ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೆಶರ್‌ಗಳ ಆಫರ್ ಲೆಟರ್ ರದ್ದುಗೊಳಿಸಿದ ವಿಪ್ರೋ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ!

|
Google Oneindia Kannada News

ನವದೆಹಲಿ, ಅ.05: ಕೆಪಿಎಂಜಿಯ ವರದಿಯ ಪ್ರಕಾರ ಶೇ. 39 ಪ್ರತಿಶತ ಸಿಇಒಗಳು ನೇಮಕಾತಿ ಸ್ಥಗಿತಗೊಳಿಸಿದ್ದಾರೆ ಎಂಬ ಸುದ್ದಿಯ ನಡುವೆಯೇ, ಪ್ರತಿಷ್ಠಿತ ವಿಪ್ರೋ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಕಂಪನಿಗಳು ಆಫರ್ ಲೆಟರ್‌ಗಳನ್ನು ನೀಡಿದ ನಂತರ ಫ್ರೆಶರ್‌ಗಳನ್ನು ತಿರಸ್ಕರಿ, ಅನೇಕ ನೇಮಕಾತಿಗಳನ್ನು ರದ್ದುಗೊಳಿಸಿವೆ ಎಂಬ ಅಂಶ ಹೊರ ಬಂದಿದೆ.

ವಿಪ್ರೋ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಸೇರಿದಂತೆ ಐಟಿ ಕಂಪನಿಗಳು ತಮ್ಮ ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ತಿಂಗಳುಗಟ್ಟಲೆ ವಿಳಂಬಗೊಳಿಸಿದ ನಂತರ ಅನೇಕ ಅಭ್ಯರ್ಥಿಗಳ ಆಫರ್ ಲೆಟರ್‌ಗಳನ್ನು ಹಿಂತೆಗೆದುಕೊಂಡಿವೆ ಎಂದು ವರದಿಯಾಗಿದೆ.

ಹೊಸ ನೇಮಕಾತಿಗಳಿಗೆ ಬ್ರೇಕ್‌ ಹಾಕಿದ ಶೇ. 39ರಷ್ಟು ಸಿಇಒಗಳುಹೊಸ ನೇಮಕಾತಿಗಳಿಗೆ ಬ್ರೇಕ್‌ ಹಾಕಿದ ಶೇ. 39ರಷ್ಟು ಸಿಇಒಗಳು

ವರದಿಗಳ ಪ್ರಕಾರ, ಪ್ರಮುಖ ಟೆಕ್ ಕಂಪನಿಗಳಿಂದ ಆಫರ್‌ ಲೆಟರ್‌ ಪಡೆದಿದ್ದ ನೂರಾರು ಫ್ರೆಶರ್‌ಗಳು, ಕೆಲಸಕ್ಕೆ ಸೇರುವ ಪ್ರಕ್ರಿಯೆಯಲ್ಲಿ ಸುಮಾರು 3 ರಿಂದ 4 ತಿಂಗಳ ವಿಳಂಬದ ನಂತರ ತಮ್ಮ ಆಫರ್ ಲೆಟರ್‌ಗಳನ್ನು ರದ್ದುಗೊಳಿಸಿರುವುದು ಗಮನಿಸಿದ್ದಾರೆ.

IT Companies Reject Freshers After Giving Them Offer Letters

ಬಿಸಿನೆಸ್‌ಲೈನ್‌ನ ಇತ್ತೀಚಿನ ವರದಿಯು ಐಟಿ ಸಂಸ್ಥೆಗಳು - ಇನ್ಫೋಸಿಸ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ - ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ತಿಂಗಳುಗಟ್ಟಲೆ ವಿಳಂಬಗೊಳಿಸಿದ ನಂತರ ವಿದ್ಯಾರ್ಥಿಗಳಿಗೆ ನೀಡಲಾದ ಆಫರ್ ಲೆಟರ್‌ಗಳನ್ನು ಹಿಂತೆಗೆದುಕೊಂಡಿವೆ ಎಂದು ಬಹಿರಂಗಪಡಿಸಿದೆ.

ಸುಮಾರು 3-4 ತಿಂಗಳ ಹಿಂದೆ ಉನ್ನತ ಟೆಕ್ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವುದಾಗಿ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಹಲವು ಸುತ್ತಿನ ಸಂದರ್ಶನಗಳ ನಂತರ, ಅವರು ಆಫರ್ ಲೆಟರ್‌ಗಳನ್ನು ಸ್ವೀಕರಿಸಿದ್ದರು. ಕೆಲಸಕ್ಕೆ ಸೇರುವ ಪ್ರಕ್ರಿಯೆಗಾಗಿ ಕಾಯುತ್ತಿದ್ದರು. ಆದರೆ, ಐಟಿ ಸಂಸ್ಥೆಗಳಿಂದ ಕೆಲಸಕ್ಕೆ ತೆಗೆದುಕೊಳ್ಳವ ಪ್ರಕ್ರಿಯೆಯು ತಿಂಗಳುಗಟ್ಟಲೆ ವಿಳಂಬವಾಗಿತ್ತು. ಇದರ ನಂತರ ತಮ್ಮ ಉದ್ಯೋಗ ಪತ್ರಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳಿಗೆ ಪತ್ರ ಬಂದಿದೆ. ಅರ್ಹತಾ ಮಾನದಂಡಗಳು ಮತ್ತು ಕಂಪನಿಯ ಮಾರ್ಗಸೂಚಿಗಳ ಆಧಾರದ ಮೇಲೆ ಟೆಕ್ ಕಂಪನಿಗಳು ತಮ್ಮ ಆಫರ್ ಲೆಟರ್‌ಗಳನ್ನು ಹಿಂತೆಗೆದುಕೊಂಡಿವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

IT Companies Reject Freshers After Giving Them Offer Letters

"ನೀವು ನಮ್ಮ ಶೈಕ್ಷಣಿಕ ಅರ್ಹತೆಯ ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂದು ಗುರುತಿಸಲಾಗಿದೆ" ಎಂದು ಕೆಲಸಕ್ಕಾಗಿ ಆಫ್ರ ಲೆಟರ್ ಹಿಡಿದು ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.

ಐಟಿ ಸಂಸ್ಥೆಗಳು ತಮ್ಮ ಆಫರ್ ಲೆಟರ್‌ಗಳನ್ನು ಹಿಂಪಡೆಯುವ ಮತ್ತು ನೇಮಕಾತಿಗಳನ್ನು ಸ್ಥಗಿತಗೊಳಿಸುವ ಸುದ್ದಿಯು ಪ್ರಪಂಚದಾದ್ಯಂತ ಐಟಿ ಉದ್ಯಮದಲ್ಲಿ ಮಂದಗತಿಯಲ್ಲಿ ಚರ್ಚೆಯಾಗುತ್ತಿರುವ ಸಮಯದಲ್ಲಿ ಈ ವಿಚಾರವೂ ಹೊರಬಂದಿದೆ.

ಹಣದ ಪೂರೈಕೆಯನ್ನು ಬಿಗಿಗೊಳಿಸುತ್ತಿರುವುದರಿಂದ ಪ್ರಪಂಚದಾದ್ಯಂತ ಬಡ್ಡಿದರಗಳು ಏರುತ್ತಿವೆ. ಐಟಿ ಜಗತ್ತಿನಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಲಭ್ಯವಿರುವ ಸುಲಭ ಹಣದ ಪೂರೈಕೆಯು ಬತ್ತಿಹೋಗುತ್ತಿದೆ ಎಂಬುದು ಚರ್ಚೆಯಾಗಿದೆ. ಇದು ಎಲ್ಲಾ ಐಟಿ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಿದೆ. ತಿಂಗಳ ಹಿಂದಿನ ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ದಶಕಗಳಿಂದ ವ್ಯಾಪಾರ ಮಾಡುತ್ತಿರುವ ಟೆಕ್ ಕಂಪನಿಗಳ ಮೇಳು ಪ್ರಭಾವ ಬೀರಿದೆ.

IT Companies Reject Freshers After Giving Them Offer Letters

ಪ್ರತಿಕೂಲ ವ್ಯಾಪಾರ ಪರಿಸ್ಥಿತಿಗಳು ಅನೇಕ ಕಂಪನಿಗಳು ನೇಮಕಾತಿ ಸ್ಥಗಿತಗೊಳಿಸುವುದಕ್ಕೆ ಕಾರಣವಾಗಿವೆ. ಗೂಗಲ್, ಫೇಸ್‌ಬುಕ್ ಮತ್ತು ಮೈಕ್ರೋಸಾಫ್ಟ್‌ನಂತಹ ದೊಡ್ಡ ದೊಡ್ಡ ಕಂಪನಿಗಳು ಸಹ ಹೊಸ ನೇಮಕಾತಿಗಳನ್ನು ತಡೆಹಿಡಿದಿದ್ದಾರೆ. ಲಭ್ಯವಿರುವ ಸಂಪನ್ಮೂಲಗಳನ್ನು ಉತ್ತಮ ರೀತಿಯಲ್ಲಿ ಬಳಸಲು ತಮ್ಮ ತಂಡಗಳಿಗೆ ಆದೇಶಿಸಿದ್ದಾರೆ.

ಭಾರತೀಯ ಐಟಿ ಕಂಪನಿಗಳಿಗೆ ಸಂಬಂಧಿಸಿದಂತೆ, ಈ ಹಿಂದೆಯೂ ಹಲವಾರು ವರದಿಗಳು ಐಟಿ ಸಂಸ್ಥೆಗಳು ಹೊಸ ನೇಮಕಾತಿ ಪ್ರಕ್ರಿಯೆಯನ್ನು 3-4 ತಿಂಗಳು ವಿಳಂಬಗೊಳಿಸುತ್ತಿವೆ ಎಂದು ಬಹಿರಂಗಪಡಿಸಿದೆ.

English summary
IT companies including Wipro, Infosys and Tech Mahindra reject freshers after giving them offer letters, cancel many hirings. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X