• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಗನಕ್ಕೇರಿದ ಕಾರ್ಟೋಸ್ಯಾಟ್-3 ಉಪಗ್ರಹ: ಇಸ್ರೋದ ಹೊಸ ದಾಖಲೆ

|

ಶ್ರೀಹರಿಕೋಟಾ, ನವೆಂಬರ್ 27: ಭೂಸರ್ವೇಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಕಾರ್ಟೋಸ್ಯಾಟ್-3 ಉಪಗ್ರಹವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಇಸ್ರೋ ಬುಧವಾರ ಬೆಳಿಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿತು.

ಕಾರ್ಟೋಸ್ಯಾಟ್-3 ಜತೆಗೆ ಅಮೆರಿಕದ 13 ನ್ಯಾನೋ ಉಪಗ್ರಹಗಳನ್ನು ಕೂಡ ಉಡಾವಣೆ ಮಾಡಲಾಯಿತು. ಶ್ರೀಹರಿಕೋಟಾದ ಎರಡನೆಯ ಲಾಂಚ್‌ ಪ್ಯಾಡ್‌ನಿಂದ ಬೆಳಿಗ್ಗೆ 9.28ರ ವೇಳೆಗೆ ಈ ಸರಣಿಯ ಒಂಬತ್ತನೇ ಉಪಗ್ರಹವಾದ ಕಾರ್ಟೋಸ್ಯಾಟ್-3 ಅನ್ನು ಉಡಾವಣೆ ಮಾಡಲಾಯಿತು.

ಈ ಉಪಗ್ರಹಗಳನ್ನು ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್‌ ವೆಹಿಕಲ್-ಎಕ್ಸ್‌ಎಲ್ (ಪಿಎಸ್‌ಎಲ್‌ವಿ-ಎಕ್ಸ್‌ಎಲ್) ಮೂಲಕ ಹಾರಿಬಿಡಲಾಯಿತು. ಈ ರಾಕೆಟ್ 44.4 ಮೀಟರ್ ಉದ್ದವಿದ್ದು, 320 ಟನ್ ತೂಕವಿದೆ. ಮೋಡದ ವಾತಾವರಣವಿದ್ದರೂ ಯಾವುದೇ ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಲಾಗಿದೆ.

ಚಂದ್ರಯಾನದ ಬಳಿಕ ರಕ್ಷಣಾ ಕ್ಷೇತ್ರಕ್ಕಾಗಿ ಹೊಸ ಹೆಜ್ಜೆ ಇರಿಸಿದ ಇಸ್ರೋ

ಜುಲೈ 22ರಂದು ಮಾಡಲಾದ ಚಂದ್ರಯಾನ -2ರ ಭಾಗಶಃ ಯಶಸ್ವಿ ಉಡಾವಣೆಯ ಬಳಿಕ ಇಸ್ರೋ ನಡೆಸಿರುವ ಮೊದಲ ಬಾಹ್ಯಾಕಾಶ ಯೋಜನೆ ಇದಾಗಿದೆ. ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಹಗುರವಾಗಿ ಚಂದ್ರನ ಮೇಲೆ ಇಳಿದು ಕಾರ್ಯಾಚರಣೆ ನಡೆಸುವಲ್ಲಿ ವಿಫಲವಾಗಿದ್ದರೂ, ಅದರ ಆರ್ಬಿಟರ್ ಐದು ವರ್ಷ ಕಾಲ ಚಂದ್ರನ ಕಕ್ಷೆಯಲ್ಲಿ ಸುತ್ತಾಡಿ ಕಾರ್ಯ ನಿರ್ವಹಿಸಲಿದೆ.

ಐದು ವರ್ಷ ಜೀವಿತಾವಧಿ

ಐದು ವರ್ಷ ಜೀವಿತಾವಧಿ

ಕಾರ್ಟೋಸ್ಯಾಟ್-3 ಉಪಗ್ರಹವು ಬೃಹತ್ ಮಟ್ಟದ ನಗರ ಯೋಜನೆಗಳು, ಗ್ರಾಮೀಣ ಸಂಪನ್ಮೂಲಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ, ಕರಾವಳಿ ಭೂ ಬಳಕೆ ಮತ್ತು ಭೂಮಿಯ ಆವರಿಸಿರುವಿಕೆ ಮುಂತಾದವುಗಳಿಗೆ ಅಗತ್ಯವಾದ ಅಧಿಕ ರೆಸೊಲ್ಯೂಷನ್‌ನ ಚಿತ್ರಗಳನ್ನು ರವಾನಿಸಲಿದೆ. 1,625 ಕೆ.ಜಿ. ತೂಕ ಹೊಂದಿದ್ದು, ಭೂಮಿಯ ಕಕ್ಷೆಯಲ್ಲಿ ಸುತ್ತಾಡಿ, ಅಧಿಕ ಗುಣಮಟ್ಟದ ಚಿತ್ರಗಳನ್ನು ರವಾನಿಸಲಿದೆ. ಇದರ ಜೀವಿತಾವಧಿ ಐದು ವರ್ಷಗಳು.

ಅಮೆರಿಕದ 13 ಉಪಗ್ರಹಗಳು

ಅಮೆರಿಕದ 13 ಉಪಗ್ರಹಗಳು

ಭಾರತದ ಬಾಹ್ಯಾಕಾಶ ಇಲಾಖೆಯ ಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಜತೆಗಿನ ಸಹಯೋಗದಲ್ಲಿ ಕಾರ್ಟೋಸ್ಯಾಟ್-3 ಜತೆಗೆ ಅಮೆರಿಕದ ವಾಣಿಜ್ಯ ಉದ್ದೇಶದ 13 ನ್ಯಾನೋ ಸ್ಯಾಟಲೈಟ್‌ಗಳನ್ನು ಕೂಡ ಉಡಾವಣೆ ಮಾಡಲಾಗಿದೆ. ಇವುಗಳಲ್ಲಿ 12 ಉಪಗ್ರಹಗಳು ಭೂ ಸರ್ವೇಕ್ಷಣೆಯ ಉದ್ದೇಶ ಹೊಂದಿದ್ದರೆ, ಎಂಇಎಸ್‌ಎಚ್‌ಬಿಇಡಿ ಎಂಬ ಉಪಗ್ರಹ ಸಂವಹನ ಪರೀಕ್ಷೆಯ ಉದ್ದೇಶ ಹೊಂದಿದೆ.

ಚಂದ್ರಯಾನ 2ರ ಲ್ಯಾಂಡರ್ ವೈಫಲ್ಯ: ಕಾರಣ ವಿವರಿಸಿದ ಸರ್ಕಾರ

310 ವಿದೇಶಿ ಉಪಗ್ರಹಗಳ ಸಾಧನೆ

310 ವಿದೇಶಿ ಉಪಗ್ರಹಗಳ ಸಾಧನೆ

ಇದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹಾರಿಬಿಡಲಾದ 74ನೇ ಉಡಾವಣಾ ವಾಹನ ಯೋಜನೆಯಾಗಿದೆ. ಈ ಉಡಾವಣೆಯ ಮೂಲಕ ಭಾರತವು ತನ್ನ ನೆಲೆಯಿಂದ ಒಟ್ಟು 300ಕ್ಕೂ ಹೆಚ್ಚು ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದ ಮೈಲುಗಲ್ಲು ಕ್ರಮಿಸಿದೆ. ಇಲ್ಲಿಯವರೆಗೆ ಇಸ್ರೋ ಮೂಲಕ ಪಿಎಸ್‌ಎಲ್‌ವಿ ರಾಕೆಟ್ ಬಾಹ್ಯಾಕಾಶಕ್ಕೆ 297 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಈ 13 ನ್ಯಾನೋ ಉಪಗ್ರಹಗಳ ಸೇರ್ಪಡೆಯಿಂದ ಅದರ ಸಂಖ್ಯೆ 310ಕ್ಕೆ ಏರಿತು.

ನಾಲ್ಕು ತಿಂಗಳಲ್ಲಿ 13 ಯೋಜನೆಗಳು

ನಾಲ್ಕು ತಿಂಗಳಲ್ಲಿ 13 ಯೋಜನೆಗಳು

ಇತರೆ 13 ಉಪಗ್ರಹಗಳ ಜತೆಗೆ ಪಿಎಸ್‌ಎಲ್‌ವಿ-ಸಿ47ಅನ್ನು ಸುಗಮವಾಗಿ ಆರ್ಬಿಟ್‌ಗೆ ಸೇರಿಸಿರುವುದು ಖುಷಿ ತಂದಿದೆ. ಕಾರ್ಟೋಸ್ಯಾಟ್-3 ಅಧಿಕ ರೆಸೊಲ್ಯೂಷನ್‌ನ ನಾಗರಿಕ ಉಪಗ್ರಹವಾಗಿದೆ. ಮಾರ್ಚ್‌ವರೆಗೆ ಇಸ್ರೋ ಒಟ್ಟು 13 ಯೋಜನೆಗಳನ್ನು ಹೊಂದಿದೆ. ಇದರಲ್ಲಿ ಆರು ಬೃಹತ್ ವೆಹಿಕಲ್ ಯೋಜನೆಗಳು ಹಾಗೂ ಏಳು ಉಪಗ್ರಹ ಯೋಜನೆಗಳು ಸೇರಿವೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದರು.

ಚಂದ್ರಯಾನ 3ಕ್ಕೆ ಸಿದ್ಧತೆ: ಚಂದ್ರನತ್ತ ಇಸ್ರೋ ಮತ್ತೊಂದು ಹೆಜ್ಜೆ

English summary
ISRO on Wednesday successfully launched the Cartosat-3 and 13 other nano satellites of US from the Satish Dhawan Space Centre at Sriharikota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X