಹರಿಸಲಾಗಿದೆ.
ಶಕೀಲ್ ನ ಬಂಧನದ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಭಯೋತ್ಪಾದಕರು ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ.

Jamamu and Kashmir: terrorists kidnap 5 family members of policemen

ಭದ್ರತೆಯ ದೃಷ್ಟಿಯಿಂದ ಕಾಶ್ಮೀರದ ಕೆಲವು ಭಾಗಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಆ.29 ರಂದು ಇಲ್ಲಿನ ಶೋಪಿಯಾನ್ ನಲ್ಲಿ ನಡೆದ ಉಗ್ರದಾಳಿಯಲ್ಲಿ ಕನಿಷ್ಠ ನಾಲ್ವರು ಪೊಲೀಸರು ಹುತಾತ್ಮರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+