ಅಬ್ಬಬ್ಬಾ ಇಸ್ರೋ, ಒಂದೇ ಬಾರಿಗೆ 22 ಉಪಗ್ರಹ ಉಡಾವಣೆ

Subscribe to Oneindia Kannada

ತಿರುವನಂತಪುರ, ಮಾರ್ಚ್, 29: ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ) ಪ್ರತಿ ದಿನ ಹೊಸ ಹೊಸ ಸಾಧನೆಗಳ ಗರಿಯನ್ನು ತನ್ನದಾಗಿಸಿಕೊಳ್ಳುತ್ತಿದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಉಪಗ್ರಹ ಉಡಾವಣೆಗೆ ಭಾರತದ ಬಳಿ ಬರುತ್ತಿವೆ. ಮಂಗಳಯಾನದ ಯಶಸ್ಸಿನ ನಂತರ ಇಸ್ರೋ ಬಳಿ ನೆರವು ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಿದೆ.[ಮಂಗಳನ ಅಂಗಳದಲ್ಲಿ ಭಾರತ-ಅಮೆರಿಕ ಜುಗಲ್ ಬಂದಿ]

ಮೇ ತಿಂಗಳಲ್ಲಿ ಇಡೀ ಒಂದೇ ರಾಕೆಟ್ ಬಳಸಿ ಇಸ್ರೋ 22 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ. ಇವುಗಳಲ್ಲಿ ಮೈಕ್ರೋ ಹಾಗೂ ನ್ಯಾನೋ ಉಪಗ್ರಹಗಳು ಸೇರಿವೆ. ಅತಿ ಕಡಿಮೆ ವೆಚ್ಚದಲ್ಲಿ ಮಂಗಳನ ಅಂಗಳಕ್ಕೆ ಉಪಗ್ರಹ ಕಳಿಸಿದ ಸಾಧನೆ ಮೆರೆದ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಬಳಿ ರಷ್ಯಾ ಸೇರಿದಂತೆ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ನೆರವು ಕೇಳಿಕೊಂಡು ಬರುತ್ತಿವೆ. ತಿಂಗಳ ಹಿಂದೆ ರಷ್ಯಾದ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿ ಸೈ ಎನಿಸಿಕೊಂಡಿತ್ತು.

ಪಿಎಸ್‌ಎಲ್‌ವಿ ಸಿ34

ಪಿಎಸ್‌ಎಲ್‌ವಿ ಸಿ34

ಭಾರತದ ರಿಮೋಟ್ ಸೆನ್ಸಿಂಗ್ ಕಾರ್ಟೊಸ್ಯಾಟ್ 2ಸಿ ಸೇರಿದಂತೆ ಅಮೆರಿಕ, ಕೆನಡಾ, ಇಂಡೋನೇಷ್ಯಾ ಮತ್ತು ಜರ್ಮನಿಗೆ ಸೇರಿದಂತೆ ಒಟ್ಟು 22 ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಸಿ34 ಹೊತ್ತೊಯ್ಯಲಿದೆ.

ಉಪಗ್ರಹಗಳ ತೂಕ

ಉಪಗ್ರಹಗಳ ತೂಕ

22 ಉಪಗ್ರಹಗಳ ಪೈಕಿ 4ರಿಂದ 30 ಕೆ.ಜಿ ವಿಭಾಗಕ್ಕೆ ಸೇರಿದ 17 ನ್ಯಾನೋ ಹಾಗೂ 85ರಿಂದ 130ಕೆ.ಜಿ ವಿಭಾಗಕ್ಕೆ ಸೇರಿದ ನಾಲ್ಕು ಮೈಕ್ರೋ ಉಪಗ್ರಹಗಳು ಸೇರಿದಂತೆ ಭಾರತದ ಕಾರ್ಟೊಸ್ಯಾಟ್ ಇರಲಿದೆ.

ಹೊಸ ದಾಖಲೆ

ಹೊಸ ದಾಖಲೆ

ಇಸ್ರೋ 2008 ರಲ್ಲಿ ಒಂದೇ ಸಾರಿ 10 ಉಪಗ್ರಹಗಳನ್ನು ಉಡಾವಣೆ ಮಾಡಿರುವುದು ಇದುವರೆಗಿನ ದಾಖಲೆಯಾಗಿತ್ತು. ಈಗ ಹೊಸ ಸಾಧನೆ ಮಾಡಲು ವೇದಿಕೆ ಸಿದ್ಧವಾಗಿದೆ.

ಎಲ್ಲಿಂದ ಉಡಾವಣೆ

ಎಲ್ಲಿಂದ ಉಡಾವಣೆ

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ ಮಾಡಲಾಗುತ್ತದೆ.

ನಾಸಾ ಏನು ಕಡಿಮೆ ಇಲ್ಲ

ನಾಸಾ ಏನು ಕಡಿಮೆ ಇಲ್ಲ

013ನೇ ಸಾಲಿನಲ್ಲಿ ನಾಸಾ ಏಕಕಾಲಕ್ಕೆ 29 ಉಪಗ್ರಹಗಳನ್ನು ಉಡಾವಣೆ ಮಾಡಿರುವುದು ಸದ್ಯದ ದಾಖಲೆ.

ಯಾವ ಉಪಗ್ರಹಗಳು

ಯಾವ ಉಪಗ್ರಹಗಳು

ಇಸ್ರೋ ಉಡಾವಣೆ ಮಾಡಲಿರುವ ಕೆಲವು ಮಹತ್ವದ ವಿದೇಶ ಉಪಗ್ರಹಗಳು: ಲ್ಯಾಪಾನ್ ಎ3 - ಇಂಡೋನೇಷ್ಯಾ, ಬೈರೊಸ್ - ಜರ್ಮನಿ, ಸ್ಕೈಸ್ಯಾಟ್ ಜೆನ್ 2-1 - ಅಮೆರಿಕ, ಎಂವಿವಿ - ಜರ್ಮನಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India is all set to script history by launching a record number of 22 satellites, including a number of micro and nano ones from foreign countries, in a single mission in May this year. The Indian Space Research Organisation (ISRO)'s workhorse Polar rocket PSLV C34 carrying India's Cartosat 2C would also have 21 other satellites from countries, including US, Canada, Indonesia and Germany as co-passengers.
Please Wait while comments are loading...