ಪ್ರಧಾನಿ ಮೋದಿಯನ್ನು ಮದುವೆಯಾಗಲು 1 ತಿಂಗಳಿನಿಂದ ಮಹಿಳೆಯ ಧರಣಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮದುವೆಯಾಗಬೇಕೆಂದು ಒಂದು ತಿಂಗಳಿನಿಂದ ಮಹಿಳೆಯೊಬ್ಬರು ರಾಜಧಾನಿಯ ಜಂತರ್ ಮಂತರ್ ನಲ್ಲಿ ಧರಣಿ ಕೂತಿದ್ದಾರೆ. ಓಂ ಶಾಂತಿ ಶರ್ಮಾ (40) ಎನ್ನುವ ರಾಜಸ್ಥಾನದ ಜೈಪುರದ ಮಹಿಳೆ ಮೋದಿಯವರನ್ನು ಮದುವೆಯಾಗ ಬೇಕು ಎನ
Recommended Video

ನವದೆಹಲಿ, ಅ 7: ತೀರಾ ಅಪರೂಪದ ಘಟನೆ ಎನ್ನುವಂತೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮದುವೆಯಾಗಬೇಕೆಂದು ಒಂದು ತಿಂಗಳಿನಿಂದ ಮಹಿಳೆಯೊಬ್ಬರು ರಾಜಧಾನಿಯ ಜಂತರ್ ಮಂತರ್ ನಲ್ಲಿ ಧರಣಿ ಕೂತಿದ್ದಾರೆ.
ಈ ಬಗ್ಗೆ ವರದಿ ಪ್ರಕಟಿಸಿರುವ ಇಂಡಿಯಾ ಟುಡೇ, ಓಂ ಶಾಂತಿ ಶರ್ಮಾ (40) ಎನ್ನುವ ರಾಜಸ್ಥಾನದ ಜೈಪುರದ ಮಹಿಳೆ ಮೋದಿಯವರನ್ನು ಮದುವೆಯಾಗ ಬೇಕು ಎನ್ನುವ ಕಾರಣಕ್ಕಾಗಿ ಇದುವರೆಗೆ ಬಂದಿರುವ ಹಲವಾರು ಮದುವೆ ಆಫರ್ ಗಳನ್ನು ತಿರಸ್ಕರಿಸಿದ್ದಾರಂತೆ.

ಮಾನಸಿಕ ಸ್ಥಿಮಿತ ಕಳೆದುಕೊಂಡಿಲ್ಲ ಎನ್ನುವ ವೈದ್ಯಕೀಯ ಪ್ರಮಾಣಪತ್ರದ ಜೊತೆಗೆ ಧರಣಿ ಕೂತಿರುವ ಈ ಮಹಿಳೆ, ದೇಶಕ್ಕಾಗಿ ದುಡಿಯುತ್ತಿರುವ ನರೇಂದ್ರ ಮೋದಿಗೆ ಸೇವೆ ಮಾಡಲು ಅವರನ್ನು ಮದುವೆಯಾಗಲು ಇಚ್ಚಿಸಿದ್ದೇನೆಂದು ಹೇಳುತ್ತಿದ್ದಾರೆ.
ಹಿರಿಯರನ್ನು ಗೌರವಿಸುವ ಸಂಸ್ಕೃತಿ ನಮ್ಮದು, ಮೋದಿಯವರ ಮೇಲೆ ನನಗೆ ಮೋಹವಿಲ್ಲ. ಆದರೆ, ಅವರನ್ನು ನಾನು ಗೌರವಿಸುತ್ತೇನೆ ಎಂದು ಸೆಪ್ಟಂಬರ್ ಎಂಟರಿಂದ ಶಾಂತಿ ಶರ್ಮಾ ಧರಣಿ ಕೂತಿದ್ದಾರೆ.
ಈ ಹಿಂದೆ ನನಗೆ ಮದುವೆಯಾಗಿತ್ತು, ಆದರೆ ನಮ್ಮ ದಾಂಪತ್ಯ ಜೀವನ ತುಂಬಾ ದಿನ ಸಾಗಲಿಲ್ಲ. ಮೋದಿಯವರನ್ನು ಮದುವೆಯಾಗಬೇಕೆನ್ನುವ ಆಸೆಯಿಂದ ಬಹಳ ವರ್ಷದಿಂದ ಒಬ್ಬಂಟಿಯಾಗಿದ್ದೇನೆ ಎಂದು ಶಾಂತಿ ಶರ್ಮಾ ಹೇಳುತ್ತಾರೆ.
ಭದ್ರತಾ ಅಧಿಕಾರಿಗಳು ನನಗೆ ಮೋದಿಯವರನ್ನು ಭೇಟಿ ನೀಡಲು ಅವಕಾಶ ನೀಡುವುದಿಲ್ಲ ಎನ್ನುವ ಅರಿವು ನನಗಿದೆ, ಅವರೂ ಒಬ್ಬಂಟಿಯಾಗಿರುವುದರಿಂದ ಅವರನ್ನು ಮದುವೆಯಾಗಬೇಕೆಂದು ಧರಣಿ ಕೂತಿದ್ದೇನೆಂದು ಎಂದು ಶಾಂತಿ ಶರ್ಮಾ ತನ್ನ ಮನದಾಳ ಮಾತನ್ನು ಬಿಚ್ಚಿಟ್ಟಿದ್ದಾರೆ.
ಇಪ್ಪತ್ತು ವರ್ಷದ ಮಗಳನ್ನು ಹೊಂದಿರುವ ಶಾಂತಿ ಶರ್ಮಾ, ತನ್ನ ಮಗಳ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ, ಶಾಂತಿ ಹೆಸರಿನಲ್ಲಿ ಬೇಕಾದಷ್ಟು ಜಮೀನು ಮತ್ತು ಹಣವಿದೆಯಂತೆ. ಕೆಲವೊಂದು ಜಮೀನನ್ನು ಮಾರಿ, ಮೋದಿಗೆ ಭರ್ಜರಿ ಗಿಫ್ಟ್ ನೀಡಬೇಕೆನ್ನುವ ಆಸೆಯನ್ನು ಶಾಂತಿ ಶರ್ಮಾ ಹೊಂದಿದ್ದಾರೆ.












Click it and Unblock the Notifications