ಹುತಾತ್ಮ ಅಪ್ಪನ ಶವಪೆಟ್ಟಿಗೆ ಮೇಲೆ ಕಂದನ ಆಟ! ಒದ್ದೆಯಾಗದೇ ಕಣ್ಣಾಲಿ?
ಜೈಪುರ, ಜುಲೈ 16: 'ತಾನು ಹುತಾತ್ಮ ಅಪ್ಪನ ಶವಪೆಟ್ಟಿಗೆ ಮೇಲೆ ಕೂತಿದ್ದೇನೆ ಎಂಬ ಪರಿವೆಯೇ ಇಲ್ಲದೆ, ಐದು ತಿಂಗಳ ಪುಟ್ಟ ಮಗುವೊಂದು ಆಟವಾಡುತ್ತಿರುವ ದೃಶ್ಯ ಎಂಥವರ ಕಣ್ಣಾಲಿಯನ್ನೂ ಒದ್ದಾಯಾಗಿಸುತ್ತದೆ!
ಜುಲೈ 11 ರಂದು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ 25 ವರ್ಷದ ಮುಕುಟ್ ಬಿಹಾರಿ ಮೀನಾ ಅವರ ಪಾರ್ಥೀವ ಶರೀರವನ್ನು ಅಂತ್ಯಸಂಸ್ಕಾರಕ್ಕಾಗಿ ರಾಜಸ್ಥಾನದ ಜೈಪುರದ ಅವರ ಊರಿಗೆ ತರಲಾಗಿತ್ತು. ಈ ಸಂದರ್ಭದಲ್ಲಿ ತ್ರಿವರ್ಣಧ್ವಜದಿಂದ ಸುತ್ತಿದ್ದ ಅವರ ಪಾರ್ಥೀವ ಶರೀರವಿದ್ದ ಶವಪೆಟ್ಟಿಗೆಯ ಮೇಲೆ ಹೂವನ್ನು ಚೆಲ್ಲಲಾಗಿತ್ತು. ಈ ಪೆಟ್ಟಿಗೆಯ ಮೇಲೆ ಅವರ ಐದು ತಿಂಗಳ ಪುಟ್ಟ ಕಂದ ಹೂವನ್ನೆಲ್ಲ ಹಿಡಿದು ಆಟವಾಡುತ್ತಿದ್ದ ದೃಶ್ಯ ಅಂತ್ಯಸಂಸ್ಕಾರಕ್ಕೆಂದು ಬಂದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತ್ತು!
'Hum Jeeyenge aur Marenge ae Watan tere liye!'
— Apolina De (@apolina_de) July 16, 2018
A picture that'll break your heart & leave you teary eyed. A 5 month-old daughter of a martyr sitting on his Tricolour covered coffin instead of his lap.
A brave daughter to a brave father. Salute your sacrifices!
Jai Hind!🙏@adgpi pic.twitter.com/hZdcOFU6vM
ತಾನು ಕೂತಿರುವ ಪೆಟ್ಟಿಗೆಯೊಳಗಿರುವುದು ತನ್ನ ತಂದೆಯ ಶವ ಎಂಬ ಯಾವ ಅರಿವೂ ಇಲ್ಲದೆ ಆ ಮಗು ಆಟವಾಡುತ್ತಿತ್ತು. ಇದೇ ಕೊನೆ, ಇನ್ನೆಂದಗೂ ತನ್ನಪ್ಪನನ್ನು ತಾನು ನೋಡುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಪಾಪ, ಆ ಪುಟ್ಟ ಕಂದನಿಗೆ ಎಲ್ಲಿಂದ ತಿಳಿಯಬೇಕು?

ಜಮ್ಮು ಕಾಶ್ಮೀರದ ಶೋಪಿಯಾನ್ ನಲ್ಲಿ ಜು.10 ರ ರಾತ್ರಿಯಿಂದಲೇ ಆರಂಭವಾಗಿದ್ದ ಎನ್ ಕೌಂಟರ್ ದಾಳಿಯಲ್ಲಿ ಉಗ್ರರನ್ನು ಹಿಮ್ಮೆಟ್ಟಿಸಿದ್ದ ಭಾರತೀಯ ಸೇನೆಯ ಯೋಧರು ಗಾಯಾಳುವಾಗಿದ್ದರು. ಜು.11 ರಂದು ಸಹ ಈ ದಾಳಿ ಮುಂದುವರಿದು ಈ ಸಂದರ್ಭದಲ್ಲಿ ಕಮಾಂಡರ್ ಮುಕುಟ್ ಮೀನಾ ಹುತಾತ್ಮರಾಗಿದ್ದರು.












Click it and Unblock the Notifications