ಕಾಶ್ಮೀರದಲ್ಲಿ ಮೈತ್ರಿ ಮುಂದುವರಿಕೆ?, ಮುಫ್ತಿ ಅಂಗಳದಲ್ಲಿ ಚೆಂಡು!

By: ವಿಕಾಸ್ ನಂಜಪ್ಪ
Subscribe to Oneindia Kannada

ಶ್ರೀನಗರ, ಫೆಬ್ರವರಿ 02 : ಜಮ್ಮು ಮತ್ತು ಕಾಶ್ಮೀರದಲ್ಲಿನ ದೋಸ್ತಿ ರಾಜಕೀಯದ ಬಗ್ಗೆ ಇಂದು ಅಂತಿಮ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಪಿಡಿಪಿ-ಬಿಜೆಪಿ ಮೈತ್ರಿಕೂಟದ ಸರ್ಕಾರ ಮುಂದುವರೆಯಲಿದೆಯೇ? ಎಂಬ ಬಗ್ಗೆ ನಿರ್ಧಾರ ತಿಳಿಸುವಂತೆ ರಾಜ್ಯಪಾಲರು ಎರಡೂ ಪಕ್ಷಗಳಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ (79) ಅವರ ನಿಧನದ ನಂತರ ಕಾಶ್ಮೀರದ ರಾಜಕೀಯ ಚಿತ್ರಣ ಬದಲಾಗಿದ್ದು, ಬಿಜೆಪಿ ಮತ್ತು ಪಿಡಿಪಿ (ಪೀಪಲ್ ಡೆಮಾಕ್ರಟಿಕ್ ಪಾರ್ಟಿ) ಮೈತ್ರಿಕೂಟದ ಸರ್ಕಾರ ಮುಂದುವರೆಯುವ ಬಗ್ಗೆ ಗೊಂದಲ ಉಂಟಾಗಿದೆ. [ಕಾಶ್ಮೀರದಲ್ಲಿ ಮುರಿದು ಬಿದ್ದ ಪಿಡಿಪಿ-ಬಿಜೆಪಿ ಮೈತ್ರಿ?]

jammu and kashmir

ಒಂದು ವೇಳೆ ಮೈತ್ರಿ ಸರ್ಕಾರ ಮುಂದುವರೆದರೆ ಮುಫ್ತಿ ಮೊಮಹದ್ ಸಯೀದ್ ಅವರ ಪುತ್ರಿ ಮೆಹಬೂಬಾ ಮುಫ್ತಿ ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ, ಮೈತ್ರಿ ಸರ್ಕಾರ ಮುಂದುವರೆಸುವ ಬಗ್ಗೆ ಮೆಹಬೂಬಾ ಅವರು ಆಸಕ್ತಿ ಹೊಂದಿಲ್ಲ.[ಕಣಿವೆ ರಾಜ್ಯ ಕಾಶ್ಮೀರದಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ]

ರಾಜ್ಯಪಾಲರ ಸೂಚನೆ : ಮೈತ್ರಿ ಸರ್ಕಾರ ಮುಂದುವರೆಸುವ ಬಗ್ಗೆ ಮಂಗಳವಾರ ಅಂತಿಮ ನಿರ್ಧಾರವನ್ನು ಪ್ರಕಟಿಸುವಂತೆ ರಾಜ್ಯಪಾಲ ಎನ್‌.ಎನ್.ವೋರಾ ಅವರು ಬಿಜೆಪಿ ಮತ್ತು ಪಿಡಿಪಿಗೆ ಸೂಚನೆ ನೀಡಿದ್ದಾರೆ. ಬಿಜೆಪಿ ಸಹ ಮೆಹಬೂಬಾ ಮುಫ್ತಿ ಅವರ ನಿರ್ಧಾರಕ್ಕಾಗಿ ಕಾದು ಕುಳಿತಿದೆ.[ಜಮ್ಮು-ಕಾಶ್ಮೀರ ಸಿಎಂ ಮುಫ್ತಿ ಮೊಹಮದ್ ಸಯೀದ್ ವಿಧಿವಶ]

ಮೈತ್ರಿ ಮುಂದುವರೆಸಲು ನಮ್ಮ ಅಭ್ಯಂತರವಿಲ್ಲ ಎಂದು ಬಿಜೆಪಿ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ಹಿಂದೆ ಮೈತ್ರಿಕೂಟ ರಚನೆ ಮಾಡುವಾಗ ವಿಧಿಸಿದ್ದ ಷರತ್ತುಗಳನ್ನು ಹೊರತುಪಡಿಸಿ ಹೊಸ ಷರತ್ತುಗಳನ್ನು ಒಪ್ಪುವುದಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With the BJP firm on not re-negotiating the agenda of alliance with the PDP in Jammu and Kashmir, the ball is in the court of Mehbooba Mufti. The BJP and the PDP were given a February 2 deadline to decide on the fate of the alliance by the Governor, N.N.Vohra.
Please Wait while comments are loading...