ITR Filing: ಕೊನೆ ಕ್ಷಣದಲ್ಲಿ ಐಟಿಆರ್ ಫೈಲಿಂಗ್‌ಗೆ ₹5,000 ದಂಡ! AI ಬಳಸಿದವರಿಗೆ ನೋಟಿಸ್

ITR: ವಾರ್ಷಿಕ ಆದಾಯ, ತೆರಿಗೆ ಕುರಿತ ಕುರಿತು ಆದಾಯ ತೆರಿಗೆ ಇಲಾಖೆ ನೀಡುವ '
ಆದಾಯ ತೆರಿಗೆ ರಿಟರ್ನ್ಸ್ (ITR)' ಸಲ್ಲಿಕೆ ನಿಯಮಗಳಲ್ಲಿ ಒಂದಷ್ಟು ಬದಲಾವಣೆ ಆಗಿದೆ. ಐಟಿಆರ್ ಸಲ್ಲಿಸುವವರು ನಿಗದಿಪಡಿಸಿದ ಅವಧಿ (ಗಡುವು) ಒಳಗೆ ಸಲ್ಲಿಸಲು ಕಠಿಣತೆ ನಿಯಮ ತರಲಾಗಿದ್ದು, ದೇಶದಲ್ಲಿ ಹೆಚ್ಚು ಚರ್ಚೆ ಹುಟ್ಟು ಹಾಕಿದೆ. ಇತ್ತ AI ಬಳಸಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ವ್ಯಕ್ತಿಗೆ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಿದ್ದು ಆನ್‌ಲೈನ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಠಿಣ ನಿಯಮ ಜಾರಿಗೆ ಬಂದ ಬಳಿಕ ಇತ್ತೀಚೆಗೆ ಎರಡೂವರೆ ಗಂಟೆ ತಡವಾಗಿ ಐಟಿಆರ್ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 5,000 ರೂಪಾಯಿ ದಂಡ ವಿಧಿಸಲಾಗಿದೆ. ಈ ವಿಚಾರ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ತೀವ್ರ ಚರ್ಚೆಗೆ ನಾಂದಿ ಹಾಡಿತು. ಒಟ್ಟು 850 ರೂಪಾಯಿ ತೆರಿಗೆ ಕಟ್ಟಬೇಕಿದ್ದ ವ್ಯಕ್ತಿಗೆ 5,850 ರೂ. ವಿಧಿಸಲಾಯಿತು ಎಂದು ಪೂಜಾ ಎಂಬುವವರು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ನೋಡಿದ ಬಳಕೆದಾರರು ಇಂತಹ ಕಠಿಣ ನಿಯಮಗಳು ಯಾರಿಗೆ ಅನುಕೂಲ ಆಗಲು? ಎಂದು ಕೆಲವರು ಪ್ರಶ್ನಿಸಿದ್ದಾರೆ.

ITR Filing

ಎಕ್ಸ್ ಪೋಸ್ಟ್ ಪ್ರಕಾರ, ವ್ಯಕ್ತಿಯೊಬ್ಬರು ಇದೇ ಮೊದಲ ಬಾರಿಗೆ ತಮ್ಮ ತಾಯಿಯ ಐಟಿಆರ್ ಸಲ್ಲಿಸಿದರು. ಆದಾಯದ ವಿವರಗಳಲ್ಲಿ ಯಾವ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಒಂದಷ್ಟು ಅಗತ್ಯ ಮಾಹಿತಿವುಳ್ಳ ದಾಖಲೆಗಳು ಸಿಕ್ಕಿರಲಿಲ್ಲ. ಅವು ಸಿಕ್ಕು ಮಾಹಿತಿ ನಮೂದಿಸಿ ಸಲ್ಲಿಕೆ ಮಾಡುವಷ್ಟರಲ್ಲಿ ತಡವಾಗಿತ್ತು. ಆದಾಯ ತೆರಿಗೆ ಇಲಾಖೆ ಪೋರ್ಟಲ್‌ಗೆ ಲಾಗಿನ್ ಮಾಡುವ ಹೊತ್ತಿಗೆ ನಿಗದಿಪಡಿಸಿದ ಗಡುವು ಮುಗಿದಿತ್ತು. 150 ನಿಮಿಷ ತಡವಾಗಿದ್ದಕ್ಕೆ, ಲೇಟ್ ಫೀಡ್ ಎಂದು ಸ್ವಯಂ ಜನರೇಟ್‌ ಮೂಲಕ 5,000 ರೂಪಾಯಿ ದಂಡ ಸೇರಿ ಪಾವತಿಸುವಂತೆ ಸೂಚಿಸಿದೆ.

ಭಾರೀ ತೆರಿಗೆ ಹೇರಿಕೆಗೆ ಆಕ್ಷೇಪ!

ಇಷ್ಟು ಸಣ್ಣ ವಿಳಂಬಕ್ಕೆ ಸಾವಿರಾರು ರೂಪಾಯಿ ದಂಡ ಸರಿಯಲ್ಲ. ಮೊದಲ ಬಾರಿಗೆ ತೆರಿಗೆ ಫೈಲ್ ಮಾಡುವವರಿಗೆ, ತಾಂತ್ರಿಕ ಕಾರಣಗಳಿಂದ ವಿಳಂಬವಾದರೆ ವಿನಾಯಿತಿ ನೀಡದಿರುವ ಸರ್ಕಾರದ ಕ್ರಮವನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ನಿಯಮಗಳು ಅನುಕೂಲಕರವಗಿರಬೇಕೇ ಹೊರತು ಜನರನ್ನು ಶಿಕ್ಷಿಸುವಂತಲ್ಲ ಎಂದಿದ್ದಾರೆ. ಈ ಬಗ್ಗೆ ನಿರಂತರ ಚರ್ಚೆಗಳು ಮುಂದುವರಿದಿವೆ.

ಐಟಿಆರ್ ಸಲ್ಲಿಕೆಗೆ ಸರ್ಕಾರವು ಸಾಕಷ್ಟು ತಿಂಗಳುಗಳ ಮುಂಚೆಯೇ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಹೀಗಿದ್ದೂ ಕೊನೆಯ ಕ್ಷಣದವರೆಗೂ ಕಾಯುವುದು ಸರಿಯಲ್ಲ ಎಂದು ಐಟಿ ಇಲಾಖೆ ಪ್ರತಿಕ್ರಿಯಿಸಿ. ನಿಗದಿತ ಅವಧಿಯಲ್ಲಿ ಐಟಿ ಸಲ್ಲಿಕೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದು ತಿಳಿಸಿದೆ.

AI ಬಳಸಿ ಐಟಿಆರ್, ನೋಟಿಸ್ ಜಾರಿ

ಕೃತಕ ಬುದ್ಧಿಮತ್ತೆ ಬಳಸಿ ವ್ಯಕ್ತಿಯೊಬ್ಬರು ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಿದ್ದಾರೆ. ಹೀಗೆ ಮಾಡುತ್ತಿದ್ದಂತೆ ಅವರಿಗೆ ನೋಟಿಸ್ ಬಂದಿದ್ದು, ವ್ಯಕ್ತಿ ಗಾಬರಿಯಾಗಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಚಾರ್ಟ್‌ಡ್ ಅಕೌಂಟೆಂಟ್ (ಸಿಎ) ಒಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಎಐ ಬಳಕೆ ಬಳಿಕ ನೋಟಿಸ್ ಪಡೆ ವ್ಯಕ್ತಿಗೆ ತಮ್ಮನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದಾರೆ ಎಂದು ವಾಟ್ಸಾಪ್ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇದು ಸಹ ಎಐ ಬಳಕೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

ವೈರಲ್ ಎಕ್ಸ್ ಪೋಸ್ಟ್ ಪ್ರಕಾರ, ಸಿಎ ತಮ್ಮ ಕ್ಲೈಂಟ್ ಜೊತೆಗಿನ ಸಂಭಾಷಣೆ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ ಅಂತಲೂ ಭಾವಿಸಲಾಗಿದೆ. ಅದರಲ್ಲಿ ಆ ವ್ಯಕ್ತಿ ' ನಮಸ್ತೆ ಸರ್. ನನಗೆ ತೆರಿಗೆ ತಜ್ಞರ ಸಹಾಯ ಬೇಕಿದೆ. ಅದಕ್ಕಿ ಇವರು ಸಮಸ್ಯೆ ತಿಳಿಸಿ, ನಿಮಗೆ ನಾವು ಸಹಾಯ ಮಾಡುತ್ತೇವೆ ಎಂದಿದ್ದಾರೆ. ಐಟಿಆರ್ ನೋಟಿಸ್ ಕುರಿತು, ನಾನು ಎಐ ಬಳಸಿ ಐಟಿಆರ್ ಸಲ್ಲಿಸಿದೆ. ಈಗ ನನಗೆ ತೆರಿಗೆ ನೋಟಿಸ್ ಬಂದಿದೆ' ಎಂದು ಅವರು ಸಹಾಯ ಕೋರಿದ್ದರು ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ನೆಟ್ಟಿಗರು ಹೇಳಿದ್ದೇನು?

ಪೋಸ್ಟ್ ನೋಡಿದ ನೆಟ್ಟಿಗರು, ಎಐ ತಂತ್ರಜ್ಞಾನವನ್ನು ಯಾವುದಕ್ಕೆ ಬಳಸಬೇಕು, ಯಾವಾಗ ಬಳಸಬಾರದು ಎಂಬ ಜ್ಞಾನ, ತಿಳುವಳಿಕೆ ಮುಖ್ಯವಾಗಿರುತ್ತದೆ. ಅದರಲ್ಲೂ ಆರ್ಥಿಕ ವಿಷಯದಲ್ಲಿ, ತೀರಾ ವೈಯಕ್ತಿಕ ವಿಷಯಕ್ಕಾಗಿ ಎಐ ಬಳಸಬಾರದು. ಐಟಿಆರ್ ಸರಳ ಪ್ರಕ್ರಿಯೆ ಆಗಿದ್ದು, ಅದಕ್ಕೆ ಎಐ ಏಕೆ ಬೇಕೆಂದು? ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇದು ಎಐ ಸಮಸ್ಯೆ ಅಲ್ಲ. ಎಐ ಅನ್ನು ಹೇಗೆ ಬಳಸಬೇಕು ಎಂಬುದರ ಆಧಾರದಲ್ಲಿ ಸಮಸ್ಯೆ ಅಡಗಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+