Get Updates
Get notified of breaking news, exclusive insights, and must-see stories!

ಉಗ್ರರ ಹೊಡೆದುರುಳಿಸಿದ ಸೇನೆ, ಇಬ್ಬರು ಭಾರತೀಯ ಯೋಧರು ಹುತಾತ್ಮ

ಜಮ್ಮು-ಕಾಶ್ಮೀರದ ನೌಘಾಂ ವಲಯದಲ್ಲಿ ಶನಿವಾರ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರ ಪೈಕಿ ಇಬ್ಬರನ್ನು ಹೊಡೆದುರುಳಿಸಲು ಭಾರತೀಯ ಸೇನೆ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ

ಶ್ರೀನಗರ್, ಮೇ 20: ಜಮ್ಮು-ಕಾಶ್ಮೀರದ ನೌಘಾಂ ವಲಯದಲ್ಲಿ ಶನಿವಾರ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರ ಪ್ರಯತ್ನವನ್ನು ತಡೆಯುವಾಗ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಜತೆಗೆ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆಯು ಯಶಸ್ವಿಯಾಗಿದೆ.

ಈ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ತಮ್ಮ ಪ್ರಾಣ ಬಲಿ ಕೊಟ್ಟಿದ್ದು, ಸದ್ಯಕ್ಕೆ ಆಪರೇಷನ್ ಮುಂದುವರಿದಿದೆ ಎಂದು ವರದಿಯಾಗಿದೆ. ಗುರುವಾರವಷ್ಟೇ ಶ್ರೀನಗರದಲ್ಲಿ ಉಗ್ರರು ಮಾಡಿದ ಗ್ರೆನೇಡ್ ದಾಳಿಯಲ್ಲಿ ಓರ್ವ ಪೊಲೀಸ್ ಹಾಗೂ ನಾಗರಿಕನಾಗಿ ಗಾಯಗಳಾಗಿದ್ದವು. ಸಫಾ ಕದಲ್ ನ ಪೊಲೀಸ್ ಠಾಣೆ ಮೇಲೆ ಉಗ್ರರು ದಾಳಿ ನಡೆಸಿದ್ದರು.[ಪಾಕ್ ದುಸ್ಸಾಹಸಕ್ಕೆ ತಿರುಗೇಟು ನೀಡಲು ಸಿದ್ಧವಾಗಿರಿ: ಅರುಣ್ ಜೇಟ್ಲಿ]

Jammu and Kashmir

ಇನ್ನು ಶನಿವಾರದ ದಾಳಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ ಸಮೀರ್ ಅಹ್ಮದ್ ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ಪೊಲೀಸ್ ಕಂಟ್ರೋಲ್ ರೂಮ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಪಾಕ್ ಸೇನೆಯಿಂದ ಅಪ್ರಚೋದಿತ ದಾಳಿ ನಡೆದಿದ್ದು, ನಾಗರಿಕರನ್ನು ಸುರಕ್ಷತಾ ಕ್ರಮವಾಗಿ ಈ ವಾರ ಸ್ಥಳಾಂತರಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+