ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹ ಪರಿಹಾರಕ್ಕೆ ಸದಾ ನಿರತ ಭಾರತೀಯ ಸೇನೆ

|
Google Oneindia Kannada News

ಶ್ರೀನಗರ, ಸೆ. 8: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ ಮೀರಿದ್ದು ಸೈನಿಕರು ಪರಿಹಾರ ಕಾರ್ಯ ಮತ್ತು ಸಂತ್ರಸ್ತರನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ.

ಎಲ್ಲರನ್ನು ರಕ್ಷಿಸಿದ ಹೊರತು ನಮ್ಮ ಸೇನೆ ಜಮ್ಮು ಕಾಶ್ಮೀರದಿಂದ ಹಿಂದೆ ಹೆಜ್ಜೆ ಇಡುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್‌ ದಲ್‌ಬೀರ್‌ ಸಿಂಗ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ.

army

ಭೂ ಸೇನೆ, ವಾಯು ಸೇನೆ ಮತ್ತು ನೌಕಾ ಪಡೆ ಕಾರ್ಯನಿರತವಾಗಿದ್ದು ಶೀಘ್ರವೇ ಪರಿಹಾರ ಕ್ರಮಗಳನ್ನು ಪೂರೈಸಲಿದೆ. ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ ಎಂದು ತಿಳಿಸಿದರು.

ಒನ್‌ ಇಂಡಿಯಾದೊಂದಿಗೆ ಮಾತನಾಡಿದ ಬೆಂಗಳೂರು ನಿವಾಸಿ, ನಿವೃತ್ತ ಏರ್‌ ಮಾರ್ಷಲ್‌ ಬಿ,ಕೆ.ಪಾಂಡೆ ಯಾವ ಕಾರಣಗಳಿಗೋಸ್ಕರ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಗಳಿಗೆ ನೀಡಿದ್ದ ವಿಶೇಷಾಧಿಕಾರ ಹಿಂಪಡೆಯಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಸೇನೆಯ ಅನುಪಸ್ಥಿತಿಯಲ್ಲಿ ಇಂದಿನ ಪರಿಸ್ಥಿತಿ ನಿಯಂತ್ರಣ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಈ ರೀತಿಯಾದರೆ ಜನರು ದೇವರು ಮತ್ತು ವೈದ್ಯರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಬಿಡುತ್ತಾರೆ. ಒಂದು ಬಾರಿ ನಂಬಿಕೆ ಕಳೆದುಕೊಂಡರೆ ಮುಂದೆ ಪರಿಸ್ಥಿತಿ ಬದಲಾಯಿಸುವುದು ತುಂಬಾ ಕಷ್ಟ. ಸೇನೆ ಅನೇಕ ಶಿಬಿರಗಳನ್ನು ತೆರೆದಿದ್ದು ಆಹಾರ-ನೀರು ನೀಡುವ ಮೂಲಕ ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಕರ್ನಲ್‌ ಆರ್‌ಡಿ ಬಾಲಿ ಹೇಳುವಂತೆ, ಯಾವ ಮಾರ್ಗಸೂಚಿ ಇಟ್ಟುಕೊಂಡು ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಣ ಮಾಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸೈನಿಕರಿಗೆ ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದನ್ನು ತಿಳಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಪರಿಹಾರ ಕಾರ್ಯದ ಸಲಕರಣೆಗಳು

* ಶ್ರೀನಗರ ವ್ಯಾಪ್ತಿಯಲ್ಲಿ ಸಾವಿರಾರು ಜನರು ಪ್ರವಾಹದಡಿ ಸಿಲುಕಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
* ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ 6 ತಂಡಗಳು ಕಾರ್ಯನಿರ್ವಹಿಸುತ್ತಿವೆ.
* 23 ಲಘು ವಿಮಾನಗಳು, 26 ಹೆಲಿಕ್ಯಾಪ್ಟರ್‌ಗಳೊಂದಿಗೆ ಸೈನಿಕರು ಜನರ ರಕ್ಷಣೆಗೆ ಧಾವಿಸುತ್ತಿದ್ದಾರೆ.
* 200 ರಕ್ಕೂ ಹೆಚ್ಚು ಜನ ಸೈನಿಕರು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

English summary
As the floods in Jammu and Kashmir continue to create havoc in the state since last week, the Indian army soldiers have been at the forefront in carrying out the rescue operations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X