ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕತೆ ಬಗ್ಗೆ ಜೇಟ್ಲಿ ಅಧ್ಯಕ್ಷತೆಯ ಮಹತ್ವದ ಸಭೆಯಲ್ಲಿ ಕೇಳಿದ್ದೇನು?

|
Google Oneindia Kannada News

ಉನ್ನತ ಮಟ್ಟದ ಫೈನಾನ್ಷಿಯಲ್ ಸ್ಟೆಬಿಲಿಟಿ ಅಂಡ್ ಡೆವಲಪ್ ಮೆಂಟ್ ಕೌನ್ಸಿಲ್ (ಎಫ್ ಎಸ್ ಡಿಸಿ) ಸಭೆಯು ಮಂಗಳವಾರ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಯಾಂಕಿಂಗೇತರ ಆರ್ಥಿಕ ಸಂಸ್ಥೆಗಳು (ಎನ್ ಬಿಎಫ್ ಸಿ) ಎದುರಿಸುತ್ತಿರುವ ನಗದು ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಆರ್ ಬಿಐ ಗವರ್ನರ್, ಸೆಬಿ ಅಧ್ಯಕ್ಷ ಮತ್ತು ಇತರ ಮಂಡಳಿಗಳ ಅಧ್ಯಕ್ಷರು ಮತ್ತು ಮುಖ್ಯಸ್ಥರು ಪಾಲ್ಗೊಂಡಿದ್ದರು. ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಮಾತನಾಡಿ, ಎನ್ ಬಿಎಫ್ ಸಿಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯು ಈಗ ಬಿಂಬಿಸುತ್ತಿರುವ ಮಟ್ಟಕ್ಕೆ ಇಲ್ಲ. ಅಗತ್ಯ ಪ್ರಮಾಣದ ನಗದು ಚಾಲ್ತಿಯಲ್ಲಿದೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಐಎಲ್ ಅಂಡ್ ಎಫ್ ಎಸ್ ಮಾರಿ ಕೈ ತೊಳೆದುಕೊಳ್ಳಲು ಸರಕಾರ ಚಿಂತನೆಐಎಲ್ ಅಂಡ್ ಎಫ್ ಎಸ್ ಮಾರಿ ಕೈ ತೊಳೆದುಕೊಳ್ಳಲು ಸರಕಾರ ಚಿಂತನೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಕಳೆದ ಶುಕ್ರವಾರ ಬ್ಯಾಂಕ್ ನ ಡೆಪ್ಯೂಟಿ ಗವರ್ನರ್ ಆಚಾರ್ಯ ಅಭಿಪ್ರಾಯ ಪಟ್ಟಿದ್ದರು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಹಾಗೆ ಹೇಳಿಕೆ ನೀಡಿದ ನಂತರ ನಡೆದ ಈ ಸಭೆಗೆ ಬಹಳ ಮಹತ್ವ ಇತ್ತು. ಮಂಗಳವಾರ ನಡೆದ ಸಭೆಗೆ ಆಚಾರ್ಯ ಕೂಡ ಹಾಜರಿದ್ದರು. ಈ ಹಿಂದೆ ಡೆಪ್ಯೂಟಿ ಗವರ್ನರ್ ಆದವರು ಪಾಲ್ಗೊಳ್ಳುತ್ತಿರಲಿಲ್ಲ.

ದೇಶೀಯ-ಜಾಗತಿಕ ಆರ್ಥಿಕತೆ ಬಗ್ಗೆ ಚರ್ಚೆ

ದೇಶೀಯ-ಜಾಗತಿಕ ಆರ್ಥಿಕತೆ ಬಗ್ಗೆ ಚರ್ಚೆ

ನಗದು ಕೊರತೆ ಆಗಿಲ್ಲ. ಕೆಲವು ಕಡೆ ಇದೆ ಎಂಬ ಮಾತಿದೆ. ಆದರೆ ನಾವು ಆರ್ಥಿಕ ವಲಯದ ಮೇಲೆ ಕಣ್ಣಿಟ್ಟಿದ್ದೇವೆ ಎಂದು ಊರ್ಜಿತ್ ಪಟೇಲ್ ಹೇಳಿದ್ದಾರೆ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಮಾತು. ಐಎಲ್ ಅಂಡ್ ಎಫ್ ಎಸ್ ಬಿಕ್ಕಟ್ಟು ಸೃಷ್ಟಿಯಾದಾಗ, ಅದು ಇತರ ವಲಯಗಳಿಗೂ ಹಬ್ಬದಂತೆ ಎಚ್ಚರ ವಹಿಸಿ ಎಂದು ಸರಕಾರವು ಆರ್ ಬಿಐ ತಿಳಿಸಿತ್ತು. ಆರ್ಥಿಕ ಮಾರುಕಟ್ಟೆಯಲ್ಲಿ ಸೈಬರ್ ಭದ್ರತೆ ವಿಚಾರವಾಗಿಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಪಿಎಫ್ ಆರ್ ಡಿಎ ಅಧ್ಯಕ್ಷ ಹೇಮಂತ್ ಕಾಂಟ್ರಾಕ್ಟರ್ ಮಾತನಾಡಿ, ದೇಶೀಯ ಹಾಗೂ ಜಾಗತಿಕ ಆರ್ಥಿಕತೆ ಬಗ್ಗೆ ಕೆಲವು ಸಾಮಾನ್ಯ ಸಂಗತಿಗಳ ಬಗ್ಗೆ ಮಾತ್ರ ಚರ್ಚೆಯಾಯಿತು ಎಂದು ಹೇಳಿದ್ದಾರೆ.

ಜಿಎಸ್ಟಿ ಹೇಗೆ ಮಧ್ಯಮ ವರ್ಗದ ಜನತೆಗೆ ಲಾಭದಾಯಕವಾಗಿದೆ ಜಿಎಸ್ಟಿ ಹೇಗೆ ಮಧ್ಯಮ ವರ್ಗದ ಜನತೆಗೆ ಲಾಭದಾಯಕವಾಗಿದೆ

ಡಿಜಿಟಲ್ ಆರ್ಥಿಕತೆ ಮೇಲೆ ನಿಗಾ

ಡಿಜಿಟಲ್ ಆರ್ಥಿಕತೆ ಮೇಲೆ ನಿಗಾ

ಡಿಜಿಟಲ್ ಆರ್ಥಿಕತೆ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಕಳೆದ ಮೇನಲ್ಲಿ ಸರಕಾರದಿಂದ ಎಫ್ ಎಸ್ ಡಿಸಿ ರಚನೆಯಾಗಿದೆ. ಕಳೆದ ಮೇ ತಿಂಗಳಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಿ, ರಚಿಸಲಾಗಿತ್ತು. ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಕೂಡ ಇದರಲ್ಲಿ ಒಳಗೊಂಡಿದ್ದಾರೆ.

ಟ್ವೀಟ್ ಮೂಲಕ ತೈಲ ಬೆಲೆಯನ್ನು ನಿಯಂತ್ರಿಸಲಾಗುವುದೆ? : ಜೇಟ್ಲಿ ಚಾಟಿ ಟ್ವೀಟ್ ಮೂಲಕ ತೈಲ ಬೆಲೆಯನ್ನು ನಿಯಂತ್ರಿಸಲಾಗುವುದೆ? : ಜೇಟ್ಲಿ ಚಾಟಿ

ಅನುಭವಿ ಬ್ಯಾಂಕರ್ ಉದಯ್ ಕೊಟಕ್ ನೇಮಕ

ಅನುಭವಿ ಬ್ಯಾಂಕರ್ ಉದಯ್ ಕೊಟಕ್ ನೇಮಕ

ಐಎಲ್ ಅಂಡ್ ಎಫ್ ಎಸ್ ಗೆ ನಿರಂತರವಾಗಿ ಸಾಲ ಮರುಪಾವತಿ ಸಾಧ್ಯವಾಗುತ್ತಿಲ್ಲ. ಇದರಿಂದ ಬ್ಯಾಂಕಿಂಗೇತರ ಹಣಕಾದು ಕಂಪನಿಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಅನುಮಾನ ಮೂಡುತ್ತಿದೆ. ಕಳೆದ ತಿಂಗಳು ಸರಕಾರವು ಐಎಲ್ ಅಂಡ್ ಎಫ್ ಎಸ್ ಸಂಸ್ಥೆಯ ಮಂಡಳಿಯ ಜವಾಬ್ದಾರಿ ವಹಿಸಿಕೊಂಡು, ಅನುಭವಿ ಬ್ಯಾಂಕರ್ ಉದಯ್ ಕೊಟಕ್ ರನ್ನು ನೇಮಿಸಿ, ಎನ್ ಬಿಎಫ್ ಸಿಗಳ ಬಿಕ್ಕಟ್ಟು ಬಗೆಹರಿಸುವಂತೆ ಸೂಚಿಸಿತ್ತು.

ಆರ್ ಬಿಐಗೆ ಹೆಚ್ಚಿನ ಅಧಿಕಾರ ನೀಡಬೇಕು

ಆರ್ ಬಿಐಗೆ ಹೆಚ್ಚಿನ ಅಧಿಕಾರ ನೀಡಬೇಕು

ಕಳೆದ ಶುಕ್ರವಾರ ಆರ್ ಬಿಐನ ಡೆಪ್ಯೂಟಿ ಗವರ್ನರ್ ಆಚಾರ್ಯ ಮಾತನಾಡಿ, ಕೇಂದ್ರ ಬ್ಯಾಂಕ್ ಗೆ ಹೆಚ್ಚಿನ ಅಧಿಕಾರ ನೀಡಬೇಕು. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳನ್ನು ನಿಯಂತ್ರಿಸಲು ಹಾಗೂ ಬ್ಯಾಂಕಿಂಗ್ ವ್ಯವಸ್ಥೆ ಶುದ್ಧೀಕರಣಕ್ಕೆ ಇದು ಅಗತ್ಯ. ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದರೆ ಆರ್ ಬಿಐಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದಿದ್ದರು.

English summary
The high level FSDC meeting chaired by Finance Minister Arun Jaitley on Tuesday discussed liquidity issues being faced by the non-banking financial companies, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X