ಕುಲ್ಗಾಮ್ ನಲ್ಲಿ ಮತ್ತೋರ್ವ ಹಿಜ್ಬುಲ್ ಉಗ್ರ ಸೆರೆ, ಇಬ್ಬರ ಹತ್ಯೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಸೆಪ್ಟೆಂಬರ್ 11: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ನಡೆದ ಎನ್ಕೌಂಟರ್ ನ್ಲಲಿ ಮತ್ತೋರ್ವ ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರಿದ ಉಗ್ರ ಸೆರೆಸಿಕ್ಕಿದ್ದಾನೆ. ಇನ್ನು ಇಬ್ಬರು ಉಗ್ರರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ.

ಹಲವು ವರ್ಷಗಳ ನಂತರ ಭಾನುವಾರ ಶೋಫಿಯಾನ್ ನಲ್ಲಿ ಉಗ್ರನೊಬ್ಬ ಸೆರೆ ಸಿಕ್ಕಿದ್ದ . ಇದೀಗ ಕುಲ್ಗಾಮ್ ನಲ್ಲಿ ಮತ್ತೋರ್ವ ಉಗ್ರ ಸೆರೆಸಿಕ್ಕಿದ್ದಾನೆ.

 J&K: 2 terrorists killed in Kulgam encounter, one arrested

ಭಾನುವಾರ ಸಂಜೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇಲೆ ಕುಲ್ಗಾಮ್ ನ ಖುಡವಾನಿ ಗ್ರಾಮದಲ್ಲಿ ಉಗ್ರರಿಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು.

ಹುಡುಕಾಟದ ವೇಳೆ ಉಗ್ರರು ಸೇನಾಪಡೆಗಳ ಮೇಲೆ ದಾಳಿ ಆರಂಭಿಸಿದ್ದು ಭದ್ರತಾ ಪಡೆಗಳ ಪ್ರತಿದಾಳಿಗೆ ಉಗ್ರರು ಅಸುನೀಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two terrorists of the Hizbul Mujahideen have been killed in an encounter at Kulgam, Jammu and Kashmir. One terrorist has been arrested following the encounter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ